News

ರಸಗೊಬ್ಬರ ಮಾರಾಟಕ್ಕೆ ಸರಕಾರಿ ದರ ನಿಗಧಿ: ಹೆಚ್ಚುವರಿ ದರ ವಸೂಲಿ ಮಾಡಿದರೆ ದಂಡ ಫಿಕ್ಸ್‌!

06 June, 2023 2:47 PM IST By: Kalmesh T
Government price fixing for sale of fertilizer: If you charge extra price, heavy fine will fall!

ಧಾರವಾಡ: ರಸಗೊಬ್ಬರ ಮಾರಾಟಕ್ಕೆ ಸರಕಾರಿ ದರ ನಿಗಧಿ ಮಾಡಲಾಗಿದ್ದು, ಹೆಚ್ಚುವರಿ ದರ ವಸೂಲಿ ಮಾಡಿದರೆ ಅಂತವರಿಗೆ ಭಾರೀ ದಂಡ ವಿಧಿಸಲಾಗುವುದು. ಅಲ್ಲದೇ ಕ್ರಿಮಿನಲ್‌ ಕೇಸ್‌ ಕೂಡ ದಾಖಲು ಮಾಡಲಾಗುವುದು. ಒಂದು ವೇಳೆ ಕೃತಕ ಅಭಾವ ಸೃಷ್ಟಿ ಕಂಡುಬಂದರೆ ಸಂಬಂಧಿಸಿದ ಮಾರಾಟಗಾರರ ಮೇಲೆ ಕ್ರಿಮಿನಲ್ ಕೇಸ್ ದಾಖಲು ಮಾಡಿ, ಲೈಸನ್ಸ್ ರದ್ದು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

ಮಳೆಗಾಲ ಆರಂಭವಾಗಿದ್ದು, ಮಾನ್ಸೂನ್ ವಿಳಂಬದಿಂದಾಗಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆ ಆಗಿದ್ದು, ಜೂನ್ ಎರಡನೇ ವಾರ ನಿರೀಕ್ಷಿತ ಮಳೆ ಆಗುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ರೈತರ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಬೀಜ, ರಸಗೊಬ್ಬರ, ಕಳೆನಾಶಕ ದಾಸ್ತಾನು ಮಾಡಿಕೊಂಡು, ವ್ಯವಸ್ಥೆ ವಿತರಣೆಗೆ ಜಿಲ್ಲಾಡಳಿತ ಕೃಷಿ ಇಲಾಖೆ ಮೂಲಕ ಕ್ರಮಕೈಗೊಂಡಿದ್ದು ರೈತರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಿಯಾಯಿತಿ ದರದಲ್ಲಿ ರೈತರಿಗೆ ರಸಗೊಬ್ಬರ ಮಾರಾಟ ಮಾಡಲು ಸರಕಾರವೇ ರಸಗೊಬ್ಬರದ ದರ ನಿಗದಿಗೊಳಿಸಿ, ಆದೇಶಿಸಿದೆ. ಈ ಕುರಿತು ಎಲ್ಲ ರಸಗೊಬ್ಬರ ಮಾರಾಟಗಾರರಿಗೆ ಮಾಹಿತಿ ನೀಡಿ, ಸರಕಾರದ ಆದೇಶದಂತೆ ದರ ಪಡೆಯಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಗತ್ಯದಷ್ಡು, ಎಲ್ಲ ಪ್ರಕಾರದ ರಸಗೊಬ್ಬರಗಳ ದಾಸ್ತಾನು ಲಭ್ಯವಿದ್ದರೂ ಕೃತಕ ಅಭಾವ ಸೃಷ್ಟಿಸಿದರೆ ಹಾಗೂ ನಿಗದಿತ ದರಕ್ಕಿಂತ ಹೆಚ್ವು ದರ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದರೆ ಅಥವಾ ಈ ರೀತಿಯಾಗಿ ಜಿಲ್ಲೆಯ ಯಾವುದೇ ಊರಿನಲ್ಲಿ ಕಂಡು ಬಂದರೆ ತಕ್ಷಣ ಅಂತಹ ಮಾರಾಟಗಾರ ಅಥವಾ ಅಂಗಡಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಸೂಕ್ತ ಕ್ರಮ ಜರುಗಿಸಲಾಗುತ್ತದೆ ಮತ್ತು ತನಿಖೆಯಲ್ಲಿ ಅಪರಾಧ ಸಾಬೀತಾದರೆ ಅವರ ಅಂಗಡಿ ಲೈಸೆನ್ಸ್ ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ರಸಗೊಬ್ಬರಗಳ ನಿಗಧಿತ ದರ

ಮುಖ್ಯವಾಗಿ ರೈತರು ಮುಂಗಾರು ಬೆಳೆಗಳಿಗೆ ಯೂರಿಯಾ, ಡಿಎಪಿ, ಪೊಟ್ಯಾಸಿಯಮ್‌ ರಸಗೊಬ್ಬರ ಬಳಸುತ್ತಾರೆ. ಯೂರಿಯಾ ರಸಗೊಬ್ಬರ ಪ್ರತಿ ಚೀಲಕ್ಕೆ ರೂ.266, ಡಿಎಪಿ ರಸಗೊಬ್ಬರ ಪ್ರತಿ ಚೀಲಕ್ಕೆ ರೂ.1350 ಮತ್ತು ಪೊಟ್ಯಾಸಿಯಮ್‌ ರಸಗೊಬ್ಬರ ಪ್ರತಿ ಚೀಲಕ್ಕೆ ರೂ. 1700 ಗಳಷ್ಟು ಸರಕಾರಿ ದರವಿದೆ. ರೈತರು ಈ ಬೆಲೆ ಕೊಟ್ಟು ರಸಗೊಬ್ಬರ ಖರೀದಿಸಬೇಕು. ಗೊಬ್ಬರ ಖರೀದಿಸುವಾಗ ರೈತರು ತಮ್ಮ ಆದಾರ್ ಸಂಖ್ಯೆ ಅಥವಾ ತಂಬ್ ನೀಡಿಬೇಕು ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಗೊಬ್ಬರ ಮಾರಾಟಗಾರರು ನಿಗದಿತ ದರ ಕ್ಕಿಂತ ಹೆಚ್ಚು ಹಣ ಕೇಳಿದರೆ ಅಥವಾ ಗೊಬ್ಬರದ ಜೋತೆಗೆ ಬೇರೆ ಕೃಷಿ ಪರಿಕರ ಅಥವಾ ಬೇರೆ ಗೊಬ್ಬರ ಖರೀದಿಸಲು ಒತ್ತಾಯಪಡಿಸಿ, ಕೇಳಿದ ಗೊಬ್ಬರ ನೀಡಲು ನಿರಾಕರಿಸಿದರೆ ಅವರ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳಿಗೆ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ರೈತರು ದೂರು ನೀಡಬೇಕು. ತಕ್ಷಣ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಂಡು ಸಮಸ್ಯೆ ಪರಿಹರಿಸುತ್ತಾರೆ ಎಂದುರಸಗೊಬ್ಬರಗಳು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ವಿಚಕ್ಷಣ ದಳಗಳ ರಚನೆ:

ಬೀಜ ಮತ್ತು ರಸಗೊಬ್ಬರಗಳ ಕೃತಕ ಅಭಾವ ಆಗದಂತೆ ಮುಂಜಾಗ್ರತೆ ಮತ್ತು ನಕಲಿ ಬೀಜ, ಗೊಬ್ಬರ ವಿತರಣೆ ಆಗದಂತೆ ಎಚ್ಚರಿಕೆ ವಹಿಸಲು ತಾಲೂಕುವಾರು ಕೃಷಿ ಅಧಿಕಾರೆ ವಿಚಕ್ಷಣ ಮತ್ತು ಪರಿವೀಕ್ಷಣೆ ದಳಗಳನ್ನು ರಚಿಸಿ, ಪ್ರತಿ ದಳಕ್ಕೆ 8 ರಿಂದ 10 ಅಂಗಡಿಗಳ ಗುರಿ ನೀಡಲಾಗಿದೆ. ಅಲ್ಲಿಗೆ ನಿರಂತರ ಭೇಟಿ ನೀಡಿ, ಬೀಜ, ರಸಗೊಬ್ಬರ ಕೊರತೆ ಆಗದಂತೆ ಮತ್ತು ನಕಲಿ ಬೀಜ, ಗೊಬ್ಬರದ ಬಗ್ಗೆ ಕಟ್ಟೆಚ್ಚರ ವಹಿಸಲು ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಯೂರಿಯಾ ಗೊಬ್ಬರ ಬಳಕೆಗೆ ಸಲಹೆ:

ಪ್ರಸ್ತುತ ಮಾರುಕಟ್ಟೆಯಲ್ಲಿ ಬೇವು ಲೇಪಿತ ಯೂರಿಯಾ ರಸಗೊಬ್ಬರ ಲಭ್ಯವಿದೆ. ಇದರಲ್ಲಿ ಸಣ್ಣಕಾಳು ಮತ್ತು ದಪ್ಪಕಾಳು ಎಂದು ಎರಡು ತೆರಣಾಗಿದ್ದು, ಎರಡರಲ್ಲೂ ಸಾರಜನಕ ಪೋಷಕಾಂಶಕ ಶೇ.46 ರಷ್ಟಿದೆ. ದಪ್ಪಕಾಳಿನ ಯೂರಿಯಾ ಗೊಬ್ಬರ ನಿಧಾನವಾಗಿ ಭೂಮಿಯಲ್ಲಿ ಕರಗುವದರಿಂದ ಬೆಳೆಗಳಿಗೆ ಉತ್ತಮ ಪೋಷಕಾಂಶ ಸಿಗುತ್ತದೆ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಡು ರೈತರಿಗೆ ಶಿಪಾರಸ್ಸು ಮಾಡಿದ್ದಾರೆ. ಆದ್ದರಿಂದ ಲಭ್ಯತೆಯ ಆಧಾರದಲ್ಲಿ ದಪ್ಪ ಕಾಳು ಅಥವಾ ಸಣ್ಣ ಕಾಳು ಯೂರಿಯಾವನ್ನು ಯಾವುದೇ ಹಿಂಜರಿಕೆ ಇಲ್ಲದೆ ಒಂದೇ ತೆರಣಾಗಿ ಉಪಯೋಗಿಸಬಹುದು ಎಂದು ಅವರು ತಿಳಿಸಿದ್ದಾರೆ.

ಮತ್ತು ಎಲ್ಲ ಕಂಪನಿಗಳ ಯೂರಿಯಾದಲ್ಲಿ ಸಾರಜನಕ ಪೋಷಕಾಂಶ ಶೇ.46 ರಷ್ಟೆ ಇರುವದರಿಂದ ಒಂದೆ ಸಂಸ್ಥೆಯ ಗೊಬ್ಬರಕ್ಕಾಗಿ ರೈತರು ಒತ್ತಾಯಿಸದೆ ಲಭ್ಯವಿರುವ ಸಂಸ್ಥೆಯ ಯೂರಿಯಾ, ಎಇಎಪಿ ಬಳಸಬೇಕು. ಕೇಂದ್ರ ಸರಕಾರದ ಮಾರ್ಗಸೂಚಿಗಳನ್ವಯ ಪಿ.ಓ.ಎಸ್. ಯಂತ್ರಗಳ ಮೂಲಕವೇ ರಸಗೊಬ್ಬರಗಳನ್ನು ಮಾರಾಟ ಮಾಡಲಾಗುತ್ತದೆ. ರೈತರು ಆದಾರ ವಿವರ ನೀಡಿ, ಗೊಬ್ಬರ ಖರೀದಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ರಸಗೊಬ್ಬರ ವಿತರಣೆಯಲ್ಲಿ ಸಮಸ್ಯೆ ಉಂಟಾದರೆ ಸಂಪರ್ಕಿಸಿ:

ರಸಗೊಬ್ಬರಗಳ ವಿತರಣೆ ಹಾಗೂ ರಸಗೊಬ್ಬರ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೆ ಸಂಪರ್ಕಿಸಲು ಅಧಿಕಾರಿಗಳನ್ನು ನೇಮಿಸಿದ್ದು, ರೈತರು ಕೃಷಿ ಅಧಿಕಾರಿಗಳನ್ನು ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು.

  • ಧಾರವಾಡ ತಾಲೂಕು ಸಹಾಯಕ ಕೃಷಿ ನಿರ್ದೇಕರು: 8277931285 ಹಾಗೂ ತಾಂತ್ರಿಕ ಅಧಿಕಾರಿ: 8277931339,
  • ಕಲಘಟಗಿ ತಾಲ್ಲೂಕು ಸಹಾಯಕ ಕೃಷಿ ಮಿರ್ದೇಶಕರು: 8277931291 ಮತ್ತು ತಾಂತ್ರಿಕ ಅಧಿಕಾರಿ: 8277931280,
  • ಹುಬ್ಬಳ್ಳಿ ತಾಲ್ಲೂಕು ಸಹಾಯಕ ಕೃಷಿ ಮಿರ್ದೇಶಕ: 8277931288 ಮತ್ತು ತಾಂತ್ರಿಕ ಅಧಿಕಾರಿ: 8277931332,
  • ಕುಂದಗೋಳ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ: 8277931294 ಮತ್ತು ತಾಂತ್ರಿಕ ಅಧಿಕಾರಿ: 7252021790,
  • ನವಲಗುಂದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ: 8277931295. ಮತ್ತು ತಾಂತ್ರಿಕ ಅಧಿಕಾರಿ: 8277931366 ಮತ್ತು ಉಪಕೃಷಿ ನಿರದೇಶಕರು ಧಾರವಾಡ- 8277931271 ಹುಬ್ಬಳ್ಳಿ- 8277931272, ಜಾರಿದಳದ ಸಹಾಯಕ ಕೃಷಿ ನಿರ್ದೇಶಕರು: 8277931274, 8277931376 ದೂರವಾಣಿ ಸಂಖ್ಯೆಗಳಿಗೆ ನೇರವಾಗಿ ರೈತರು, ಕೃಷಿಕರು ದೂರು ನೀಎಬಹುದು ಅಥವಾ ಸಹಶಯ ಪಡೆಯಬಹುದು.

ಬಿತ್ತನೆಗೆ ಅನುಕೂಲವಾಗುವಷ್ಡು ಮಳೆ ಆದ ತಕ್ಷಣ ರೈತರು ಬೀಜ, ಗೊಬ್ಬರ ಖರೀದಿಸಲು ಒಮ್ಮೆಲೆ ಸೇರುತ್ತಾರೆ ಮತ್ತು ಒಂದೇ ಅಂಗಡಿಗೆ ಬರುತ್ತಾರೆ. ದಯವಿಟ್ಟು ಆ ರೀತಿ ಮಾಡದೇ ರೈತ ಬಾಂಧವರು ತಮಗೆ ಅನಕೂಲವಿದ್ದಲ್ಲಿ ಮುಂಚಿತವಾಗಿ ಖರೀದಿಸಬಹುದಿ ಅಥವಾ ಬಿತ್ತನೆಗೆ ಅಗತ್ಯವಾದಷ್ಟು ಮಳೆ ಸುರಿದ ತಕ್ಷಣ ತಮ್ಮ ಜಮೀನು ವ್ಯಾಪ್ತಿಯಲ್ಲಿ ಬರುವ ರೈತ ಸಂಪರ್ಕ ಕೇಂದ್ರದಲ್ಲಿ ಮತ್ತು ತಮಗೆ ಸಮೀಪದ ಮಾರಾಟಗಾರರಲ್ಲಿ ರಸಗೊಬ್ಬರ, ಬೀಜ ಖರೀದಿಸಬೇಕು. ಅನಗತ್ಯ ಜನದಟ್ಟಣೆ ಆಗದಂತೆ ರೈತರು ಸಹಕರಿಸಬೇಕು. ಜಿಲ್ಲೆಯಲ್ಲಿ ಮುಂಗಾರು ಬಿತ್ತನೆಗೆ ಅಗತ್ಯವಿರುವಷ್ಡು, ಅಲ್ಲದೆ ಹೆಚ್ಚವರಿ ಬೀಜ, ರಸಗೊಬ್ಬರಗಳ ದಾಸ್ತಾನು ಹೊಂದಲಾಗಿದೆ.

ಜಿಲ್ಲೆಯ ಬೀಜಗಳ ಕೊರತೆ ಆಗದಂತೆ ಮತ್ತು ರೈತರಿಗೆ ಎಲ್ಲಡೆ ಲಭ್ಯವಾಗುವಂತೆ 14. ರೈತ ಸಂಪರ್ಕ ಕೇಂದ್ರಗಳಲ್ಲಿ, 17 ಉಪ ಮಾರಾಟ ಕೇಂದ್ರಗಳಲ್ಲಿ, ಕೇಷಿ ಪತ್ತಿನ ಸಹಕಾರಿ ಸಂಘದಲ್ಲಿ ಬೀಜಗಳ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.