News

ಸುಳ್ಳು ಸುದ್ದಿ ಹರಡುವ 94 ವೆಬ್‌ಸೈಟ್‌ ಹಾಗೂ  747 ಯೂಟ್ಯೂಬ್‌ ಚಾನೆಲ್‌ಗಳು ಬಂದ್‌-ಅನುರಾಗ್‌ ಠಾಕೂರ್‌

24 July, 2022 3:31 PM IST By: Maltesh
Government Blocked 747 YouTube Channels, 94 websites

ದೇಶದ ಸಾರ್ವಭೌಮತೆ ಮತ್ತು ಸಮಗ್ರತೆಗೆ ವಿರುದ್ಧವಾದ ಸುಳ್ಳು ಸುದ್ದಿ ಮತ್ತು ವಿಷಯವನ್ನು ಪ್ರಕಟಿಸುತ್ತಿರುವ ಸಮಾಜಿಕ ಮಾದ್ಯಮಗಳ ಮೇಲೆ ಕೇಂದ್ರ ಕಣ್ಣಿಟ್ಟಿದ್ದು, ಇವರೆಗೆ ಬರೋಬ್ಬರಿ 747 ಯೂಟ್ಯೂಬ್‌ ಚಾನೆಲ್‌ಗಳು ಹಾಗೂ 94 ವೆಬ್‌ಸೈಟ್‌ಗಳನ್ನು ನಿರ್ಭಂಧಿಸಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ  ಅವರು 2021-22ರಲ್ಲಿ ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವ ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಚಿವಾಲಯವು ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.  ಸಚಿವಾಲಯವು 94 ಯೂಟ್ಯೂಬ್ ಚಾನೆಲ್‌ಗಳು , 19 ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು 747 ಯುಆರ್‌ಎಲ್‌ಗಳ ವಿರುದ್ಧ ಕ್ರಮ ಕೈಗೊಂಡಿದೆ ಮತ್ತು ಅವುಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದರು. 

ಅಷ್ಟೇ ಅಲ್ಲದೆ ಈ ಕ್ರಮವನ್ನು ಮಾಹಿತಿ ತಂತ್ರಜ್ಞಾನ ಕಾಯಿದೆ 2000 ಸೆಕ್ಷನ್ 69A ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ದೇಶದ ಸಾರ್ವಭೌಮತೆಗೆ ವಿರುದ್ಧವಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ, ಯುಟ್ಯೂಬ್‌ ಚಾನೆಲ್‌ಗಳ, ಹಾಗೂ ಸಾಮಾಜಿಕ ಮಾಧ್ಯಮಗಳ ಮೇಲೆ ಸರ್ಕಾರವು ಕಟ್ಟುನಿಟ್ಟಿನ ಕಣ್ಣಿಟ್ಟಿದೆ ಎಂದು ಸಚಿವರು ಹೇಳಿದರು.

ಹಿಂದೆಯು ಕ್ರಮ

ಕಳೆದ ವರ್ಷ ಡಿಸೆಂಬರ್‌ನಲ್ಲಿ, ನಿರ್ದಿಷ್ಟ ಗುಪ್ತಚರ ಇನ್‌ಪುಟ್‌ಗಳನ್ನು ಪಡೆದ ನಂತರ ಸಚಿವಾಲಯವು 20 ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಲು ಆದೇಶಿಸಿತ್ತು. ಅದರ ನಂತರ, ಸಚಿವಾಲಯವು ಮತ್ತೊಮ್ಮೆ ಚಾಟಿ ಬೀಸಿತು ಮತ್ತು ಭಾರತ ವಿರೋಧಿ ನಕಲಿ ಸುದ್ದಿಗಳನ್ನು ಹರಡುವುದಕ್ಕಾಗಿ ಪಾಕಿಸ್ತಾನ ಮೂಲದ 35 ಚಾನೆಲ್‌ಗಳನ್ನು ನಿಷೇಧಿಸಿತು.

BREAKING : ದೇಶದಲ್ಲಿ ಮತ್ತೊಂದು ಮಂಕಿಪಾಕ್ಸ್‌ ಕೇಸ್‌ ದೃಢ.. ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆ

ಈ ವರ್ಷದ ಏಪ್ರಿಲ್‌ನಲ್ಲಿ, ಭಾರತದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ಸಂಬಂಧಗಳಿಗೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಹರಡಿದ್ದಕ್ಕಾಗಿ ಸರ್ಕಾರವು 22 ಯೂಟ್ಯೂಬ್ ಚಾನೆಲ್‌ಗಳನ್ನು ನಿಷೇಧಿಸಲು ಆದೇಶಿಸಿತು ಮತ್ತು ನಂತರ 16 ಯೂಟ್ಯೂಬ್ ಚಾನೆಲ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಿತು .

ಹೊಸ ನಿಯಮಕ್ಕೆ ನಕಲಿ ಖಾತೆಗಳು ಬಂದ್‌!

ಇನ್ನು ಹೊಸ ಐಟಿ ನಿಯಮದಿಂದ ಹಲವಾರು ನಕಲಿ ಸಾಮಾಜಿಕ ಮಾಧ್ಯಮಗಳ ಖಾತೆಗಳು ಬಂದ್‌ ಆಗುತ್ತಿವೆ ಎಂದು ಅವರು ತಿಳಿಸಿದರು. ಹೊಸ ನಿಯಮದಡಿ 2021ರ ನವೆಂಬರ್ ತಿಂಗಳಲ್ಲಿ ಬರೋಬ್ಬರಿ  17.32 ಲಕ್ಷ Whatsapp ಖಾತೆಗಳನ್ನು ವ್ಯಾಟ್ಸಆ್ಯಪ್ ಬ್ಲಾಕ್ ಮಾಡಿತ್ತು.

ಇನ್ನು ಸದ್ಯ ಭಾರತದಲ್ಲಿ 42 ಕೋಟಿಗೂ ಅಧಿಕ WHatsapp ಬಳಕೆದಾರರಿದ್ದಾರೆ. ಹೀಗಾಗಿ ಬಳಕೆದಾರರ ಸುರಕ್ಷತೆಯನ್ನು ಕಾಪಾಡುವ ಉದ್ದೇಶದಿಂದ ಈ ದುರ್ಬಳಕೆಯನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.