News

ಮೌಸಮ್‌ (Mousam) ಆ್ಯಪ್‌ ಬಳಸಿ ಹವಾಮಾನ ಮುನ್ಸೂಚನೆ ಮಾಹಿತಿ ಪಡೆಯಿರಿ

28 July, 2020 10:40 AM IST By:
Mousam app

ದೇಶದ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆ, ಉಷ್ಣತೆ, ಗಾಳಿಯ ವೇಗ, ಹವಾಮಾನ ಏರುಪೇರು ಸೇರಿದಂತೆ ಹಲವಾರು ಮಾಹಿತಿಯಳ್ಳ ಒಂದು ಹೊಸ ಆ್ಯಪ್‌(APP)ನ್ನು ಸರ್ಕಾರ ಬಿಡುಗಡೆ ಮಾಡಿದೆ. ದೇಶದ 200 ಮಹಾನಗರಗಳ  ಹವಾಮಾನ (monsoon) ದ ಮುನ್ಸೂಚನೆಗಳನ್ನು  ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ  ನೋಡಬಹುದು.

 ದೇಶದ 200 ಮಹಾನಗರಗಳನ್ನು ಆಧರಿಸಿ ಹವಾಮಾನ ಮುನ್ಸೂಚನೆ ನೀಡುವ ಮೊಬೈಲ್  ಆ್ಯಪ್‌  ಮೌಸಮ್‌' (Mousam) ಅನ್ನು ಭೂ ವಿಜ್ಞಾನ ಸಚಿವ ಹರ್ಷವರ್ಧನ್‌ ಅನಾವರಣಗೊಳಿಸಿದ್ದಾರೆ.
ಇಂಟರ್‌ನ್ಯಾಷನಲ್‌ ಕಾರ್ಫ್ಸ್‌ ರೀಸರ್ಚ್ ಇನ್‌ಸ್ಟಿಟ್ಯೂಟ್‌ ಫಾರ್‌ ಸೆಮಿ- ಏರಿಡ್‌ ಟ್ರಾಪಿಕ್ಸ್‌(ICRISAT) ಹಾಗೂ ಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟೀಯರಾಲಜಿ (IITAM) ಹಾಗೂ ಇಂಡಿಯಾ ಮೆಟೀಯರಲಾಜಿಕಲ್‌ ಡಿಪಾರ್ಟ್‌ಮೆಂಟ್‌(IMD) ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಗೂಗಲ್‌ ಪ್ಲೇ(Google play) ಹಾಗೂ ಆ್ಯಪಲ್‌ ಸ್ಟೋರ್‌ನಲ್ಲಿ  ಈ ಮೌಸಮ್‌ ' ಲಭ್ಯವಿದೆ. ದೇಶದ ಸುಮಾರು 200 ನಗರಗಳ ಹವಾಮಾನ ವರದಿಯನ್ನು ಈ ಆ್ಯಪ್‌ ನೀಡಲಿದ್ದು, ಉಷ್ಣತೆ, ಆದ್ರ್ರತೆ ಹಾಗೂ ಗಾಳಿಯ ವೇಗ ಹಾಗೂ ದಿಕ್ಕನ್ನು ತಿಳಿಸಲಿದೆ. ದಿನಕ್ಕೆ ಎಂಟು ಬಾರಿ ಈ ಆ್ಯಪ್‌ನ ಮಾಹಿತಿ ಅಪ್‌ಡೇಟ್‌ ಆಗಲಿದೆ. ಇದರಲ್ಲಿ ಹವಮಾನದಲ್ಲಿನ ತೀವ್ರ ಏರುಪೇರಿನ ಬಗ್ಗೆ ಮಾಹಿತಿ ನೀಡುವ ಸೌಲಭ್ಯವೂ ಇದೆ. ಈ ಆ್ಯಪ್‌ನಲ್ಲಿ ದೇಶದ 450 ನಗರಗಳ ಮುಂದಿನ ಏಳು ದಿನಗಳ ಹವಾಮಾನ ಮಾಹಿತಿಯೂ ಲಭ್ಯವಿರಲಿದ್ದು, ಪ್ರತಿ 24 ಗಂಟೆಗಳಿಗೆ ಅಪ್‌ಡೇಟ್‌ ಆಗಲಿದೆ.

ಮೌಸಮ್ ಆ್ಯಪ್‌ ಡೌನ್ಲೋಡ್ (Download) ಹೇಗೆ?

ಮೊಬೈಲ್(Mobile)ನಲ್ಲಿ ಪ್ಲೇ ಸ್ಟೋರ್,/ಆ್ಯಪಲ್ ಆ್ಯಪ್ ಸ್ಟೋರ್ ನಲ್ಲಿ ಸರ್ಚ್ ಬಟನ್ ನಲ್ಲಿ ಮೌಸಮ್ ಆ್ಯಪ್‌ ಟೈಪ್ ಮಾಡಿ, ಪಟ್ಟಿಯಲ್ಲಿರುವ ಮೌಸಮ್ ಆ್ಯಪ್‌-ಇಂಡಿಯನ್ ವೆದರ್ ಆ್ಯಪ್‌ ನ್ನು ಡೌನ್ಲೋಡ್ ಮಾಡಿಕೊಂಡು ಹವಾಮಾನ ಮುನ್ಸೂಚನೆ ಮಾಹಿತಿಗಳನ್ನುನೋಡಬಹುದು.