News

ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ! ಈ ಮಹತ್ವದ ಸುದ್ದಿಯನ್ನು ತಪ್ಪದೇ ಓದಿ

14 March, 2023 2:40 PM IST By: Kalmesh T
Good news for pensioners from the central government! Read this important news without missing

ಉದ್ಯೋಗದಿಂದ ನಿವೃತ್ತಿ ಪಡೆದುಕೊಂಡು ಸದ್ಯ ಪಿಂಚಣಿ ಪಡೆಯುತ್ತಿರುವಂತಹ ಹಿರಿಯ ನಾಗರಿಕರಿಗೆ ಇಲ್ಲಿದೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ. ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ ನೀಡಿದೆ. ಅರವತ್ತು ವರ್ಷ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರುವವರು ಗಮನಿಸಿ

e-SHRAM portal : ಅಸಂಘಟಿತ ಕಾರ್ಮಿಕರ ಸಮಗ್ರ ಡೇಟಾಬೇಸ್ ರಚಿಸಲು ನೋಂದಣಿ ಕಲ್ಪಿಸುತ್ತದೆ

ಉದ್ಯೋಗದಿಂದ ನಿವೃತ್ತಿ ಪಡೆದುಕೊಂಡು ಸದ್ಯ ಪಿಂಚಣಿ ಪಡೆಯುತ್ತಿರುವಂತಹ ಹಿರಿಯ ನಾಗರಿಕರಿಗೆ ಇಲ್ಲಿದೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ.

ಹಿರಿಯ ನಾಗರಿಕರಿಗೆ ಉತ್ತಮ ಸೇವೆ ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಪಿಂಚಣಿ ಪಡೆಯಲು ಅಗತ್ಯವಾದ ಪ್ರಕ್ರಿಯೆಯನ್ನು ಸುಲಭಗೊಳಿಸುವತ್ತ ಯೋಚಿಸುತ್ತಿದೆ.

ಪಿಂಚಣಿ ಪಡೆಯಲು ಅಗತ್ಯವಾಗಿದ್ದ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸಲು ಮತ್ತು ಹಿರಿಯ ನಾಗರಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಗಮನ ಹರಿಸಲಾಗಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಂತಹ ಬ್ಯಾಂಕರ್‌ಗಳ ಜಾಗೃತಿ ಕಾರ್ಯಾಗಾರದಲ್ಲಿ ಮಾತನಾಡಿ ಅವರು ಈ ಪ್ರಮುಖ ಮಾಹಿತಿಯ್ನು ಹಂಚಿಕೊಂಡಿದ್ದಾರೆ.

ಕೃಷಿ ಜೊತೆಗೆ ಕುರಿ ಸಾಕಾಣಿಕೆ: 7ರಿಂದ 8 ಲಕ್ಷದವರೆಗೆ ಗಳಿಸುತ್ತಿರುವ ಮಹಿಳೆ!

ಪಿಂಚಣಿ ವಿತರಿಸುವ ಬ್ಯಾಂಕ್ ಪೋರ್ಟಲ್‌ಗಳು, ಅನುಭವ, ಸಿಪಿಇಎನ್‌ಗ್ರಾಮ್ಸ್, ಸಿಜಿಎಚ್‌ಎಸ್‌ನಂತಹ ಪಿಂಚಣಿ ಪೋರ್ಟಲ್‌ಗಳನ್ನು ಶೀಘ್ರದಲ್ಲೇ ಒಂದೇ ಪೋರ್ಟಲ್‌ನಲ್ಲಿ ತರಲಾಗುವುದು ಎಂದು ತಿಳಿಸಿದ್ದಾರೆ.

ಇಂಟಿಗ್ರೇಟೆಡ್ ಪೆನ್ಶನರ್ಸ್ ಪೋರ್ಟಲ್  (Integrated Pensioners Portal) ಎಂಬ ಈ ಹೊಸ ವೇದಿಕೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಹೊಸದಾಗಿ ಪರಿಚಯಿಸಲಾದ ಇಂಟಿಗ್ರೇಟೆಡ್ ಪಿಂಚಣಿದಾರರ ಪೋರ್ಟಲ್ https://ipension.nic.in  ಪಿಂಚಣಿದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಪಿಂಚಣಿದಾರರು ಈಗ ಈ ಪೋರ್ಟಲ್‌ನಲ್ಲಿ ಬ್ಯಾಂಕ್ ಬದಲಾಯಿಸಬಹುದು. ಜೀವಿತ ಪ್ರಮಾಣ ಪತ್ರ ಸಲ್ಲಿಸಬಹುದು. ಅದೇ ರೀತಿ, ಪಿಂಚಣಿದಾರರ ಮರಣ ಪ್ರಮಾಣಪತ್ರ, ಪಿಂಚಣಿ ಚೀಟಿ, ಪಿಂಚಣಿ ಚೀಟಿ ಮರುಪಡೆಯುವಿಕೆ, ಆದಾಯ ತೆರಿಗೆ ಕಡಿತದ ಡೇಟಾ/ಫಾರ್ಮ್ 16, ಪಿಂಚಣಿ ರಸೀದಿ ಮಾಹಿತಿಯನ್ನು ಪಡೆಯಬಹುದು.

ಸಂಸ್ಕೃತಿ ಸಚಿವಾಲಯದಿಂದ ಹಿರಿಯ ಕಲಾವಿದರಿಗೆ ಪಿಂಚಣಿ ಮತ್ತು ವೈದ್ಯಕೀಯ ನೆರವು ಯೋಜನೆ!

ಪಿಂಚಣಿ ವಿತರಿಸುವ ಬ್ಯಾಂಕ್‌ಗಳ ವೆಬ್‌ಸೈಟ್‌ಗಳು ಮತ್ತು ಇತರ ಸೌಲಭ್ಯಗಳು ಪಿಂಚಣಿದಾರರಿಗೆ ಲಭ್ಯವಿದೆ.

18 ಪೋರ್ಟಲ್ಗಳ ವಿಲೀನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI), ಕೆನರಾ ಬ್ಯಾಂಕ್ (Canara Bank) ಪಿಂಚಣಿ ಸೇವಾ ಪೋರ್ಟಲ್ ಅನ್ನು ಭವಿಷ್ಯ ಪೋರ್ಟಲ್ ನೊಂದಿಗೆ ಜೋಡಿಸುವ ಕೆಲಸ ಪೂರ್ಣಗೊಂಡಿದೆ.

ಈ ಏಕೀಕರಣದ ಮೂಲಕ, ಪಿಂಚಣಿದಾರರು ಈಗ ತಮ್ಮ ಪಿಂಚಣಿ ಚೀಟಿ, ಜೀವನ ಪ್ರಮಾಣಪತ್ರ ಸಲ್ಲಿಕೆ ಸ್ಥಿತಿ, ಫಾರ್ಮ್-16 ಅನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್ ಮೂಲಕ ಪ್ರವೇಶಿಸಬಹುದು.

ಎಲ್ಲಾ 18 ಪಿಂಚಣಿ ವಿತರಿಸುವ ಬ್ಯಾಂಕ್‌ಗಳನ್ನು ಸಮಗ್ರ ಪಿಂಚಣಿದಾರರ ಪೋರ್ಟಲ್‌ಗೆ ವಿಲೀನಗೊಳಿಸಲಾಗುವುದು.

ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ನಿವೃತ್ತ ನೌಕರರಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಅವರ ಜೀವನವನ್ನು ಸುಲಭಗೊಳಿಸುತ್ತದೆ.

ಡಿಜಿಟಲೀಕರಣದ ಮೂಲಕ ಎಲ್ಲ ರೀತಿಯ ಕೆಲಸಗಳನ್ನು ಸುಲಭಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಲೈಫ್ ಸರ್ಟಿಫಿಕೇಟ್ ಒಂದು ಹೆಜ್ಜೆ ಎಂದು ಹೇಳಬಹುದು.