ದಿನದಿಂದ ದಿನಕ್ಕೆ ಪೆಟ್ರೋಲ್, ಡಿಸೇಲ್, LPG ಸಿಲಿಂಡರ್ ಗಳ ಏರುತ್ತಿರುವ ಬೆಲೆಯಿಂದ ಕಂಗಾಲಾಗಿದ್ದ ಜನಸಾಮಾನ್ಯರಿಗೆ ಇದೀಗ ಕೊಂಚ ರಿಲ್ಯಾಕ್ಸ್ ಆಗುವ ಸುದ್ದಿಯೊಂದು ಲಭಿಸಿದೆ. ಹೌದು ಉಜ್ವಲ್ ಯೋಜನೆಯ ಫಲಾನುಭವಿಗಳಿಗೆ LPG ಸಿಲಿಂಡರ್‌ಗೆ 200 ರೂ ಸಬ್ಸಿಡಿ ಘೋಷಣೆ ಬೆನ್ನಲ್ಲೇ, ಪೆಟ್ರೋಲ್, ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡೋದಾಗಿ ತಿಳಿಸಿದ್ದಾರೆ.
ಈ ಸಂಬಂಧ ಕುರಿತು ಟೀಟ್ ಮಾಡಿ ಮಾಹಿತಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಪೆಟ್ರೋಲ್ ಹಾಗೂ ಡಿಸೇಲ್‌ಗಳ ಮೇಲಿನ ಅಬಕಾರಿ ಸುಂಕಗಳ ಕಡಿತದ ಪರಿಣಾಮ ಪೆಟ್ರೋಲ್ ದರ ಲೀಟರ್‌ಗೆ 9.5 ರೂಪಾಯಿ. ಜೊತೆಗೆ ಡೀಸೆಲ್ ಬೆಲೆ ಲೀಟರ್‌ಗೆ 7 ರೂಪಾಯಿ ಕಡಿಮೆ ಮಾಡೋದಾಗಿ ತಿಳಿಸಿದ್ದಾರೆ.ಇನ್ನು ಈ ಆದೇಶವು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟರ್‌ನಲ್ಲಿ, ಇದು [ಅಬಕಾರಿ ಸುಂಕ ಕಡಿತ] ಸರ್ಕಾರಕ್ಕೆ ವರ್ಷಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳ ಆದಾಯವನ್ನು ಹೊಂದಿರುತ್ತದೆ" ಎಂದು ಹೇಳಿದ್ದಾರೆ.
ಜರ್ಮನಿಯ ಪ್ರಮುಖ ಇಂಧನ ಕಂಪನಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವರು ದುಂಡು ಮೇಜಿನ ಸಭೆ!
ಏಪ್ರಿಲ್‌ನಲ್ಲಿ 1.68 ಲಕ್ಷ ಕೋಟಿ ರೂಪಾಯಿಗಳ GST ಆದಾಯ ಸಂಗ್ರಹ!
"ಎಲ್ಲಾ ರಾಜ್ಯ ಸರ್ಕಾರಗಳಿಗೆ, ವಿಶೇಷವಾಗಿ ಕೊನೆಯ ಸುತ್ತಿನಲ್ಲಿ (ನವೆಂಬರ್ 2021) ಕಡಿತವನ್ನು ಮಾಡದ ರಾಜ್ಯಗಳಿಗೆ ಇದೇ ರೀತಿಯ ಕಡಿತವನ್ನು ಜಾರಿಗೆ ತರಲು ಮತ್ತು ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡಲು ನಾನು ಬಯಸುತ್ತೇನೆ" ಎಂದು ಅವರು ಹೇಳಿದರು.
ರೈತರಿಗಾಗಿ ಪಶುಪಾಲನಾ ಸಹಾಯವಾಣಿ; ಮನೆಯಲ್ಲೆ ಕುಳಿತು ಮಾಹಿತಿ ಪಡೆದುಕೊಳ್ಳಿ!
ಹಾವೇರಿಯಲ್ಲಿ “ಮೀನು ಹಬ್ಬ” ಆರಂಭ: ವಿಶೇಷ ಆಚರಣೆಯ ಬಗ್ಗೆ ನಿಮಗೆ ಗೊತ್ತೆ! ಇಲ್ಲಿದೆ ಕಂಪ್ಲಿಟ್ ಮಾಹಿತಿ.
ಸದ್ಯ ಬೆಂಗಳೂರು ನಗರದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ ಬೆಲೆ 111.09 ಮತ್ತು ಡೀಸೆಲ್ 94.79 ರೂಪಾಯಿ ಇದೆ.
ದರ ಕಡಿತದ ಪರಿಣಾಮ ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 105.42 ಮತ್ತು 96.67 ಕ್ಕೆ ಇಳಿದಿವೆ. ನಾಳೆ, ಮೇ 22 ರಂದು ಪೆಟ್ರೋಲ್ ದರಗಳು ರೂ 95.77 ಮತ್ತು ಡೀಸೆಲ್ ರೂ 89.65 ಕ್ಕೆ ತಲುಪುವುದರೊಂದಿಗೆ ಇದು ಮತ್ತಷ್ಟು ಇಳಿಯುವ ನಿರೀಕ್ಷೆಯಿದೆ.
ಹಣದುಬ್ಬರದ ಮಧ್ಯೆ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಒಂಬತ್ತು ಕೋಟಿ ಫಲಾನುಭವಿಗಳಿಗೆ ಪ್ರತಿ ಗ್ಯಾಸ್ ಸಿಲಿಂಡರ್‌ಗೆ (12 ಸಿಲಿಂಡರ್‌ಗಳವರೆಗೆ) ರೂ 200 ಸಬ್ಸಿಡಿ ನೀಡಲು ಕೇಂದ್ರ ನಿರ್ಧರಿಸಿದೆ.
"ನಾವು ನಮ್ಮ ಆಮದು ಅವಲಂಬನೆ ಹೆಚ್ಚಿರುವ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಕಚ್ಚಾ ವಸ್ತುಗಳು ಮತ್ತು ಮಧ್ಯವರ್ತಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿಮೆ ಮಾಡುತ್ತಿದ್ದೇವೆ. ಇದು ಅಂತಿಮ ಉತ್ಪನ್ನಗಳ ವೆಚ್ಚದಲ್ಲಿ ಇಳಿಕೆಗೆ ಕಾರಣವಾಗುತ್ತದೆ" ಎಂದು ಸೀತಾರಾಮನ್ ಸೇರಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರಿಗೆ Good News: ವರ್ಷಾಂತ್ಯಕ್ಕೆ ದೊರೆಯಲಿದೆ ಕೇಂದ್ರ ಮಾದರಿ ವೇತನ! ಯಾವಾಗ ದೊರೆಯಲಿದೆ ಗೊತ್ತೆ?
ಇನ್ನLPG ಸಿಲಿಂಡರ್‌ಗೆ ನೀಡಿರುವ ಈ ಸಬ್ಸಿಡಿಯನ್ನು ವರ್ಷಕ್ಕೆ 12 ಸಿಲಿಂಡರ್‌ಗಳಿಗೆ ಸೀಮಿತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ಪರಿಣಾಮವಾಗಿ ಭಾರತದಲ್ಲಿ ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ಎದುರಿಸಲು ಇದು ದೊಡ್ಡ ಉಪಕ್ರಮಗಳಲ್ಲಿ ಒಂದಾಗಿದೆ. ಇದು ಪ್ರಪಂಚದಾದ್ಯಂತ ತೈಲ ಮತ್ತು ಆಹಾರದ ವೆಚ್ಚವನ್ನು ಹೆಚ್ಚುವುದನ್ನು ನಿಯಂತ್ರಸುತ್ತದೆ ಎಂದು ಅವರು ತಿಳಿಸಿದ್ದಾರೆ