News

ಹೈನುಗಾರಿಕೆಗೆ 15 ಸಾವಿರ ಕೋಟಿ ನೆರವು

25 June, 2020 10:12 AM IST By:

ಕೊರೋನಾ ಸೋಂಕು ತಡೆಯುವುದಕ್ಕಾಗಿ ಹೈರಲಾದ ಲಾಕ್ಡೌನ್ ನಿಂದಾಗಿ ಹಲವಾರು ಕ್ಷೇತ್ರಘಲು ನಷ್ಟದಲ್ಲಿದ್ದವು. ಎಲ್ಲಾ ಕ್ಷೇತ್ರಗಳಲ್ಲಿ ಉತ್ತೇಜನ ತರಲು ಹೈನೋದ್ಯಮ ಕುಕ್ಕುಟ ಹಾಗೂ ಮಾಂಸ ಸಂಸ್ಕರಣಾ ಘಟಕಗಳಿಗೆ 15 ಸಾವಿರ ಕೋಟಿ ರೂಪಾಯಿ ಮೂಲ ಸೌಕರ್ಯ ನಿಧಿ ತೆಗೆದಿರಿಸಲು ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿದೆ ಎಂದು ಪಶು ಸಂಗೋಪನಾ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದರು.

ಅವರು  ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಆರ್ಥಿಕ ಉತ್ತೇಜನ ಸಂಬಂಧ ಹೈನುಗಾರಿಕೆ, ಕುಕ್ಕುಟೋದ್ಯಮ, ಮಾಂಸ ಸಂಸ್ಕರಣೆ, ಬಾಹ್ಯಾಕಾಶ ಸೇರಿ ಹಲವು ಕ್ಷೇತ್ರಗಳಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದ ಅವರು, ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಹಾಲು ಉತ್ಪಾದನೆ ಹೆಚ್ಚಾಗಲಿದೆ. 15 ಸಾವಿರ ಕೋಟಿ ರೂಪಾಯಿ ನೆರವಿನ ಯೋಜನೆ ಕೋವಿಡ್‌ ಬಿಕ್ಕಟ್ಟು ಎದುರಿಸಲು ಸರಕಾರ ಘೋಷಿಸಿದ್ದ 20 ಲಕ್ಷ ಕೋಟಿ ರೂಪಾಯಿ  ಮೊತ್ತದ ಆರ್ಥಿಕ ಪ್ಯಾಕೇಜ್‌ನ ಭಾಗವಾಗಿದೆ  ಎಂದರು.

ಹಾಲಿನ ಡೇರಿ, ಕೋಳಿ ಫಾರ್ಮ್‌ ಮತ್ತು ಮಾಂಸ ಸಂಸ್ಕರಣಾ ಘಟಕ ಸ್ಥಾಪಿಸಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ ಉತ್ತೇಜನ ನೀಡಲು 15 ಸಾವಿರ ಕೋಟಿ ರೂ. ಅನುದಾನ ಒದಗಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ಈ ಕಂಪನಿಗಳಿಗೆ ಹಾಲಿ ಇರುವ ಹಲವು ವಿನಾಯಿತಿಗಳ ಜತೆಗೆ ಶೇ. 3ರವರೆಗೆ ಬಡ್ಡಿ ರಿಯಾಯಿತಿ ಸಿಗಲಿದೆ. ಇದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ, ಸಂಸ್ಕರಿತ ಮಾಂಸದ ಉತ್ಪನ್ನಗಳ ಉತ್ಪಾದನೆಗೆ ಹಾಗೂ ರಫ್ತಿಗೆ ಉತ್ತೇಜನ ಸಿಗಲಿದೆ ಎಂದರು.