News

ನಕಲಿ ಗೊಬ್ಬರ, ಬಿತ್ತನೆ ಬೀಜ ಮಾರಿದ್ರೆ ಗೂಂಡಾ ಕೇಸ್‌..?Agriculture Minister B.C. ಪಾಟೀಲ್‌ ಏನಂದ್ರು..?

19 March, 2022 11:03 AM IST By: KJ Staff

ರಾಜ್ಯಾದ್ಯಂತ ನಕಲಿ ರಸಗೊಬ್ಬರ, ಬಿತ್ತನೆಬೀಜ, ಕೀಟನಾಶಕಗಳ ಹಾವಳಿ ಜೋರಾಗಿದೆ. ಉತ್ತಮ ಇಳುವರಿಯ ನೀರಿಕ್ಷೆಯಲ್ಲಿರುವ ರೈತರಿಗೆ ಇಂತಹ ದಂಧೆಕೋರರು ರೈತರ ಜೀವನವನ್ನೆ ಹಿಂಡುತ್ತಿದ್ದಾರೆ. ಸದ್ಯ ಈ ಅವ್ಯವಹಾರವನ್ನು ತಡೆಯಲು ಸರ್ಕಾರ ಮುಂದಾಗಿದ್ದು, ರಾಜ್ಯದಲ್ಲಿ ಗೂಂಡಾ ಕಾಯ್ದೆ ಜಾರಿ ಮಾಡುವ ಚಿಂತನೆ ನಡೆಸಿದೆ ಎನ್ನಲಾಗಿದೆ.

ಇದನ್ನು ಓದಿರಿ:ಪಳ-ಪಳ ಹೊಳೆಯುವ ಸೌಂದರ್ಯ ನಿಮ್ಮದಾಗಬೇಕೆ? Vitamin E ನಲ್ಲಿದೆ ರಹಸ್ಯ.

ಈ ಕುರಿತು ಮಾಹಿತಿ ನೀಡಿದ ಕೃಷಿ ಸಚಿವ ಬಿ ಸಿ ಪಾಟೀಲ್‌ ರಾಜ್ಯಾದ್ಯಂತ ನಕಲಿ ರಸ ಗೊಬ್ಬರ,  ಬಿತ್ತನೆ ಬೀಜ ಮಾರಾಟ ಜೋರಾಗಿದೆ.  ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚಿನನ ಕ್ರಮ ವಹಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈಗಾಗಲೇ ನಕಲಿ ರಸಗೊಬ್ಬರದ ಬಗ್ಗೆ ದೂರು ಬಂದ ತಕ್ಷಣವೇ ಸಂಬಂಧ ಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಂಡು ಕೇಸ್‌ ದಾಖಲಿಸುತ್ತಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಇದನ್ನು ಓದಿರಿ: GOODNEWS:ಇನ್ಮುಂದೆ ಹೀಗೆ ಮಾಡಿದ್ರೆ ಸಾಕು, ಜಮೀನಿಗೆ ಹರಿಯಲಿದೆ ಉಚಿತ ನೀರು..!

ಇನ್ನು ಈ ರೀತಿಯ ಮಾರಾಟ ಸಂಬಂಧ 149 ಕಂಪನಿಗಳ ಲೈಸನ್ಸ್ ರದ್ದು ಮಾಡಲಾಗಿದೆ. ನನ್ನ ಅಧಿಕಾರದ ಅವಧಿಯಲ್ಲಿ ಇಷ್ಟು ಲೈಸನ್ಸ್ ರದ್ದು ಮಾಡಿ ಅಮಾನತು ಮಾಡಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಬಿ.ಸಿ.ಪಾಟೀಲ್‌ ಹೇಳಿದರು.

ಇದನ್ನು ಓದಿರಿ: Chocolates price hike: ಶೀಘ್ರದಲ್ಲೆ ಗಗನಕ್ಕೆರಲಿದೆ ಚಾಕೊಲೇಟ್ಸ್‌ ಬೆಲೆ.. ಇದೇ ಕಾರಣ