News

ಮಾಸ್ಕ್‌ ದಂಡ 250, 100 ಕ್ಕೆ ಇಳಿಕೆ, ದಂಡಕ್ಕಷ್ಟೆ ವಿನಾಯಿತಿ ಆದರೆ ಮಾಸ್ಕ್ ಬಿಡಬೇಡಿ

08 October, 2020 9:22 AM IST By:

ಮಾಸ್ಕ್ ಧರಿಸದವರಿಂದ ಭಾರೀ ಮೊತ್ತದ ದಂಡ ವಸೂಲಿಗೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯಸರಕಾರವು ದಂಡದ ಪ್ರಮಾಣವನ್ನು ಇಳಿಕೆ ಮಾಡಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದೇ ಓಡಾಡುವವರ ವಿರುದ್ಧ ದಂಡದ ಪ್ರಮಾಣವನ್ನು ನಗರ ಪ್ರದೇಶದಲ್ಲಿ 1,000 ಇದ್ದುದನ್ನು 250 ಕ್ಕೂ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಇದ್ದುದನ್ನು 100 ಕ್ಕೆ ಇಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಮಾಸ್ಕ್ ದಂಡ ವಸೂಲಿಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಪ್ರಭಾವಿಗಳು ಮತ್ತು ರಾಜಕಾರಣಿಗಳ ತಂಟೆಗೆ ಹೋಗುವುದಿಲ್ಲ ಎಂಬ ದೂರೂ ಸಹ ಕೇಳಿಬಂದಿತ್ತು.

ದಂಡದ ಪ್ರಮಾಣ ದುಬಾರಿಯಾಗಿದೆ ಎಂದು ರಾಜ್ಯದ ಎಲ್ಲೆಡೆ ಆಕ್ಷೇಪ ವ್ಯಕ್ತವಾಗಿತ್ತು. ಸಾರ್ವಜನಿಕರಿಗೆ ಹೊರೆಯಾಗುವುದನ್ನು ತಪ್ಪಿಸಲು ದಂಡದ ಪ್ರಮಾಣ ಇಳಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ತಿಳಿಸಿದ್ದಾರೆ.

ಜೀವ ಮತ್ತು ಜೀವನ' ಎರಡನ್ನೂ ಸರಿದೂಗಿಸಿಕೊಂಡ ಹೋಗಲು ‌ಸರ್ಕಾರ ಸರ್ವ ಪ್ರಯತ್ನ ಮಾಡುತ್ತಿದೆ. ಜನರು ಸ್ವಯಂ ಪ್ರೇರಿತರಾಗಿ ಮಾಸ್ಕ್ , ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸಾರ್ವಜನಿಕರ ವಿರೋಧ ಹಾಗೂ ತಜ್ಞರ ಸಲಹೆಯಂತೆ ಈ ದಂಡದ ದರ ಇಳಿಸಲಾಗಿದೆ  ಈ ಮೂಲಕ ಸರ್ಕಾರದೊಂದಿಗೆ ಕೈಜೋಡಿಸುವಂತೆ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ

ಕೊರೊನಾ ನಿಯಂತ್ರಣಕ್ಕಾಗಿ ಮಾಸ್ಕ್‌ ಧರಿಸುವುದನ್ನು ಕಡ್ಡಾಯ ಗೊಳಿಸಿದ್ದರೂ ಜನರು ಅದನ್ನು ಪಾಲಿಸುತ್ತಿರಲಿಲ್ಲ. ದುಬಾರಿ ದಂಡ ವಿಧಿಸುವುದರಿಂದ ಸಾರ್ವಜನಿಕರು ನಿಯಮವನ್ನು ಪಾಲಿಸಬಹುದು ಎಂಬ ಕಾರಣಕ್ಕೆ ದಂಡದ ಪ್ರಮಾಣವನ್ನು ಸರ್ಕಾರ ಹೆಚ್ಚಿಸಿತ್ತು. ಇದೇ 1 ರಿಂದ ಅದನ್ನು ಜಾರಿಗೆ ತರಲಾಗಿತ್ತು.

‘ಜೀವ ಮತ್ತು ಜೀವನ ಸರಿದೂಗಿಸಿ.ಕೊಂಡು ಹೋಗಲು ಸರ್ಕಾರ ಸರ್ವ ಪ್ರಯತ್ನ ನಡೆಸುತ್ತಿದೆ. ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ, ಅಂತರ ಕಾಪಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಆಕ್ಷೇಪ ಮತ್ತು ತಜ್ಞರ ಸಲಹೆಯಂತೆ ದಂಡದ ಮೊತ್ತವನ್ನು ಇಳಿಸಲಾಗಿದೆ’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಆದರೆ ದಂಡ ಕಡಿಮೆಯಾಗಿದೆ, ಕಟ್ಟಿದರಾಯಿತು ಎಂಬ ನಿರ್ಲಕ್ಷ್ಯ ಬೇಡ ಎಂಬುದು ತಜ್ಞರ ಕಳಕಳಿ.ಜನರು ಜವಾಬ್ದಾರಿಯಿಂದ ನಡೆದುಕೊಂಡು ಸ್ವಯಂ ಶಿಸ್ತು ಅಳವಡಿಸಿಕೊಳ್ಳಬೇಕು. ಸೋಂಕಿನ ಕುರಿತು ನಿರ್ಲಕ್ಷ್ಯ ವಹಿಸಿದರೆ ದಂಡ ಕಟ್ಟಲೇಬೇಕಾಗುತ್ತದೆ.