News

kmf ನಿಂದ ಮೆಕ್ಕೆಜೋಳ ಖರೀದಿ

25 December, 2020 7:02 PM IST By:

ಈ ಬಾರಿ ಸರ್ಕಾರದಿಂದ ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳವನ್ನ ಖರೀದಿಸಿಲ್ಲ, ಹಾಗಾಗಿ ಇದೀಗ ರೈತರಿಗೆ ಒಂದು ಒಳ್ಳೆಯ ಅವಕಾಶ ಸಿಕ್ಕಿದ್ದು ಕರ್ನಾಟಕ ಹಾಲು ಸಹಕಾರ ಒಕ್ಕೂಟ(KMF) ರೈತರಿಂದ ಮೆಕ್ಕೆಜೋಳವನ್ನು ಖರೀದಿಸಲು ನಿರ್ಧರಿಸಿದ.

ಕರ್ನಾಟಕ ಹಾಲು ಸಹಕಾರ ಒಕ್ಕೂಟ ಗುಣಮಟ್ಟದ ಮೆಕ್ಕೆಜೋಳವನ್ನು ಖರೀದಿಸಲು ನಿರ್ಧರಿಸಿದ್ದು ಪ್ರತಿ ಕ್ವಿಂಟಲ್ಗೆ ಹದಿನೈದು ನೂರು ರೂಪಾಯಿ ದರವನ್ನು ನಿಗದಿಪಡಿಸಿದೆ, ಇದರೊಂದಿಗೆ ಪ್ರತಿ ಕ್ವಿಂಟಲ್ಗೆ 20  ರೂಪಾಯಿ ಚೀಲದ ರೊಕ್ಕ ವಾಗಿ ಪ್ರತಿ ಕ್ವಿಂಟಲ್ಗೆ ಒಟ್ಟು 1,520 ರೂಪಾಯಿ ಕೊಟ್ಟು ಖರೀದಿ ಮಾಡುತ್ತಿದೆ.

ಪ್ರತಿಯೊಬ್ಬ ರೈತರು ಗರಿಷ್ಠ 50 ಕ್ವಿಂಟಾಲ್ ಗಳವರೆಗೆ ಗೋವಿನಜೋಳವನ್ನು ಕೆಎಂಎಫ್ಗೆ ನೀಡಬಹುದು, ರೈತರು ತಮ್ಮ ಮೆಕ್ಕೆಜೋಳವನ್ನು ಕೆಎಂಎಫ್ಗೆ ಮುಟ್ಟಿಸಿದ 20 ದಿನಗಳ ಒಳಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಮೂಲಕ ರೈತರ ಖಾತೆಗಳಿಗೆ ಹಣವನ್ನು ಜಮೆ ಮಾಡಲಾಗುವುದು.

ನೋಂದಣಿ ಮಾಡಿಸಿದ ರೈತರು ಅಂದರೆ ಇಲಾಖೆಯ ತಂತ್ರಾಂಶದೊಳಗೆ  ನೋಂದಣಿ ಮಾಡಿಸಿದ ರೈತರು ಧಾರವಾಡ ಘಟಕಕ್ಕೆ ಗುಣಮಟ್ಟ ವಾದ ಒಳ್ಳೆಯ ಗೋವಿನಜೋಳವನ್ನು ಸರಬರಾಜು ಮಾಡಬೇಕಾಗುತ್ತದೆ.
 ಹೆಚ್ಚಿನ ಮಾಹಿತಿಗಾಗಿ ಡಾಕ್ಟರ್. ಮಡಿವಾಳರ್ ಜಿಲ್ಲಾ ವ್ಯವಸ್ಥಾಪಕರು ಕೆಎಂಎಫ್, ಮೊಬೈಲ್ ಸಂಖ್ಯೆ -9480682732 ಗೆ ಸಂಪರ್ಕಿಸಿ.