News

ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ: ನಿಮ್ಮ ಖಾತೆಗೆ ಇಂದು ಬೀಳಲಿದೆ ವಿದ್ಯಾನಿಧಿ ಹಣ

23 March, 2023 4:29 PM IST By: A C Shobha
Good news for students

ಕರ್ನಾಟಕ ಸರ್ಕಾರವು ಆಟೋರಿಕ್ಷಾ, ಮೋಟಾರು ಕ್ಯಾಬ್ ಚಾಲಕರ ಮಕ್ಕಳಿಗೂ ವಿದ್ಯಾನಿಧಿ ಯೋಜನೆಯನ್ನು ವಿಸ್ತರಿಸಿದ್ದಾರೆ , ಈಗ ಆಟೋರಿಕ್ಷಾ ಚಾಲಕರು ಹಾಗೂ ಮೋಟಾರು ಕ್ಯಾಬ್ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ವಿದ್ಯಾರ್ಥಿನಿಧಿಯನ್ನು ನೀಡುತ್ತಿದ್ದು , ಇಂದು ಸಿಎಂ ಬೊಮ್ಮಾಯಿ ಫಲಾನುಭವಿಗಳ ಖಾತೆಗೆ ಹಣವನ್ನು ನೇರ ವರ್ಗಾವಣೆ ಮಾಡಿದರು .

ಪಿಯುಸಿ, ಐಟಿಐ, ಡಿಪ್ಲೋಮಾ ಮುಂತಾದ ಪದವಿಗೂ ಮುನ್ನ ಪಡೆಯುವ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ರೂ. 2500 ಹಾಗೂ ವಿದ್ಯಾರ್ಥಿನಿಯರಿಗೆ ರೂ. 3000. ಬಿಎ, ಬಿಎಸ್ಸಿ, ಬಿಕಾಂ ಮುಂತಾದ ಪದವಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ರೂ. 5000, ವಿದ್ಯಾರ್ಥಿನಿಯರಿಗೆ ರೂ. 5500. ಎಂ.ಬಿ.ಬಿ.ಎಸ್., ಬಿ.ಇ., ಬಿ.ಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ. 10,000, ವಿದ್ಯಾರ್ಥಿನಿಯರಿಗೆ ರೂ. 11,000 ,ಎಲ್.ಎಲ್.ಬಿ, ಪ್ಯಾರಾಮೆಡಿಕಲ್, ಬಿ.ಫಾರ್ಮ್, ನರ್ಸರಿ ಇತ್ಯಾದಿ ವೃತ್ತಿಪರ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ರೂ. 7500, ವಿದ್ಯಾರ್ಥಿನಿಯರಿಗೆ ರೂ. 8000.ಗಳ ವಾರ್ಷಿಕ ಶಿಷ್ಯ ವೇತನ ನೀಡಲಾಗುತ್ತಿದೆ.

2.ಪಂಜಾಬ್ ನಲ್ಲಿ ಆಲೂಗಡ್ಡೆ ಬೆಲೆ ಭಾರಿ ಕುಸಿತ ಕಂಡು ಬಂದಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ , ಕೆಜಿ ಆಲೂಗಡ್ಡೆ ನಾಲ್ಕು ರೂಪಾಯಿಗೆ ಮಾರಾಟವಾಗುತ್ತಿದೆ. ಆದ್ದರಿಂದ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ರೈತರು ಆಗ್ರಹ ಮಾಡಿದ್ದಾರೆ .

ಪಂಜಾಬ್ ನಲ್ಲಿಈ ವರ್ಷ ಸುಮಾರು 1.14 ಲಕ್ಷ ಹೆ. ಪ್ರದೇಶದಲ್ಲಿ ಆಲೂಗಡ್ಡೆಯನ್ನು ಬಿತ್ತನೆ ಮಾಡಲಾಗಿದ್ದು, 31.50 ಲಕ್ಷ ಮೆಟ್ರಿಕ್ ಟನ್ ಫಸಲನ್ನು ಪಡೆಯಲಾಗಿದೆ.
ಅಲ್ಲದೆ,ದೇಶದ ಪಂಜಾಬಿನಿಂದ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ್ ಸೇರಿದಂತೆ ಹಲವು ರಾಜ್ಯಗಳಿಗೆ ಆಲೂಗಡ್ಡೆ ಸರಬರಾಜು ಮಾಡಲಾಗುತ್ತಿತ್ತು.

ಈ ಬಾರಿ ನೆರೆಯ ರಾಜ್ಯಗಳಲ್ಲೂ ಸಹ ಉತ್ತಮ ಆಲೂಗಡ್ಡೆ ಫಸಲು ಬಂದಿರುವುದರಿಂದ ಪಂಜಾಬಿನಿಂದ ಬರುವ ಆಲೂಗಡ್ಡೆಯ ಬೇಡಿಕೆ ಕುಸಿತ ಗೊಂಡಿದೆ. ಹೀಗಾಗಿ ಅತಿ ಕಡಿಮೆ ಮಟ್ಟಕ್ಕೆ ಆಲೂಗಡ್ಡೆಯ ಬೆಲೆ ಕುಸಿದಿದ್ದು, ಸರ್ಕಾರ ಆದಷ್ಟು ಬೇಗ ಮಧ್ಯ ಪ್ರವೇಶಿಸಿ ಬೆಂಬಲ ಬೆಲೆಯನ್ನು ನೀಡಬೇಕೆಂದು ಬೆಳೆಗಾರರು ಒತ್ತಾಯ ಮಾಡಿದ್ದಾರೆ.

ಇದನ್ನೂ ಓದಿ -₹2800 ಕೋಟಿ ರೂಪಾಯಿಯ ನೀರಾವರಿ ಯೋಜನೆಗಳ ಪ್ರಾರಂಭ: ಸಿಎಂ ಬೊಮ್ಮಾಯಿ

3.ಈಗಾಗಲೇ ದಿನಪ್ರತಿ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ ಅದೇ ರೀತಿ ಈ ಬೇಸಿಗೆಯಲ್ಲಿ ಹಾಲಿನ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಪೂರೈಕೆಯ ಬಿಕ್ಕಟ್ಟು ಮತ್ತು ಆಹಾರದ ಹೆಚ್ಚಿನ ವೆಚ್ಚದ ಕಾರಣದಿಂದಾಗಿ, 'ಹಾಲು ಮತ್ತು ಉತ್ಪನ್ನಗಳಲ್ಲಿ' ಹಣದುಬ್ಬರ ಪ್ರಮುಖ ಕಾರಣವಾಗಿದೆ.

ಗ್ರಾಹಕ ಬೆಲೆ ಸೂಚ್ಯಂಕದಲ್ಲಿ (CPI) 6.61% ನಷ್ಟು ಗಮನಾರ್ಹ ತೂಕವನ್ನು ಹೊಂದಿರುವ ಹಾಲು ಮತ್ತು ಉತ್ಪನ್ನಗಳಲ್ಲಿನ ಹಣದುಬ್ಬರವು ಕಳೆದ ವರ್ಷ ಏಪ್ರಿಲ್‌ನಿಂದ ಏರುತ್ತಿದೆ ಮತ್ತು ಫೆಬ್ರವರಿ 2023 ರಲ್ಲಿ 9.65% ರಷ್ಟಿತ್ತು. ಮದರ್ ಡೈರಿ ಮತ್ತು ಅಮುಲ್ ಸೇರಿದಂತೆ ಸಂಘಟಿತ ಕಂಪನಿಗಳು ಹಾಲಿನ ಬೆಲೆಯನ್ನು ಹೆಚ್ಚಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ , ಮೇವಿನ ಬೆಲೆ, ಲಿಂಪಿ ಚರ್ಮದ ಕಾಯಿಲೆಯ ವರದಿಗಳಿಂದಾಗಿ ಹಲವು ಬಾರಿ ಬೆಲೆ ಏರಿಕೆಯಾಗಿದೆ .

"ನವೆಂಬರ್ ತನಕ ನಾವು ಹಾಲಿನ ಬೆಲೆಯಲ್ಲಿ ಯಾವುದೇ ಕಡಿತವನ್ನು ನಿರೀಕ್ಷಿಸುವುದಿಲ್ಲ" ಎಂದು ಭಾರತೀಯ ಡೈರಿ ಅಸೋಸಿಯೇಷನ್ ​​ಅಧ್ಯಕ್ಷ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಮಾಜಿ ಎಂಡಿ ಆರ್ .ಎಸ್ ಸೋಧಿ ಹೇಳಿದ್ದಾರೆ. ಹಾಗೆ ಹಾಲಿನ ಬೆಲೆಯಲ್ಲಿ ಸ್ಥಿರತೆಯನ್ನು ಚಳಿಗಾಲದ ತಿಂಗಳುಗಳಲ್ಲಿ ಮಾತ್ರ ನಿರೀಕ್ಷಿಸಬಹುದು ಎಂದು ಅವರು ಹೇಳುತ್ತಾರೆ.

4.ಈಗಾಗಲೇ ದಿನಪ್ರತಿ ಒಂದಲ್ಲ ಒಂದು ವಸ್ತುಗಳ ಬೆಲೆ ಏರಿಕೆ ಆಗುತ್ತಲೇ ಇದೆ ಅದೇ ರೀತಿ ಈ ಬೇಸಿಗೆಯಲ್ಲಿ ಹಾಲಿನ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದೆ. ಪೂರೈಕೆಯ ಬಿಕ್ಕಟ್ಟು ಮತ್ತು ಆಹಾರದ ಹೆಚ್ಚಿನ ವೆಚ್ಚದ ಕಾರಣದಿಂದಾಗಿ, 'ಹಾಲು ಮತ್ತು ಉತ್ಪನ್ನಗಳಲ್ಲಿ' ಹಣದುಬ್ಬರ ಪ್ರಮುಖ ಕಾರಣವಾಗಿದೆ.