ಈರುಳ್ಳಿ ಬೆಳೆಗೆ ಶೇಕಡ 15ರಷ್ಟು ಬೆಳೆ ವಿಮೆ ಕ್ಲೇಮ್ ಆಗಿದ್ದು, ಬೆಳೆ ವಿಮೆ ಮಾಡಿಸಿದಂತ ಬೆಳೆಗಾರರಿಗೆ ಪ್ರತಿ ಎಕರೆಗೆ 4200 ರೂಪಾಯಿಗಳು ರೈತರ ಖಾತೆಗಳಿಗೆ ಜಮೆಯಾಗಲಿವೆ
2022-23 ಸಾಲಿನ ಮುಂಗಾರಿ ಹಂಗಾಮಿನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆದು ವಿಮೆ ಮಾಡಿದಂತಹ ರೈತರಿಗೆ ಬೆಳೆ ವಿಮೆ ಕ್ಲೇಮ್ ಪರ್ಸೆಂಟೇಜ್ ಬಿಡುಗಡೆಯಾಗಿದೆ, ಈರುಳ್ಳಿ ಬೆಳೆಗೆ ಗದಗ ಜಿಲ್ಲೆಯ, ಗದಗ್ ತಾಲೂಕಿನ ಬೆಟಗೇರಿ ಹೋಬಳಿಯಲ್ಲಿ ಬರುವಂತಹ ಗ್ರಾಮಗಳಿಗೆ ಶೇಕಡಾ 15ರಷ್ಟು ಬೆಳೆ ವಿಮೆ ಪರ್ಸೆಂಟೇಜ್ ಕ್ಲೇಮ್ ಆಗಿದ್ದು, ಸದ್ಯದಲ್ಲಿಯೇ ರೈತರ ಖಾತೆಗಳಿಗೆ ಹಣ ಜಮಾವಣೆಯಾಗಲಿದೆ..
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದಾಗಿದೆ .
ಇದನ್ನೂ ಓದಿ -Pension Scheme ಹೆಚ್ಚಿನ EPS ಪಿಂಚಣಿಗಾಗಿ ಶೀಘ್ರ ಜಂಟಿ ಫಾರ್ಮ್ ಆಯ್ಕೆ!
2.ಹವಾಮಾನದ ವೈಪರೀತ್ಯದಿಂದಾಗಿ ರೈತರು ಹಲವಾರು ರೀತಿಯಲ್ಲಿ ಸಂಕಷ್ಟಕ್ಕೆ ಈಡಾಗಿದ್ದಾರೆ , ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಇಲ್ಲದೆ ರೈತರು ನಷ್ಟ ಅನುಭಾವಿಸಿದ್ದಾರೆ , ಇದೀಗ ಕೇಂದ್ರ ಸರ್ಕಾರ ಅರಶಿನ ಬೆಳೆಗಾರರಿಗೆ ಭರ್ಜರಿ ಗಿಫ್ಟ್ ನೀಡಿದೆ. ಅರಶಿಣಕ್ಕೆ ಪ್ರತಿ ಕ್ವಿಎಂಟಾಲ್ ಗೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ೬,೬೪೪ ರೂ ಬೆಂಬಲ ಬೆಲೆ ನೀಡುವುದಾಗಿ ಪ್ರಕಟಿಸಿದ್ದು , ತ್ವರಿತವಾಗಿ ರಾಜ್ಯ ಸರ್ಕಾರ ಅರಿಶಿನ ಖರೀದಿ ಆರಂಭಿಸಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ .
ಕೇಂದ್ರದ ಈ ಕ್ರಮದಿಂದಾಗಿ ರೈತರಿಗೆ ೧,೪೦೦ ರೂ ಗಳಿಂದ ೧೫೦೦ ರೂಗಳವರೆಗೆ ಲಾಭವಾಗಲಿದೆ . ಚಾಮರಾಜನಗರ , ಬೆಲಗಾವಿ , ಬಾಗಲಕೋಟೆ , ಬೀದರ್ ಹಾಗು ಕಲ್ಬುರ್ಗಿ ಜಿಲ್ಲೆಯ ರೈತರಿಗೆ ಪ್ರಯೋಜನವಾಗಲಿದೆ .
3.ಸೋಮಣ್ಣ ವಸತಿ ಸಚಿವರಾದ ಬಳಿಕ ಕೊಳಚೆ ಪ್ರದೇಶಗಳಲ್ಲಿ ವಾಸಿಸುವವರಿಗೆ 3 ಲಕ್ಷಕ್ಕಿಂತ ಹೆಚ್ಚು ಜನರಿಗೆ ಹಕ್ಕುಪತ್ರ ವಿತರಿಸಲಾಗಿದೆ. 85 ಸಾವಿರ ಮನೆಗಳನ್ನು ವಿತರಿಸಲಾಗಿದೆ. ಬೆಂಗಳೂರಿನಲ್ಲಿ 1 ಲಕ್ಷ ಮನೆ ನಿರ್ಮಾಣ ಗುರಿ ಹೊಂದಿದ್ದು, ರಾಜ್ಯದಲ್ಲಿ 5 ಲಕ್ಷ ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾಯಂಡಹಳ್ಳಿ ವಾರ್ಡ್‍ನ ಪಂತರಪಾಳ್ಯಯಲ್ಲಿ ಆಯೋಜಿಸಿದ್ದ ಡಾ. ಪುನೀತ್ ರಾಜ್‍ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಅಭಿವೃದ್ಧಿಪಡಿಸಲಾಗಿರುವ ನಾಯಂಡಹಳ್ಳಿ ಕೆರೆ ಲೋಕಾರ್ಪಣೆಗೊಳಿಸಿ ಮಾತನಾಡಿದರು .
ಗೋವಿಂದರಾಜನಗರದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ನಗರ ಪ್ರದೇಶದಲ್ಲಿ ಅಭಿವೃದ್ಧಿ ಮಾಡುವುದು ಸುಲಭವಲ್ಲ. ಮೂಲ ಸೌಕರ್ಯ ಅಭಿವೃದ್ಧಿ ಜೊತಗೆ ಕೆರೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಹೇಳಿದ್ದಾರೆ.