News

ಉಚಿತ ಎಲ್‌ಪಿಜಿ ಸಿಲಿಂಡರ್‌ಗಳು ಬೇಕಿದ್ದರೆ ಸೆ. 30 ರೊಳಗೆ PMUY ಯೋಜನೆಯಡಿ ಅರ್ಜಿ ಸಲ್ಲಿಸಿ...

20 September, 2020 9:19 AM IST By:

ಪ್ರಧಾನಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಅಡಿ ಕೇಂದ್ರ ಸರ್ಕಾರವು ನೀಡುವ ಉಚಿತ ಸಿಲಿಂಡರ್‌ ಫ‌ಲಾನುಭವಿಗಳಾಗಲು ಸೆ. 30 ಕೊನೆಯ ದಿನವಾಗಿದೆ.

ಕೊರೋನಾದಿಂದಾಗಿ ಅರ್ಜಿ ಸಲ್ಲಿಸಲು ತಡವಾಗಿದ್ದರೆ ಕೂಡಲೇ ಅರ್ಜಿ ಸಲ್ಲಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳಿ. ಈ ಹಿಂದೆ ಯೋಜನೆಗೆ ಅರ್ಜಿ ಸಲ್ಲಿಸಲು ಏಪ್ರಿಲ್‌ ತಿಂಗಳು ಕೊನೆಯ ದಿನವಾಗಿತ್ತು. ಆದರೆ ಕೋವಿಡ್ ಲಾಕ್‌ಡೌನ್‌ ಆದ ಕಾರಣ ಕೊನೆಯ ದಿನಾಂಕವನ್ನು ಸೆ. 30ರ ವರೆಗೆ ವಿಸ್ತರಿಸಲಾಯಿತು. ಈಗ ಪರಿಷ್ಕೃತ ಕಡೆಯ ದಿನಾಂಕವೂ ಸಮೀಪವಿದ್ದು, ಯೋಜನೆಯ ಫ‌ಲಾನುಭವಿಗಳಾಗದವರು ಇನ್ನು ಹತ್ತು ದಿನದೊಳಗೆ ಅರ್ಜಿ ಸಲ್ಲಿಸಬಹುದು.

ಉಜ್ವಲ ಯೋಜನೆ ಉದ್ದೇಶ:

2016ರ ಮೇ 1ರಂದು ಉಜ್ವಲ ಯೋಜನೆ ಜಾರಿಗೆ ತರಲಾಗಿದ್ದು, ಹೊಗೆ ರಹಿತ ಅಡುಗೆ ಮನೆ ಪರಿಕಲ್ಪನೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಹಿಳಾ ಸದಸ್ಯರಿಗೆ ಎಲ್​ಪಿಜಿ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ. ಜನಧನ ಖಾತೆಯ ಆಧಾರಲ್ಲಿ ಕುಟುಂಬದ ಮಹಿಳೆ ಸಬ್ಸಿಡಿ ಪಡೆದುಕೊಳ್ಳುತ್ತಾರೆ. ಈ ಯೋಜನೆಯನ್ನು ಉಚಿತವಾಗಿ ಹೇಗೆ ಪಡೆದುಕೊಳ್ಳಬೇಕು ಮತ್ತು ಯಾರೆಲ್ಲ ಈ ಯೋಜನೆಗೆ ಅರ್ಹರು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ,  ಏನೆಲ್ಲ ದಾಖಲಾತಿ ಅಗತ್ಯ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಮುಂದಿನ ಮಾಹಿತಿ ಓದಿ.

ಯೋಜನೆ ಪಡೆಯಲು ಅರ್ಹತೆ:

ಬಿಪಿಎಲ್‌ ಕಾರ್ಡ್‌ ಹೊಂದಿರುವ ಕುಟುಂಬ ಪಿಎಂಯುವೈ ಯೋಜನೆ ಫ‌ಲಾನುಭವಿಯಾಗಲು ಅರ್ಹರಾಗಿದ್ದು,  18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು.  ಆಯಾ ರಾಜ್ಯ ಸರ್ಕಾರಗಳು ನೀಡುವ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ಬಿಪಿಎಲ್ (BPL) ಕಾರ್ಡ್ ಹೊಂದಿರಬೇಕು.  ಎಲ್‌ಪಿಜಿ ಸಂಪರ್ಕವನ್ನು ಮಹಿಳಾ ಫಲಾನುಭವಿಗಳಿಗೆ ನೀಡಲಾಗುವುದು ಮತ್ತು ಅವರ ಹೆಸರಿನಲ್ಲಿ ನೋಂದಾಯಿಸಲಾಗುವುದು.

ದಾಖಲಾತಿಗಳು:

ಬಿಪಿಲ್ ಪಡಿತರ ಚೀಟಿ (ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್) ಝಿರಾಕ್ಸ್,   ಆಧಾರ್ ಕಾರ್ಡ್ ಝಿರಾಕ್ಸ್,  ಚುನಾವಣಾ ಚೀಟಿ,  ಡ್ರೈವಿಂಗ್ ಲೈಸನ್ಸ್,  ಪಾಸ್ಪೋರ್ಟ್ ಇವುಗಳಲ್ಲಿ ಯಾವುದಾದರೊಂದು ದಾಖಲಾತಿ ಝಿರಾಕ್ಸ್ ಇರಬೇಕು. ಬ್ಯಾಂಕಿನ ಅಕೌಂಟ್ ಪಾಸಬುಕ್ ಝಿರಾಕ್ಸ್, ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಎಲ್ಪಿಜಿ ಹಂಚಿಕೆದಾರರ ಕೇಂದ್ರದಲ್ಲಿ ಸಿಗುವ ಅರ್ಜಿಯನ್ನು ತುಂಬಿ ನೀಡಬೇಕು.

ಎಲ್ಪಿಜಿ ಸಂಪರ್ಕ ಹೇಗೆ ಪಡೆಯಬೇಕು?

ಮೊದಲಿಗೆ ಅರ್ಹ ಅರ್ಜಿದಾರರು ಉಜ್ವಲ ಯೋಜನೆಯ ಅಧಿಕೃತ ವೆಬ್‌ಸೈಟ್‌ www.pmujjwalayojana.com ಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬೇಕು. ಯೋಜನೆಗೆ ಸಂಬಂಧಿಸಿದ ಅರ್ಜಿ ನಮೂನೆಯನ್ನು ಡೌನ್‌ಲೋಡ್‌ ಮಾಡಬೇಕು. ಬಳಿಕ ಅರ್ಜಿಯ ಕಾಲಂಗಳಲ್ಲಿ ನಿಗದಿತ, ಸೂಕ್ತ ಮಾಹಿತಿಗಳನ್ನು ಭರ್ತಿ ಮಾಡಬೇಕು. ಅರ್ಜಿದಾರನ ಹೆಸರು, ದಿನಾಂಕ, ಸ್ಥಳ ಮೊದಲಾದ ಎಲ್ಲ ಮಾಹಿತಿಗಳನ್ನು ಭರ್ತಿ ಮಾಡಿದ ಅನಂತರ ಸ್ಥಳೀಯ ಎಲ್‌ಪಿಜಿ ಏಜೆನ್ಸಿಗೆ ಸಲ್ಲಿಸಬೇಕು. ಈ ಎಲ್ಲ ದಾಖಲೆಗಳ ಪರಿಶೀಲನೆಯಾದ ಬಳಿಕ ಅರ್ಜಿದಾರರಿಗೆ ಎಲ್‌ಪಿಜಿ ಗ್ಯಾಸ್‌ ಸಂಪರ್ಕ ಸಿಗಲಿದೆ.
14.2 ಕೆಜಿ ಸಿಲಿಂಡರ್ ಮೇಲೆ 1,600 ರೂಪಾಯಿಗಳ ರಿಯಾಯಿತಿಯು  1,450 ರೂಪಾಯಿ ಭದ್ರತಾ ಠೇವಣಿಯನ್ನು ಒಳಗೊಂಡಿರುತ್ತದೆ. ಜತೆಗೆ ಗ್ಯಾಸ್ ಸ್ಟೋವ್, ISI ಸ್ಟಾಡಂರ್ಡ್ ಪೈಪ್ ಸಹ ನೀಡಲಾಗುವುದು.  ಒಂದು ವೇಳೆ, ಗ್ರಾಹಕರು ಈ 3 ತಿಂಗಳುಗಳ ಅವಧಿಯಲ್ಲಿ ರೀಫಿಲ್‌ ಸಿಲಿಂಡರ್‌ ಪಡೆಯ ದಿದ್ದಲ್ಲಿ,ಈ ಮುಂಗಡ ಹಣವನ್ನು 2021ರ ಮಾರ್ಚ್‌ 31ರ ವರೆಗೆ ಸಿಲಿಂಡರ್‌ ಪಡೆಯಲು ಬಳಸಬಹುದು.