ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ (cylinder price ) ಆಗಿದೆ.
ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳವಾಗುವುದಷ್ಟೇ ವರದಿಯಾಗುತ್ತಿತ್ತು.
ಇದೀಗ ಸಿಲಿಂಡರ್ ಖರೀದಿಸುವವರಿಗೆ ಹೊಸದೊಂದು ಸಿಹಿಸುದ್ದಿ ಸಿಕ್ಕಿದೆ.
ವಾಣಿಜ್ಯ ಬಳಕೆಯ ಬೆಲೆಯ ಸಿಲಿಂಡರ್ ದರದಲ್ಲಿ ಇದೀಗ ಇಳಿಕೆಯಾಗಿದೆ.
ವಾಣಿಜ್ಯ ಬಳಕೆಯ ಸಿಲಿಂಡರ್ 19 ಕೆಜಿಯ ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ ಆಗಿದೆ.
ಇದೀಗ ಸಿಲಿಂಡರ್ ಬೆಲೆಯು ದೆಹಲಿಯಲ್ಲಿ 1,796 ರೂಪಾಯಿ ಆಗಿದೆ.
ಈಗ 19 ಕೆಜಿಯ ಸಿಲಿಂಡರ್ ಬೆಲೆಯು 39.50 ರೂಪಾಯಿ ಇಳಿಕೆಯಾದಂತಾಗಿದೆ.
ಏರಿಕೆ ನಂತರ ಇದೀಗ ಇಳಿಕೆಯ ಸರದಿ
ಈಚೆಗಷ್ಟೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ (Commercial use cylinder price) ಹೆಚ್ಚಳವಾಗಿತ್ತು.
ತೈಲ ಕಂಪನಿಗಳು ಡಿಸೆಂಬರ್ ಒಂದರದಷ್ಟೇ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದವು.
ಇದಾದ 20 ದಿನಗಳ ನಂತರದಲ್ಲಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿರುವುದು ವರದಿ ಆಗಿದೆ.
ಮನೆ ಬಳೆಕೆಯ ಸಿಲಿಂಡರ್ ಬೆಲೆ ?
ಮನೆ ಬಳಕೆಯ ಸಿಲಿಂಡರ್ ಬೆಲೆಯಲ್ಲಿ (Home use cylinder price?) ವ್ಯತ್ಯಾಸವಾಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ಹೋಟೆಲ್, ರೆಸ್ಟೋರೆಂಟ್ ಮಾಲೀಕರು ನಿರಾಳ
ತೈಲ ಕಂಪನಿಗಳು ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ದರವನ್ನು ಇಳಿಕೆ ಮಾಡಿರುವುದರಿಂದಾಗಿ ಹೋಟೆಲ್
ಹಾಗೂ ರೆಸ್ಟೋರೆಂಟ್‌ನ ಮಾಲೀಕರು ತುಸು ನಿರಾಳರಾಗುವಂತೆ ಆಗಿದೆ.
ಇತ್ತೀಚಿನ ದಿನಗಳಲ್ಲಿ ಸಿಲಿಂಡರ್‌ನ ದರದಲ್ಲಿ ಹೆಚ್ಚಳವಾಗುವುದು ವರದಿಯಾಗುತ್ತಲ್ಲೇ ಇತ್ತು.
ಇದೀಗ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿರುವುದು ವರದಿ ಆಗಿದೆ.