News

ಮನೆ ಕಟ್ಟಿಕೊಳ್ಳುವ ಬಡವರಿಗೆ ಸಿಎಂ ಬೊಮ್ಮಾಯಿಯವರಿಂದ ಸಿಹಿಸುದ್ದಿ!

31 January, 2023 5:07 PM IST By: Kalmesh T
Good news from CM Bommai for the poor who build houses!

ಮನೆ ಕಟ್ಟಿಕೊಳ್ಳಲು ಬಯಸುವಂತಹ ಬಡವರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿಯವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

Poly house subsidy: ಪಾಲಿ ಹೌಸ್ ನಿರ್ಮಾಣಕ್ಕೆ ರೈತರಿಂದ ಅರ್ಜಿ ಆಹ್ವಾನ: ಅರ್ಜಿ ಸಲ್ಲಿಕೆಗೆ ಫೆ.10 ಕೊನೆ ದಿನ!

ಬಡವರು  ನಿವೇಶನ ಕೊಳ್ಳಲು ಹಾಗೂ ಗೃಹ ನಿರ್ಮಾಣ ಮಾಡಿಕೊಳ್ಳಲು ಅನುಕೂಲವಾಗುವಂತೆ ಕಾನೂನು ಸರಳೀಕರಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ  ಬೊಮ್ಮಾಯಿ ತಿಳಿಸಿದರು.

ಇಂದು ಯಲಹಂಕ ತಾಲ್ಲೂಕಿನ ಅಗ್ರಹಾರಪಾಳ್ಯದಲ್ಲಿ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯ ಲೋಕಾರ್ಪಣೆ ಮತ್ತು ವಸತಿಗಳ ಹಸ್ತಾಂತರ ಮಾಡಿ ಅವರು ಮಾತನಾಡಿದರು.

ಬರುವ  ದಿನಗಳಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟವಾಗಲಿದೆ. ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ನಿರ್ದಿಷ್ಟ ರಿಯಾಯಿತಿಗಳಿಲ್ಲ.

ಫೆಬ್ರುವರಿ 22ರಿಂದ 25ರವರೆಗೆ “ರಾಷ್ಟ್ರೀಯ ತೋಟಗಾರಿಕೆ ಮೇಳ – 2023” ಆಯೋಜನೆ

ಭೂಮಿ ಬೆಲೆ ಹೆಚ್ಚಾಗಲು ಬೇಡಿಕೆ ಹೆಚ್ಚಾಗಿದೆ ಮತ್ತು ನಾವು ಮಾಡಿರುವ ಕಾನೂನುಗಳಿಂದ ಸಾಮಾನ್ಯ ಜನರು ನಿವೇಶನ ಖರೀದಿ ಮಾಡುವ ಪರಿಸ್ಥಿತಿಯಲ್ಲಿಲ್ಲ.

ಹೀಗಾಗಿ ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು, ನಿರ್ಬಂಧಗಳನ್ನು ದೂರಮಾಡಿ ನೇರವಾಗಿ ಕೈಗೆಟುಕುವ ಬೆಲೆಯಲ್ಲಿ ಜಮೀನು ದೊರೆಯುವ ವ್ಯವಸ್ಥೆಯನ್ನು  ಜಾರಿಗೆ ತರಲಾಗುವುದು.  

ವಸತಿಗಾಗಿಯೇ ಜಮೀನು ಪಡೆಯಲು, ಮನೆ ಕಟ್ಟಲು ಎಲ್ಲಾ ಕಾನೂನನ್ನು ಸರಳೀಕರಣ ಮಾಡಲಾಗುವುದು.‌ ಹಾಗಾದಾಗ ಬಡವರಿಗೆ ಮನೆ ಹಾಗೂ ನಿವೇಶನ ನೀಡಬಹುದು ಎಂದರು.

ಈ ಸರ್ಕಾರಿ ನೌಕರರಿಗೆ ಸಿಹಿಸುದ್ದಿ : ಹಳೆ ಪಿಂಚಣಿ ಮರು ಜಾರಿಗೆ ಸುಪ್ರೀಂ ಕೋರ್ಟ್‌ ತೀರ್ಪು!

3 ಲಕ್ಷಕ್ಕಿಂತ ಹೆಚ್ಚು ನಿವೇಶನಗಳನ್ನು ಸೋಮ್ಮಣ್ಣ ಅವರು ರಾಜ್ಯದಲ್ಲಿ ನೀಡಿರುವುದು ದಾಖಲೆ. ಪ್ರಗತಿಪರ ಚಿಂತನೆ ಮಾಡಿದಾಗ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ನಮ್ಮ ಸರ್ಕಾರ  ಸಮಸ್ಯೆಯನ್ನು ಬಿಟ್ಟು ಹೋಗುವುದಿಲ್ಲ‌. ಪರಿಹಾರ ಕೊಟ್ಟು ಜನರಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವ ಕೆಲಸ ಮಾಡಲಿದೆ ಎಂದರು. 

ಬಡವರಿಗೆ ಮನೆ

ತಾನು ಹಾಗೂ ತನ್ನ ಕುಟುಂಬ ಒಂದು ಸೂರಿನಡಿ ಗೌರವದಿಂದ ಬದುಕಬೇಕೆನ್ನುವುದು ಪ್ರತಿ ಮನುಷ್ಯನ ಆಸೆ.  ಮನುಷ್ಯ ಮಾತ್ರವಲ್ಲದೇ  ಪಕ್ಷಿಗಳು ಒಂದು ಗೂಡು ಕಟ್ಟಿ, ಸಂಸಾರ ಮಾಡುವುದು ಕಾಣುತ್ತೇವೆ. ಪಕ್ಷಿಗಳಿಗೆ ಇರುವ ಸೌಭಾಗ್ಯ ಮನುಷ್ಯರಿಗೂ ಇರಬೇಕು. 

ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಬಡವರಿಗೆ ಪುಟ್ಟ ಮನೆ ಕಟ್ಟಿ ಕೊಡುವ ಅವಕಾಶವನ್ನು ಸಮಾಜ ದೊಡ್ಡ ಪ್ರಮಾಣದಲ್ಲಿ ಮಾಡಬೇಕು. ಸರ್ಕಾರ  ಈ ಕೆಲಸ ಮಾಡಬೇಕು ಎಂದರು.

ಭಾರತೀಯ ಅಂಚೆ ಇಲಾಖೆಯಲ್ಲಿವೆ 40,889 ಭರ್ಜರಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಕೆಗೆ ಫೆ.16 ಕೊನೆ ದಿನ

5 ಲಕ್ಷ ಮನೆಗಳು ಅಂತಿಮ ಹಂತದಲ್ಲಿ

ಘೋಷಣೆಗಳು ಬಹಳಷ್ಟು ಆಗುತ್ತವೆ‌ ಆದರೆ, ಅದಕ್ಕೆ ಹಣ ಮೀಸಲಿಡಬೇಕು. ಆರು ವರ್ಷಗಳ ಹಿಂದೆ 15 ಲಕ್ಷ  ಮನೆ ಕಟ್ಟುವುದಾಗಿ ಘೋಷಣೆಯಾಯಿತು.  ಹಿಂದಿನ ಸರ್ಕಾರ ಚುನಾವಣೆ ಸಂದರ್ಭದಲ್ಲಿ 15 ಲಕ್ಷ ಮನೆ ಘೋಷಣೆ ಮಾಡಿದರು. 

ಅದಕ್ಕೆ ಹಣ ಮೀಸಲಿಡದೇ ಹೋದರು‌. 15 ಸಾವಿರ ಕೋಟಿ ರೂ. ಅಗತ್ಯವಿದ್ದರೆ,  3 ಸಾವಿರ ಕೋಟಿ ಮೀಸಲಿಟ್ಟರು.  ಅಗತ್ಯವಿರುವಷ್ಟು ಮನೆಗಳನ್ನು ಕಟ್ಟಲು ಸಾಧ್ಯವಾಗಲಿಲ್ಲ.

ನಮ್ಮ ಸರ್ಕಾರ ಅಧಿಕಾರಕ್ಕೆ  ಬಂದ ನಂತರ  ಅಗತ್ಯ ಅನುದಾನ ಒದಗಿಸಿ ಸುಮಾರು 10 ಲಕ್ಷ ಮನೆಗಳನ್ನು ಕಟ್ಟುವ ಗುರಿ ಹೊಂದಿ ಇಂದು 5 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಕೊನೆಯ ಹಂತದಲ್ಲಿ ಇದ್ದೇವೆ ಎಂದರು. 

ಸೋಮಣ್ಣ ಅವರು ವಸತಿ ಸಚಿವ ರಾದ ನಂತರ ಗೃಹ ನಿರ್ಮಾಣ ಕ್ಕೆ ಒಂದು ರೂಪುರೇಷೆ ನೀಡಿ, ಬಾಕಿ ಇರುವ ಮನೆಗಳ ನಿರ್ಮಾಣವಾಗಬೇಕು.

ಆಯ್ಕೆಯಾಗಿದ್ದ ಅನರ್ಹರನ್ನು ತೆಗೆಯಲು ವಿಶೇಷ ಸಾಫ್ಟವೇರ್ ಅಳವಡಿಸಿದ್ದರು. ಗ್ರಾಮೀಣ ಪ್ರದೇಶದ ಮನೆಗಳ ನಿರ್ಮಾಣಕ್ಕೆ ಕೈಗೊಂಡು ಈ ವರ್ಷ 5 ಲಕ್ಷ ಮನೆಗಳ ನಿರ್ಮಾಣ ಮಾಡಿ ಅಂತಿಮ ಹಂತಕ್ಕೆ ತಂದಿದ್ದಾರೆ.