ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಎಟಿಎಂ ಮೂಲಕ ಹಣ ತೆಗೆದುಕೊಳ್ಳುವುದನ್ನು ನೋಡಿದ್ದೀರಿ ಕೇಳಿದ್ದೀರಿ. ಹಾಗೂ ಕುಡಿಯುವ ನೀರನ್ನು ಸಹ ಕ್ವಾಯಿನ್ ಹಾಕಿ ಪಡೆದಿದ್ದೀರಿ. ಆದರೆ ಈಗ ಅಕ್ಕಿಯನ್ನು ಎಟಿಎಂ ಮೂಲಕ ಹೇಗೆ ಪಡೆಯಬೇಕೆಂದುಕೊಂಡಿದ್ದೀರಾ.... ಹೌದು.. ಇನ್ನೂ ಮುಂದೆ ನೀರಿನ ಎಟಿಎಂ ಮಾದರಿಯಲ್ಲೇ ಅಕ್ಕಿ ಎಟಿಎಂ ಅಳವಡಿಸಿ ಪಡಿತರ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಚಿಂತನೆ ನಡೆಸಿದೆ.
ದಿನದ 24 ಗಂಟೆ, ವಾರದ ಏಳೂ ದಿನವೂ ಪಡಿತರದಾರಗಿಗೆ ವಿತರಣೆ ಮಾಡುವ ಯಂತ್ರಗಳನ್ನು ಸ್ಥಾಪಿಸಲಾಗುವುದು. ಈ ಯಂತ್ರಗಳ ಮೂಲಕ ಪಡಿತರಚೀಟಿ ಇರುವವರಿಗೆ ಅಕ್ಕಿ ವಿತರಣೆ ಮಾಡುವುದು ಸರಕಾರದ ಉದ್ದೇಶವಾಗಿದೆ. ಇದಕ್ಕೆರಾಜ್ಯ ಸರ್ಕಾರ ರೈಸ್ ಎಟಿಂಎಂ ಎಂದು ಹೆಸರಿಟ್ಟಿದೆ.
ಪಡಿತರ ಚೀಟಿ ಹೊಂದಿರುವವರು ರೇಷನ್ ಅಂಗಡಿಗಳ ಮುಂದೆ ಸಾಲುಗಟ್ಟುವುದನ್ನು ತಪ್ಪಿಸಲು ಇದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯೆ ಹೇಳಿದ್ದಾರೆ. ವಿಯೆಟ್ನಾಂ ಮತ್ತು ಇಂಡೋನೇಷ್ಯಾದಲ್ಲಿ ಕೋವಿಡ್ ಸಂದರ್ಭದಲ್ಲಿ ಜನರಿಗೆ ಉಚಿತವಾಗಿ ಅಕ್ಕಿ ವಿತರಣೆ ಮಾಡಲು ಈ ರೀತಿಯ ಯಂತ್ರವನ್ನು ಸ್ಥಾಪಿಸಲಾಗಿತ್ತು. ಕೊರೋನಾದಿಂದಾಗಿ ಕೆಲಸ ಕಳೆದುಕೊಂಡ ಬಡವರಿಗೆ ನಿತ್ಯ ಎರಡರಿಂದ ಮೂರು ಕೆಜಿ ಅಕ್ಕಿ ವಿತರಿಸಲು ಎಟಿಎಂ ಯಂತ್ರ ಬಳಸಲಾಗಿತ್ತು. ಎಟಿಎಂನಲ್ಲಿ ಹಣ ಹಾಕಿಸದರೆ ಸಾಕು ಅಕ್ಕಿ ಬರುತ್ತದೆ. ಜನರು ಬ್ಯಾಗಲ್ಲಿ ಕೊಳವೆ ಮೂಲಕ ಬರುವ ಅಕ್ಕಿಯನ್ನು ಹಿಡಿದಿಟ್ಟುಕೊಳ್ಳಬೇಕು. ಇದರಿಂದಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಸರತಿಯಲ್ಲಿ ನಿಲ್ಲುವ ಬದಲು ಸುಲಭವಾಗಿ 24x7 ದಿನದ ವಾರದ ಏಳು ದಿನಗಳು ಪಡೆಯಬಹುದು. ಆರಂಭದಲ್ಲಿ ಪ್ರಯೋಗಾರ್ಥ ಎರಡು ಯಂತ್ರಗಳನ್ನು ಸ್ಥಾಪಿಸಲಾಗುತ್ತದೆ. ಒಂದೊಮ್ಮೆ ಇದು ಯಶಸ್ವಿಯಾದರೆ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುತ್ತದೆ. ಇದರ ಪರಿಣಾಮಕಾರಿ ಜಾರಿಗಾಗಿ ಬಯೋಮೆಟ್ರಿಕ್ ಅಥವಾ ಸ್ಮಾರ್ಟ್‌ಕಾರ್ಡ್‌ನ್ನು ಅಳವಡಿಸುವ ಯೋಜನೆಯೂ ಸರ್ಕಾರದ ಮುಂದಿದೆ. ರಾಜ್ಯದಲ್ಲಿ ಈಗಾಗಲೇ ಶುದ್ಧ ನೀರಿನ ಘಟಕಗಳನ್ನು ಇದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಇದು ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಮಾದರಿಯಲ್ಲಿ ಅಕ್ಕಿ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ
ರೈಸ್ ಎಟಿಎಂ ಹೇಗೆ ಕೆಲಸ ಮಾಡುತ್ತೆ?: ಜನರು ಸ್ವಿಚ್ ಪ್ರೆಸ್ ಮಾಡಿದಾಗ ಎಟಿಎಂ ನಿರ್ವಾಹಕರ ಮೊಬೈಲ್‌ಗೆ ಮೆಸೇಜ್ ಹೋಗುತ್ತದೆ. ಅಕ್ಕಿ ಬೇಕಾದವರು ಯಂತ್ರಕ್ಕೆ ನಾಣ್ಯವನ್ನು ಹಾಕಬೇಕು ಆಮೇಲೆ ದೊಡ್ಡ ಡ್ರಂಗಳಲ್ಲಿತುಂಬಿರುವ ಅಕ್ಕಿ ಕೊಳವೆ ಮೂಲಕ ಹೊರಬರುತ್ತದೆ. ಜನರು ಬ್ಯಾಗ್‌ಗಳಲ್ಲಿ ಈ ಅಕ್ಕಿಯನ್ನು ಹಿಡಿದುಕೊಳ್ಳಬೇಕು. ದಿನಕ್ಕೆ ಒಬ್ಬರಿಗೆ ಇಷ್ಟೇ ಪ್ರಮಾಣದ ಅಕ್ಕಿ ನೀಡಬೇಕೆಂದು ಮೊದಲೇ ಯಂತ್ರಕ್ಕೆ ನಿಗದಿಪಡಿಸಲಾಗಿರುತ್ತದೆ.