News

“ರೈತರ ಆದಾಯ ದುಪ್ಪಟ್ಟು ಮಾಡುವತ್ತ ಸರ್ಕಾರ ಗಮನಹರಿಸಬೇಕು”- ಕಲ್ಯಾಣ ಗೋಸ್ವಾಮಿ

12 July, 2022 3:31 PM IST By: Kalmesh T
ಅಗ್ರೋ ಕೆಮ್‌ ಫೆಡರೇಷನ್‌ ಆಫ್‌ ಇಂಡಿಯಾದ ಜನರಲ್‌ ಡೈರೆಕ್ಟರ್‌ ಕಲ್ಯಾಣ ಗೋಸ್ವಾಮಿ ಅವರನ್ನು ಸಸಿ ನೀಡಿ ಸ್ವಾಗತಿಸಲಾಯಿತು

ರೈತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಅವರ ಆದಾಯ ದುಪ್ಪಟ್ಟು ಮಾಡುವತ್ತ ಸರ್ಕಾರ ಗಮನಹರಿಸಬೇಕು. ಕಷ್ಟಪಟ್ಟು ದುಡಿದ ರೈತನ ಬೆವರಿಗೆ ಪ್ರತಿಫಲ ದೊರೆಯಬೇಕು ಎಂದು ಅಗ್ರೋ ಕೆಮ್‌ ಫೆಡರೇಷನ್‌ ಆಫ್‌ ಇಂಡಿಯಾದ ಜನರಲ್‌ ಡೈರೆಕ್ಟರ್‌ ಕಲ್ಯಾಣ ಗೋಸ್ವಾಮಿ ಹೇಳಿದರು.

ಇದನ್ನೂ ಓದಿರಿ: ಕೃಷಿ ಜಾಗರಣ ಮತ್ತು ಎಎಫ್‌ಸಿ ಇಂಡಿಯಾ ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು..

ಕೃಷಿ ಜಾಗರಣ ಮಾಧ್ಯಮದ ಕೇಂದ್ರ ಕಚೇರಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ರೈತರ ಆದಾಯ ದುಪ್ಪಟ್ಟು ಆಗುವ ನಿಟ್ಟಿನಲ್ಲಿ ಸರ್ಕಾರಗಳು ಕಾರ್ಯ ನಿರ್ವಹಿಸಬೇಕು. ಆರ್ಥಿಕವಾಗಿ ರೈತರು ಮುನ್ನಡೆ ಹೊಂದುವುದು ಕೂಡ ಇಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿದೆ.

ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸೂಕ್ತವಾದ ಬೆಂಬಲ ಬೆಲೆ, ಮಾರುಕಟ್ಟೆ ದರಗಳು, ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಬೇಕು.

“ತಂತ್ರಜ್ಞಾನ ಎಷ್ಟೇ ಮುಂದುವರೆದರೂ ರೊಟ್ಟಿಯನ್ನು ಗೂಗಲ್‌ನಿಂದ ಡೌನ್ಲೋಡ್ ಮಾಡಿಕೊಳ್ಳಲಾಗುವುದಿಲ್ಲ” ಪ್ರೊ. ಆಂಚಲ್ ಅರೋರಾ

ಅಗ್ರೋ ಕೆಮ್‌ ಫೆಡರೇಷನ್‌ ಆಫ್‌ ಇಂಡಿಯಾದ ಜನರಲ್‌ ಡೈರೆಕ್ಟರ್‌ ಕಲ್ಯಾಣ ಗೋಸ್ವಾಮಿ ಅವರು ಮಾತನಾಡುತ್ತಿರುವುದು

ಹಾಗೂ ರೈತರಿಗೆ ನಿತ್ಯ ಸವಾಲಾಗಿರುವ ದಲ್ಲಾಳಿಗಳ ಹಾವಳಿ, ಕಲಬೆರಕೆ ರಸಗೊಬ್ಬರ, ಕಳಪೆ ಗುಣಮಟ್ಟದ ಬೀಜಗಳ ಮಾರಾಟಗಳನ್ನು ತಡೆಗಟ್ಟಲೂ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

ರೈತನಿಗೆ ಮನುಷ್ಯರಷ್ಟೇ ಅಲ್ಲ ಪ್ರಕೃತಿಯೂ ಕಾಡುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಸೈಕ್ಲೋನ್‌, ಬರಗಳಂತ ಸನ್ನಿವೇಶಗಳಲ್ಲಿ ಸರ್ಕಾರಗಳು ರೈತರ ಬೆನ್ನಿಗೆ ಬೆಂಗಾವಲಾಗಿ ನಿಲ್ಲಬೇಕು.

ಅಷ್ಟೇಲ್ಲಾ ಕಷ್ಟಗಳ ನಡುವೆ ಬೆಳೆ ಬೆಳೆದು ಹಾನಿಯಾಗಿ ರೈತರು ಕೈಸುಟ್ಟುಕೊಂಡಾಗ ಬೆಳೆ ವಿಮೆ, ಬೆಳೆಹಾನಿ ಪರಿಹಾರಗಳನ್ನು ತಡಮಾಡದಂತೆ ನೀಡಬೇಕು ಎಂದರು.

“ಯಶಸ್ಸನ್ನು ಪಡೆಯವುದು ಹೇಗೆ ಎಂಬುದರ ಕುರಿತು ಪ್ರಸಿದ್ಧ ವ್ಯಕ್ತಿ ಟೆಫ್ಲಾ ಕಿಂಗ್ ಕೈಲಾಶ್ ಸಿಂಗ್ ಮಾತುಗಳು..!

ನಂತರ ಮಾತನಾಡಿದ ಕೃಷಿ ಜಾಗರಣ ಮಾಧ್ಯಮದ ಸಂಸ್ಥಾಪಕ ಸಂಪಾದಕರಾದ ಎಂ.ಸಿ.ಡೊಮೆನಿಕ್‌ ಅವರು ಕೃಷಿ ಜಾಗರಣ ಬೆಳೆದು ಬಂದ ಹಾದಿಯ ಕುರಿತು ವಿವರಿಸಿದರು.

25 ವರ್ಷಗಳ ಹಿಂದೆ ಕೃಷಿ ಜಾಗರಣವನ್ನು ಆರಂಭಿಸುವಾಗಿನಿಂದ ಪ್ರಸ್ತುತ ಇವತ್ತಿನ ದಿನಗಳವರೆಗೂ ಕೃಷಿ ಮಾಧ್ಯಮ ಮತ್ತು ರೈತರ ಒಡನಾಟಗಳ ಕುರಿತು ಮಾತನಾಡಿದರು.

ವೈಜ್ಞಾನಿಕ ಸಮೀಕ್ಷೆ ಅಗತ್ಯ

ರೈತರಿಗೆ ಕೇವಲ ಬೆಳೆವಿಮೆ, ಪರಿಹಾರಗಳಷ್ಟೇ ಸಾಲದು. ದೇಶಾದ್ಯಂತ ರೈತರಿಗಾಗಿ ವಿಜ್ಞಾನಿಗಳು, ಸಂಶೋಧಕರು ಸೇರಿ ಕೃಷಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಬೇಕು.

ಕೃಷಿ - ರೈತ ಸಮುದಾಯದಲ್ಲಿ ನಡೆಯುತ್ತಿರುವ ಸಮಸ್ಯೆಗಳ ಚರ್ಚೆ! 

ಅತಿಥಿಗಳ ಮಾತು ಕೇಳುತ್ತಿರುವ ಕೃಷಿ ಜಾಗರಣ ತಂಡ

ಈ ಮೂಲಕ ಬೆಳೆಗಳಿಗೆ ತಗಲಬಹುದಾದ ರೋಗಗಳನ್ನು, ಕೀಟಬಾಧೆಯನ್ನು, ಬೆಳೆ ನಷ್ಟವನ್ನು ತಡೆಗಟ್ಟಬಹುದು. ಅಷ್ಟೇ ಅಲ್ಲದೆ ಯಾವ ಸಮಯಕ್ಕೆ ಯಾವ ಬೆಳೆಯನ್ನು ಯಾವ ಆಧಾರದ ಮೇಲೆ ಬೆಳೆದರೆ ಸೂಕ್ತ ಎನ್ನುವ ಸಲಹೆಗಳನ್ನು ರೈತರಿಗೆ ನೀಡಬೇಕು ಎಂದರು.

ಕೇವಲ ರಾಸಾಯನಿಕಮುಕ್ತ ಕೃಷಿಗೆ ಸಲಹೆ ನೀಡದೆ ಆ ಕೃಷಿ ಪದ್ದತಿ ಮಾಡುವ ರೈತರಿಗೆ ಎದುರಾಗುವ ಸಮಸ್ಯೆಗಳನ್ನು ಪಟ್ಟಿಮಾಡಿ ಗಂಭೀರವಾಗಿ ಅವುಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದು ಸೂಚಿಸಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಅಗ್ರೋ ಕೆಮ್‌ ಫೆಡರೇಷನ್‌ ಆಫ್‌ ಇಂಡಿಯಾದ ಜನರಲ್‌ ಡೈರೆಕ್ಟರ್‌ ಕಲ್ಯಾಣ ಗೋಸ್ವಾಮಿ ಹಾಗೂ ಅವರ ಸೆಕ್ರೆಟರಿ ಸಿಮ್ರನ್‌ ಕೌರ್‌ ಅವರನ್ನು ಸಸಿ ನೀಡಿ ಸ್ವಾಗತಿಸಿಲಾಯಿತು.

ಕೃಷಿ ಜಾಗರಣದ ಸಿಒಒ ಡಾ. ಪಿ.ಕೆ. ಪಂಥ ವಂದಣಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ಕೃಷಿ ಜಾಗರಣದ ಮಾಧ್ಯಮದ ನಿರ್ದೇಶಕಿ ಶೈನಿ ಡೊಮೆನಿಕ್‌, ಕಂಟೆಂಟ್‌ ಹೆಡ್‌ ಸಂಜಯ್‌ ಕುಮಾರ, ನಿಶಾಂತ ತಾಕ್‌ ಹಾಗೂ ಕೃಷಿ ಜಾಗರಣ ತಂಡ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅತಿಥಿ ಕಲ್ಯಾಣ ಗೋಸ್ವಾಮಿ ಅವರೊಂದಿಗೆ ಕೃಷಿ ಜಾಗರಣ ತಂಡ