News

ರಾಜ್ಯದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ಇಷ್ಟರಲ್ಲೇ ಒಂದು ಲಕ್ಷ ಉದ್ಯೋಗ ಸೃಷ್ಟಿ!

04 March, 2023 11:04 AM IST By: Hitesh
Good news for job seekers in the state: One lakh job creation in this time!

ರಾಜ್ಯದ ನಿರುದ್ಯೋಗಿ ಉದ್ಯೋಗಿಗಳಿಗೆ ಇಲ್ಲೊಂದು ಸಿಹಿಸುದ್ದಿ ಇದೆ. ಇತ್ತೀಚಿನ ವರ್ಷಗಳಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಇಲ್ಲೊಂದು ಸಿಹಿಸುದ್ದಿ ಬಂದಿದೆ.

ರಾಜ್ಯದಲ್ಲಿ ಬರೋಬ್ಬರಿ 1,00000 ಲಕ್ಷ ಉದ್ಯೋಗ ಸೃಷ್ಟಿಯ ಚರ್ಚೆ ನಡೆದಿದೆ.

ಹೌದು ರಾಜ್ಯದಲ್ಲಿ ಈಚೆಗೆ ಬಹುದೊಡ್ಡ ಹೂಡಿಕೆ ಕೈತಪ್ಪಿದ್ದ ಬೆನ್ನಲ್ಲೇ ಮತ್ತೊಂದು ಅವಕಾಶ ರಾಜ್ಯಕ್ಕೆ ಬಂದೊದಗಿದೆ.

PM ಕಿಸಾನ್ ಸಮ್ಮಾನ್ ನಿಧಿ: ಆಧಾರ್‌ ತಿದ್ದುಪಡಿ ಹೇಗೆ, 13ನೇ ಕಂತು ಬಂದಿಲ್ಲವೇ ಅದಕ್ಕೂ ಇದೆ ಪರಿಹಾರ!

ಎಲೆಕ್ಟ್ರಾನಿಕ್‌ ಸಂಸ್ಥೆಯೊಂದರ ಹೂಡಿಕೆ ರಾಜ್ಯದ ಕೈತಪ್ಪಿತ್ತು. ಇದರಿಂದ ಸಾವಿರಾರ ಕೋಟಿ ಹೂಡಿಕೆ ಬಂಡವಾಳ

ಹಾಗೂ ಸಾವಿರಾರು ಜನರಿಗೆ ಉದ್ಯೋಗ ಕೈತಪ್ಪಿತ್ತು. ಪ್ರತಿಷ್ಠಿತ ಎಲೆಕ್ಟ್ರಾನಿಕ್‌ ಕಂಪನಿಯು ತಮಿಳುನಾಡಿನಲ್ಲಿ ಹೂಡಿಕೆ ಮಾಡಿತ್ತು.

ಇದೀಗ ವಿಶ್ವದ ಮುಂಚೂಣಿ ಎಲೆಕ್ಟ್ರಾನಿಕ್ಸ್ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್‌ನ ಫಾಕ್ಸ್ ಕಾನ್ ಕಂಪನಿಯು

ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗಿದ್ದು, ಒಪ್ಪಂದಕ್ಕೆ ಸಹಿ ಮಾಡಲಾಯಿತು. 

Gold Rate Today ಚಿನ್ನದ ಬೆಲೆಯಲ್ಲಿ ಮತ್ತೆ ಹೆಚ್ಚಳ!

ಕಂಪನಿಯ ಅಧ್ಯಕ್ಷ ಯಂಗ್ ಲಿಯವರೊಂದಿಗೆ ಈ ಕುರಿತು ವಿಸ್ತೃತ ಚರ್ಚೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ್ದಾರೆ.   

ಈ ಕಂಪನಿಯ ಉದ್ಯಮ ಸ್ಥಾಪನೆಗಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದೇವನಹಳ್ಳಿ ಬಳಿ 300 ಎಕರೆ ಜಾಗ ಗುರುತಿಸಿದ್ದು,

ಇದರಿಂದ ರಾಜ್ಯದಲ್ಲಿ 1 ಲಕ್ಷ ಉದ್ಯೋಗ ಸೃಜನೆಯಾಗುವ ನೀರಿಕ್ಷೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದಾರೆ.  

ಇನ್ನು  ಫಾಕ್ಸ್ ಕಾನ್ ಕಂಪನಿಗೆ ಎಲ್ಲಾ ರೀತಿಯ ಅಗತ್ಯ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ.

ಈ ನಿಟ್ಟಿನಲ್ಲಿ ಸರ್ಕಾರವು ಎಲ್ಲ ರೀತಿಯ ಕ್ರಮಗಳನ್ನು ಅನುಸರಿಸುತ್ತಿರುವುದಾಗಿ ಹೇಳಿದೆ.

Health Infrastructure ವಿಶ್ವಬ್ಯಾಂಕ್‌ನಿಂದ ಭಾರತಕ್ಕೆ ಬರೋಬ್ಬರಿ 1 ಬಿಲಿಯನ್‌ ಡಾಲರ್‌!

ಸಂತಸ ಹಂಚಿಕೊಂಡ ಪ್ರಲ್ಹಾದ ಜೋಶಿ

ವಿಶ್ವದ ಮುಂಚೂಣಿ ಎಲೆಕ್ಟ್ರಾನಿಕ್ಸ್ ಕಂಪನಿ ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್‌ನ ಫಾಕ್ಸ್ ಕಾನ್ ಕಂಪನಿಯು

ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಹೂಡಿಕೆಗೆ ಮುಂದಾಗಿರುವುದಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಂತಸ ಹಂಚಿಕೊಂಡಿದ್ದಾರೆ.

ಇದು ರಾಜ್ಯಕ್ಕೆ ಸಿಕ್ಕಿರುವ ಸಂತಸದ ಸುದ್ದಿ.

ಹಾನ್ ಹಾಯ್ ಟೆಕ್ನಾಲಜಿ ಗ್ರೂಪ್‌ನ ಫಾಕ್ಸ್ ಕಾನ್ ಕಂಪನಿಯು ಶೀಘ್ರದಲ್ಲಿಯೇ ತನ್ನ ಐಫೋನ್ ಉತ್ಪಾದನೆಯನ್ನು ಕರ್ನಾಟಕದಲ್ಲಿ ಪ್ರಾರಂಭಿಸಲಿದೆ ದಿಗ್ಗಜ ಆ್ಯಪಲ್ ಕಂಪನಿ.

ಇದರಿಂದ 100,000 ಉದ್ಯೋಗ ಸೃಷ್ಟಿಯಾಗಲಿದ್ದು, ರಾಜ್ಯದ ಹಾಗೂ ದೇಶದ ಆರ್ಥಿಕತೆಗೆ ದೊರೆಯಲಿದೆ

ಉತ್ತಮ ಕೊಡುಗೆ ಎಂದು ಟ್ವೀಟ್‌ ಮಾಡುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.  

ಐದು ಟ್ರಿಲಿಯನ್‌ ಆರ್ಥಿಕತೆ

ದೇಶದಲ್ಲಿ ಐದು ಟ್ರಿಲಿಯನ್‌ ಆರ್ಥಿಕತೆ ಸಾಧಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶ್ರಮಿಸಲಾಗುತ್ತಿದೆ.

ಐದು ಟ್ರಿಲಿಯನ್‌ ಆರ್ಥಿಕತೆ ಸಾಧಿಸುವ ನಿಟ್ಟಿನಲ್ಲಿ ನಾವು ಮಹತ್ವದ ಹೆಜ್ಜೆಯನ್ನು ಇರಿಸಿದ್ದೇವೆ ಎಂದು ಪ್ರಲ್ಹಾದ ಜೋಶಿ ಅವರು ಟ್ವೀಟ್‌ ಮಾಡಿದ್ದಾರೆ.  

Pension ಹಳೇ ಪಿಂಚಣೆ: ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್‌ ನ್ಯೂಸ್‌ ನೀಡಿದ ಸರ್ಕಾರ!