News

ಯುವಕರಿಗೆ ಸಿಹಿಸುದ್ದಿ! ಭಾರತ ಸೇನೆಯನ್ನು ಸೇರಲು ಆಸೆ ಇಟ್ಟವರಿಗೆ ಸಿಹಿ ಸುದ್ಧಿ!

14 December, 2021 11:01 AM IST By: Ashok Jotawar
Army recruitment

ಇಂಡಿಯನ್ ಆರ್ಮಿ, ಯಾವುದೇ ನವ ಯುವಕನು, ಮೊದಲಿಗೆ  ಅವನ ಸಣ್ಣ ವಯಸ್ಸಿನ  ಆಸೆ ಕೇಳಿದರೆ, ಅದು ಸೈನಿಕ ಎಂದೇ ಬರೋದು. ಜೀವನದ ಏಳು ಬೀಳುಗಳಿಗೆ ಸಿಲುಕಿ ತಮ್ಮ ಚಿಕ್ಕಂದಿನ ಕನಸನ್ನು ಬಿಟ್ಟು ಬೇರೆ ಕೆಲಸ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ತುಂಬಾ ಜನ ವಿದ್ಯಾರ್ಥಿಗಳು ತಾವು ಸೈನ್ಯಕ್ಕೆ ಸೇರಲು ಕೇವಲ ಫಿಸಿಕಲ್ ಇರುತ್ತೆ ಹಾಗೆಯೆ ಮುಂತಾದ ದೈಹಿಕ ಕೆಲಸ ಮಾತ್ರ ಇರುತ್ತೆ ಅಂದುಕೊಂಡು ಸೈನ್ಯ ಸೇರುವ ಕನಸನ್ನು ತಮ್ಮಲ್ಲೆ ತಾವು ಹಿಸುಕಿಕೊಳ್ಳುತ್ತಾರೆ. ಮತ್ತು ತಾವು ಓದಿರುವ ವ್ಯಾಸಂಗವನ್ನು ಬೈಯುತ್ತಾರೆ. ಆದರೆ ಭಾರತ ಸೈನ್ಯ ದೇಹದ ಶಕ್ತಿ ಯೊಂದಿಗೆ ಯುಕ್ತಿಗೂ ಬೆಲೆಕೊಡುತ್ತೆ.

ಕಾರಣ 2021 ನೇ ಸಾಲಿನ ಟೆಕ್ನಿಕಲ್ ಡಿಪಾರ್ಟ್ಮೆಂಟ್' ನಲ್ಲಿ ಹೊಸದಾಗಿ ಸೈನ್ಯಕ್ಕೆ ಯುವಕರನ್ನು ಭರ್ತಿ ಮಾಡಕೊಳ್ಳಲಿದೆ.

ಭಾರತದ ಸೈನ್ಯ  ಎಂಜಿನಿಯರ್ ವ್ಯಾಸಾಂಗ ಮಾಡಿದವರಿಗೆ ಸಿಹಿಸುದ್ಧಿ ನೀಡಿದೆ. ಮತ್ತು ವಿವಿಧ ಎಂಜಿನಿಯೆರಿಂಗ್  ಕ್ಷೇತ್ರಗಳಲ್ಲಿ ಭಾರತ ಸೈನ್ಯ ಯುವಕರಿಗೆ ಅವಕಾಶ ಕೊಡಲಿದೆ.

ಈ ಒಂದು ನೋಟಿಫಿಕೇಷನ್ಸ್ ಗಳು ಆಸಕ್ತಿಯುಳ್ಳ ಯುವಕರು joinindianarmy.nic.in ನಲ್ಲಿ ಪಡೆಯಬಹುದು.

ಆಸಕ್ತಿಯುತ ಮದುವೆಯಾಗದ, ಮತ್ತು ಎಂಜಿನಿಯರಿಂಗ್ ನಲ್ಲಿ ಪದವೀಧರರು ಆಗಿರಬೇಕು.                                                                           

ಯಾವ ಯಾವ ಕ್ಷೇತ್ರ ಗಳಲ್ಲಿ ಎಷ್ಟು ಖಾಲಿ ಜಾಗ ಇದೆ?

1 : ಸಿವಿಲ್/ ಕಟ್ಟಡ ತಂತ್ರಜ್ಞಾನದಲ್ಲಿ :9

2 : ವಾಸ್ತುಶಿಲ್ಪ : 1

3  :ಯಾಂತ್ರಿಕ ( ಮೆಕ್ಯಾನಿಕಲ್) :5

4 : ಎಲೆಕ್ಟ್ರಿಕಲ್ :3

5 : ಕಂಪ್ಯೂಟರ್ ಸೈನ್ಸ್ :8

6 : ಇನ್ಫೋರ್ಮೀಷನ್ ಟೆಕ್ನೋಲೊಜಿ :3

7 : ಟೆಲಿಕಮ್ಯುನಿಕೇಷನ್ :1

8 : ಎಲೆಕ್ಟ್ರಾನಿಕ್ಸ್ : 1

9 :ಯೆರೋನೋಟಿಕಲ್/ ಏರೋಸ್ಪೇಸ್/ಎವಿನ್ನಿಕ್ಸ್: 1

10 : ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಷನ್ : 1

11 :ಇಂಡಸ್ಟ್ರಿಯಲ್ / ಮ್ಯಾನುಫ್ಯಾಕ್ಚರಿಂಗ್ ಎಂಜಿನಿಯರಿಂಗ್ :1

ಇತ್ಯಾದಿ ಹುದ್ದೆಗಳನ್ನು ಭಾರತ ಸೇನೆ ಎಂಜಿನಿಯರಿಂಗ್ ನಲ್ಲಿ ವ್ಯಾಸಾಂಗ ಮಾಡಿದವರಿಗೆ ಕೆಲಸದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಇದರಲ್ಲಿ ಹೆಸರು  ನೋಂದಣೆ ಮಾಡಲು ನಿಮಗೆ ಬೇಕಾದ ಅರ್ಹತೆ ಗಳು :

ಎಂಜಿನಿಯರಿಂಗ್ ನಲ್ಲಿ ಉತ್ತೀರ್ಣ ರಾಗಿರಬೇಕು, ಇಲ್ಲವಾದರೆ ಎಂಜಿನಿಯರಿಂಗ್ ಕೋರ್ಸ್ ನಲ್ಲಿ ಕೊನೆಯ ವರ್ಷದ ವಿದ್ಯಾರ್ಥಿ ಯಾಗಿರಬೇಕು. ಮತ್ತು ತಾನು ಕೊನೆಯ ವರ್ಷದ ವ್ಯಾಸಂಗವನ್ನು ಎಷ್ಟು ಅಂಕಗಳಿಂದ ಉತ್ತೀರ್ಣ ವಾಗುತ್ತೇನೆ ಯಂಬ ಸ್ಪಷ್ಟ ಪುರಾವೆ ನೀಡಬೇಕು.

ಮತ್ತು ಅರ್ಜಿದಾರರು 2 ಜೂಲೈ 1995 -2 ಜುಲೈ 2002 ರೊಳಗೆ ಜನಿಸಿರಬೇಕು .

ಮತ್ತು ಇದರಲ್ಲಿ ರೈತರ ಮಕ್ಕಳಿಗೆ ವಿಶೇಷ ಕೋಟಾ ಕೂಡಾ ಇದೆ!

ಇದನ್ನು ನೋಡಿದರೆ ಮನಸ್ಸಿನಲ್ಲಿ ಒಂದೇ ಮಾತು ಬರೋದು ಜೈ ಜವಾನ್ ಜೈ ಕಿಸಾನ್.

ಇನ್ನಷ್ಟು ಓದಿರಿ :

ಹೊಸ ಸುದ್ಧಿ ಬಿಸಿ ಸುದ್ಧಿ ಗರ್ಮಾ ಗರಂ ಸುದ್ಧಿ! ತಂಪಾದ ವಾತಾವರಣದಲ್ಲಿ ಬೆಚ್ಚನೆಯ ಗಾಡಿಯ ಸುದ್ಧಿ!

ಚಿನ್ನ ಚಿನ್ನ!ಚಿನ್ನದ ಬೆಲೆ ಎಷ್ಟು ಎಂಬುದು ಗೊತ್ತಾ? ಚಿನ್ನ ಎಷ್ಟು ಏರಿದೆ ಎಷ್ಟು ಇಳಿದಿದೆ ಮತ್ತು 10 ಗ್ರಾಂ ಚಿನ್ನದ ಬೆಲೆ ಎಷ್ಟು?