ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂದರೆ ಇಪಿಎಫ್‌ಒದ 7 ಕೋಟಿ ಚಂದಾದಾರರಿಗೆ ಈ ತಿಂಗಳ ಅಂತ್ಯದ ವೇಳೆಗೆ ಉತ್ತಮ ಸುದ್ದಿ ನೀಡಲಿದೆ. ಏನಿದು ತಿಳಿಯಿರಿ
ರೈತರಿಗೆ ಸಿಹಿಸುದ್ದಿ: 2023-24 ರ ಎಲ್ಲಾ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕ್ಯಾಬಿನೆಟ್ ಅನುಮೋದನೆ!
ಈ ಬಾರಿ ಸರ್ಕಾರದ ಖಾತೆಗೆ ಜಮೆಯಾಗಿರುವ ಒಟ್ಟು 72,000 ಸಾವಿರ ಕೋಟಿ ರೂ.ಗಳನ್ನು ಉದ್ಯೋಗಿಗಳ ಖಾತೆಗೆ ಜಮಾ ಮಾಡಲಾಗಿದೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ ಅಂದರೆ ಇಪಿಎಫ್‌ಒದ (EPFO) 7 ಕೋಟಿ ಚಂದಾದಾರರಿಗೆ ಈ ತಿಂಗಳ ಅಂತ್ಯದ ವೇಳೆಗೆ ಉತ್ತಮ ಸುದ್ದಿ ನೀಡಲಿದೆ.
ಸರ್ಕಾರವು 2022 ರ ಹಣಕಾಸು ವರ್ಷದ ಬಡ್ಡಿಯನ್ನು ಇಪಿಎಫ್(EPF) ಖಾತೆದಾರರ ಖಾತೆಗೆ ವರ್ಗಾಯಿಸಲಿದೆ. ಈ ಬಾರಿ ಶೇ. 8.1 ರಷ್ಟು ದರದಲ್ಲಿ ಬಡ್ಡಿ ಲಭ್ಯವಾಗಲಿದೆ.
ರಾಜ್ಯದ ಒಟ್ಟು 50.36 ಲಕ್ಷ ರೈತರಿಗೆ ₹1007.26 ಕೋಟಿ ಸಹಾಯಧನ- ಕೃಷಿ ಸಚಿವ ಬಿ.ಸಿ.ಪಾಟೀಲ್
ಇಲ್ಲಿಯವರೆಗೆ ಬಂದಿರುವ ಮಾಹಿತಿಯ ಪ್ರಕಾರ, ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು 2022 ರ ಹಣಕಾಸು ವರ್ಷದಲ್ಲಿ ಪಿಎಫ್ ಖಾತೆಯಲ್ಲಿ ಪಡೆದ ಬಡ್ಡಿಯನ್ನು ಲೆಕ್ಕ ಹಾಕಿದೆ.
ಶೀಘ್ರದಲ್ಲೇ ಖಾತೆದಾರರ ಖಾತೆಗೆ ವರ್ಗಾಯಿಸಲಾಗುವುದು. ಈ ಬಾರಿ ಸರ್ಕಾರದ ಖಾತೆಗೆ ಜಮೆಯಾಗಿರುವ ಒಟ್ಟು 72 ಸಾವಿರ ಕೋಟಿ ರೂ.ಗಳನ್ನು ಉದ್ಯೋಗಿಗಳ ಖಾತೆಗೆ ಜಮಾ ಮಾಡಲಾಗಿದೆ.
ಯಾವಾಗ ವರ್ಗಾವಣೆಯಾಗಲಿದೆ ಹಣ?
ಕಳೆದ ವರ್ಷ ಜನರು ಬಡ್ಡಿಗಾಗಿ 6 ರಿಂದ 8 ತಿಂಗಳು ಕಾಯಬೇಕಾಗಿತ್ತು ಎಂಬುದು ಗಮನಿಸಬೇಕಾದ ಸಂಗತಿ. ಆದರೆ, ಕಳೆದ ವರ್ಷ ಕೋವಿಡ್‌ನಿಂದಾಗಿ ವಾತಾವರಣವೇ ಕ್ಲಿಷ್ಟವಾಗಿತ್ತು.
PM Kisan Samman Sammelan 2022: ರೈತರ ಖಾತೆಗೆ ಬರಲಿದೆ ನೇರವಾಗಿ 16,000 ಕೋಟಿ!
ಆದರೆ, ಈ ವರ್ಷ ಸರ್ಕಾರ ವಿಳಂಬ ಮಾಡುವುದಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಈ ತಿಂಗಳ ಅಂತ್ಯದೊಳಗೆ ಬಡ್ಡಿ ಹಣವನ್ನು ಖಾತೆಗೆ ವರ್ಗಾಯಿಸಬಹುದು.
ಈ ವರ್ಷದ ಬಡ್ಡಿ 40 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಟ್ಟದಲ್ಲಿದೆ. ನಿಮ್ಮ ಪಿಎಫ್ ಖಾತೆಯಲ್ಲಿ 10 ಲಕ್ಷ ರೂಪಾಯಿ ಇದ್ದರೆ ನಿಮಗೆ ಬಡ್ಡಿಯಾಗಿ 81,000 ರೂಪಾಯಿ ಸಿಗುತ್ತದೆ.
ನಿಮ್ಮ ಪಿಎಫ್ ಖಾತೆಯಲ್ಲಿ 7 ಲಕ್ಷ ರೂಪಾಯಿ ಇದ್ದರೆ, ನಿಮಗೆ ಬಡ್ಡಿಯಾಗಿ 56,700 ರೂ. ನಿಮ್ಮ ಪಿಎಫ್ ಖಾತೆಯಲ್ಲಿ 5 ಲಕ್ಷ ರೂಪಾಯಿ ಇದ್ದರೆ ಬಡ್ಡಿಯಾಗಿ 40,500 ರೂಪಾಯಿ ಬರುತ್ತದೆ.
ನಿಮ್ಮ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ ಇದ್ದರೆ 8,100 ರೂಪಾಯಿ ಬರುತ್ತದೆ.