News

ಮಾರುಕಟ್ಟೆಗೆ ಲಗ್ಗೆ ಇಟ್ಟ ಭೀಮಾ ಪಲ್ಸ್ ತೊಗರಿ ಬೇಳೆ!

18 August, 2023 4:16 PM IST By: Maltesh
Govt Launches bhima pulses toor dal

ಕೃಷಿಗೆ ಸಂಬಂಧಿತ ಮಾಹಿತಿ, ಸಲಹೆ ಮಾರ್ಗದರ್ಶನ‌ ಪಡೆಯಲು  'ಏಕೀಕೃತ ರೈತ ಕರೆ' ಕೇಂದ್ರ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದು ಕೃಷಿ ಸಚಿವ ಎನ್‌ ಚಲುವರಾಯಸ್ವಾಮಿ ಅವರು ಹೇಳಿದರು.

ಕೃಷಿ ಇಲಾಖೆಯ, ಕೃಷಿ ಆಯುಕ್ತಾಲಯದಲ್ಲಿ ರೈತ ಕರೆ ಕೇಂದ್ರ ಉದ್ಘಾಟಿಸಿದರು.

ನಂತರ ಸಂಗಮ ಸಭಾಂಗಣದಲ್ಲಿ 2023-2024ನೇ ಸಾಲಿನ ಬೆಳೆ ಸಮೀಕ್ಷೆ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಾಸ್ಟರ್ ತರಬೇತುದಾರರಿಗೆ ಏರ್ಪಡಿಸಿದ್ದ,ʼ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ, ಭೀಮಾ ಪಲ್ಸ್ ತೊಗರಿ ಬೇಳೆ ಬ್ರಾಂಡ್ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬೆಳೆ, ಹವಾಮಾನ, ವಿಮೆ, ರೈತ ವಿದ್ಯಾನಿಧಿ, ಕೃಷಿ ಸಂಜೀವಿನಿ, ಪಿ.ಎಂ.ಕಿಸಾನ್, ಕೆ‌.ಕಿಸಾನ್, ಬೆಳೆ ಸಮೀಕ್ಷೆ ಮತ್ತಿತರ ವಿಷಯಗಳಲ್ಲಿ ಉಪಯುಕ್ತ ಮಾಹಿತಿ, ಸಲಹೆ ಹಾಗೂ ಮಾರ್ಗದರ್ಶನಗಳನ್ನು ಸುಲಭವಾಗಿ ಒದಗಿಸುವುದು ಏಕೀಕೃತ ರೈತ ಕರೆ ಕೇಂದ್ರದ ಉದ್ದೇಶವಾಗಿದೆ.ವ  ಈ ಹಿಂದೆ ವಿವಿಧ ಯೋಜನೆಗಳಿಗೆ ಇದ್ದ 8 ಪ್ರತ್ಯೇಕ ಕರೆ ಸಂಖ್ಯೆಗಳನ್ನು ಒಗ್ಗೂಡಿಸಿ ಏಕೀಕೃತ ಕರೆ ಕೇಂದ್ರ ಸ್ಥಾಪಿಸಲಾಗಿದೆ.

1800-425-3553 ನೂತನ ಏಕೀಕೃತ ಸಹಾಯವಾಣಿ ಕರೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.  ಮಾಹಿತಿ ಹಾಗೂ ತಾಂತ್ರಿಕ ನೆರವಿನ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯ ವರ್ಧನೆಗೂ ಇಲಾಖೆ ಮುಂದಾಗಿದೆ, ಇದರ ಅಂಗವಾಗಿ ಭೀಮಾ ಫಲ್ಸ್ ಎಂಬ ಬ್ರಾಡ್ ತೊಗರಿ ಬೇಳೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

ರೈತರಿಗೆ ಸರ್ಕಾರದ ‌ಯೋಜನೆಗಳು ಸಮರ್ಪಕವಾಗಿ ತಲುಪಲು ಬೆಳೆ ಸಮೀಕ್ಷೆ ಕೂಡ ಪ್ರಮುಖ. ಕ್ಷೇತ್ರ ಮಟ್ಟದಲ್ಲಿ ಸಮೀಕ್ಷೆ ನಡೆಸುವವರಿಗೆ ತಾಂತ್ರಿಕ ಅರಿವು ಹಾಗೂ ಇತರ ಮಾಹಿತಿ ಅಗತ್ಯವಾಗಿದೆ. ಹೀಗಾಗಿ ರಾಜ್ಯ ಮಟ್ಟದಲ್ಲಿ ಬೆಳೆ ಸಮೀಕ್ಷೆ ಮಾಸ್ಟರ್ ತರಬೇತುದಾರರ ತರಬೇತಿ ಹಮ್ಮಿಕೊಳ್ಳಲಾಗಿದ್ದು. ಎಲ್ಲಾ ಅಧಿಕಾರಿ ಸಿಬ್ಬಂದಿ ಜವಾಬ್ದಾರಿಯಿಂದ ರೈತರ ಹಿತ ಗಮ‌ದಲ್ಲಿಟ್ಟು ಸಮೀಕ್ಷೆ ನಡೆಸಬೇಕು ಎಂಬುದನ್ನು ತಿಳಿಸಿದೆ.

ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಜಂಟಿಯಾಗಿ ಬೆಳೆ ಸಮೀಕ್ಷೆ ಕಾರ್ಯದಲ್ಲಿ ‌ತೊಡಗುತ್ತಿವೆ, ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳನ್ನು ತೊಡಗಿಸಿ ಕೊಂಡರೆ ಉತ್ತಮ.ವಈ ಸಮಾರಂಭದಲ್ಲಿ ಕೃಷಿ ಇಲಾಖೆ ಆಯುಕ್ತರಾದ ಶ್ರೀ ವೈ.ಎಸ್. ಪಾಟೀಲ್, ತೋಟಗಾರಿಕೆ ಇಲಾಖೆ ನಿರ್ದೇಶಕರಾದ ಶ್ರೀ ಡಿ.ಎಸ್. ರಮೇಶ್, ರೇಷ್ಮೆ ಅಭಿವೃದ್ಧಿ ಆಯುಕ್ತರಾದ ಶ್ರೀ ರಾಜೇಶ್ ಗೌಡ.ಎಂ.ಬಿ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ನಿರ್ದೆಶಕರಾದ ಶ್ರೀ ಮಾಧುರಾಮ್, ಕೃಷಿ ಇಲಾಖೆ ನಿರ್ದೇಶಕರಾದ ಶ್ರೀ ಪುತ್ರ, ಆಪ್ತ ‌ಕಾರ್ಯದರ್ಶಿ ಶ್ರೀ ಪ್ರಭಾಕರ್ ಮತ್ತಿತರರು ಹಾಜರಿದ್ದರು.