News

ಶೇರ್ ಇಟ್ ಸೇರಿದಂತೆ ಚೀನಾದ 47 ಆ್ಯಪ್‌ಗಳನ್ನು ನಿಷೇಧಿಸಿದ ಭಾರತ

28 July, 2020 2:10 PM IST By:
Banned apps

ಟಿಕ್‌ ಟಾಕ್‌ ಲೈಟ್‌, ಹೆಲೊ ಲೈಟ್‌, ಶೇರ್‌ ಇಟ್‌ ಲೈಟ್‌, ಬಿಗೊ ಲೈವ್‌ ಲೈಟ್‌, ವಿಎಫ್‌ವೈ ಲೈಟ್‌ ಸೇರಿದಂತೆ ಚೀನಾದ ಒಟ್ಟು 47 ಆ್ಯಪ್‌(App)ಗಳ ಮೇಲೆ ಕೇಂದ್ರ ಸರ್ಕಾರವು ಸೋಮವಾರ ನಿಷೇಧ ಹೇರಿದೆ. ಇದರಿಂದ ಒಟ್ಟು 106 ಆ್ಯಪ್‌ಗಳನ್ನು ನಿಷೇಧಿಸಿದಂತಾಗಿದೆ.

ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಧಕ್ಕೆ ತರುತ್ತಿವೆ ಎಂಬ ಕಾರಣ ನೀಡಿ ಸರ್ಕಾರವು ಜೂನ್‌ 29ರಂದು 59 ಆ್ಯಪ್‌ಗಳನ್ನು ನಿಷೇಧಿಸಿತ್ತು. ಇದರಲ್ಲಿ ಟಿಕ್‌ ಟಾಕ್‌, ಶೇರ್‌(Share) ಇಟ್‌, ಹೆಲೊ, ವಿ–ಚಾಟ್‌ ಆ್ಯಪ್‌ಗಳು ಸೇರಿದ್ದವು. ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಭಾರತದಲ್ಲಿ ಮತ್ತಷ್ಟು ಮೊಬೈಲ್ ಅಪ್ಲಿಕೇಷನ್ ಗಳನ್ನು ಬ್ಯಾನ್ ಮಾಡಿದ್ದು, ಈಗ ನಿಷೇಧಿಸಿರುವ ಆ್ಯಪ್‌ ಗಳನ್ನು ಈ ಮೊದಲೇ ಬ್ಲಾಕ್‌ ಮಾಡಲಾಗಿತ್ತು. ಪ್ರಮುಖವಾಗಿ ಹಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈಟ್ , VFY ಲೈಟ್ ಮುಂತಾದ ಅಪ್ಲಿಕೇಶನ್ ಗಳನ್ನು ಕೂಡ ಗೂಗಲ್ ಪ್ಲೇ ಸ್ಟೋರ್ (Play store) ಮತ್ತು ಆ್ಯಪಲ್ ಸ್ಟೋರ್ ನಿಂದ ತೆಗೆದುಹಾಕಲಾಗಿದೆ

ಗಾಲ್ವನ್‌ ಕಣಿವೆಯಲ್ಲಿ ಚೀನಾ(China)ಸೇನೆಯ ಜೊತೆ ನಡೆದ ಸಂಘರ್ಷದ ಬಳಿಕ ಈ ಕ್ರಮ ಕೈಗೊಳ್ಳಲಾಗಿತ್ತು.  ದೇಶದ ಸಾರ್ವಭೌಮತೆ, ಸಮಗ್ರತೆ ಮತ್ತು ಭದ್ರತೆಗೆ ಅಪಾಯವನ್ನು ತಂದೊಡ್ಡುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೇ ಬ್ಯಾನ್ ಮಾಡಿದ ಹೊರತಾಗಿಯೂ ಕೆಲವೊಂದು ಅಪ್ಲಿಕೇಷನ್ ಗಳು ಕಾರ್ಯನಿರ್ವಹಿಸುತ್ತಿದ್ದರಿಂದ ಇದೀಗ ಎಲ್ಲವನ್ನೂ ಪ್ಲೇಸ್ಟೋರ್ ಗಳಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ.