ಮಲೆನಾಡು ಭಾಗದಲ್ಲಿ ಕಳೆದ ಮೂರು ತಿಂಗಳಿನಿಂದ ಮೀನಿನ ದರದಲ್ಲಿ ಇಳಿಕೆ ಆಗಿದೆ.
ಮಲೆನಾಡಿನ ವಿವಿಧೆಡೆ ಕೆರೆ ಮೀನುಗಳನ್ನು ಸ್ಥಳೀಯವಾಗಿ ಉತ್ಪಾದನೆ ಮಾಡುತ್ತಿರುವುದು ಹಾಗೂ ಸಮುದ್ರದ ಮೀನಿನ ದರವೂ ಇಳಿಕೆ ಆಗಿರುವುದು ವರವಾಗಿ ಪರಿಣಮಿಸಿದೆ.
ಸರ್ಕಾರಿ ನೌಕರರಿಗೆ ಮತ್ತೆ ಸಿಹಿಸುದ್ದಿ: ಸಿ, ಡಿ ದರ್ಜಿ ನೌಕರರ ವರ್ಗಾವಣೆ ನಿಯಮದಲ್ಲಿ ಬದಲಾವಣೆ; ಪತಿ, ಪತ್ನಿ ಪ್ರಕರಣ ನಿಯಮ ಸಡಿಲ!
ಬಣಕಲ್ ಹಾಗೂ ಹ್ಯಾಂಡ್ ಪೋಸ್ಟ್‌ನಲ್ಲಿ ಪ್ರತಿದಿನವೂ ಮೀನಿನ ವಹಿವಾಟು ನಡೆಸಲಾಗುತ್ತದೆ. ಈ ಭಾಗದಿಂದ ತಾಲ್ಲೂಕಿನ ವಿವಿಧೆಡೆ ಹಾಗೂ ಮಾರುಕಟ್ಟೆಗೆ ಮೀನು ಸರಬರಾಜು ಮಾಡಲಾಗುತ್ತದೆ.
ಸಾಮಾನ್ಯವಾಗಿ ಮಂಗಳೂರು, ಉಡುಪಿ ಜಿಲ್ಲೆಗಳಿಂದ ಮೂಡಿಗೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಮೀನು ಸರಬರಾಜು ಮಾಡಲಾಗುತ್ತದೆ.
ಕಳೆದ ಎರಡು ತಿಂಗಳಿನಿಂದ ಸಮುದ್ರ ಮೀನಿನ ದರ ಇಳಿಕೆ ಆಗುತ್ತಿರುವುದರಿಂದ ಸಹಜವಾಗಿಯೇ ಬೆಲೆ ಇಳಿಕೆ ಆಗಿದೆ. ಇದೇ ಮೊದಲ ಬಾರಿಗೆ ಸಮುದ್ರ ಮೀನುಗಳಾದ ಬೂತಾಯಿ, ಬಂಗಡೆ ಮೀನುಗಳಿಗೆ ದರ ಇಳಿಕೆಯಾಗಿದೆ.
ಗೋವುಗಳ ಸಂರಕ್ಷಣೆಗೆ ಸರ್ಕಾರಿ ನೌಕರರ ವೇತನ: ಅಸಮಾಧಾನ!
ಸಮುದ್ರ ಮೀನಿಗೆ ದರ ಕಡಿಮೆಯಾಗಿರುವುದರಿಂದ ಕೆರೆ ಮೀನಿನ ದರವೂ ಅಲ್ಪ ಪ್ರಮಾಣದಲ್ಲಿ ಬೆಲೆ ಇಳಿಮುಖವಾಗಿದೆ.
ಕೆರೆಗಳಲ್ಲಿ ಈಗ ಮೀನಿನ ಮರಿಗಳನ್ನು ಬಿಡುವ ಸಮಯವಾಗಿರುವುದರಿಂದ ಮೀನನ್ನು ಹಿಡಿದಿಲ್ಲದ ಕೆರೆಗಳಲ್ಲಿ ಬೇಡಿಕೆ ಹಾಗೂ ದರಕ್ಕೆ ಅನುಗುಣವಾಗಿ ಮೀನನ್ನು ಹಿಡಿದು ಮಾರಾಟ ಮಾಡಲಾಗುತ್ತಿದೆ.
ಒಂದು ಚಹಾಗೆ ಬರೋಬ್ಬರಿ 9 ಕೋಟಿ ರೂಪಾಯಿ!
ಮೂಡಿಗೆರೆ ಭಾಗಕ್ಕೆ ಬೇಲೂರು ಡ್ಯಾಂ ಮೀನು ಸಹ ಬರುತ್ತದೆ. ಹೀಗಾಗಿ, ಅಲ್ಲಾಗುವ ಮೀನು ಪೂರೈಕೆಯು ಕೂಡ ಸ್ಥಳೀಯ ಮೀನಿನ ಬೇಡಿಕೆಯನ್ನು ನಿರ್ಧರಿಸುತ್ತದೆ ಎನ್ನುತ್ತಾರೆ ಸ್ಥಳೀಯರು.
ಇನ್ನು ಸ್ಥಳೀಯವಾಗಿ ಸಾಕುವ ಮೀನುಗಳು ಹೆಚ್ಚು ರುಚಿ ಹಾಗೂ ಫ್ರೈ ಖಾದ್ಯಕ್ಕೆ ಹೆಚ್ಚಾಗಿ ಬಳಕೆಯಾಗುವುದರಿಂದ ಹೋಟೆಲ್ ಗಳಲ್ಲಿ ಸ್ಥಳೀಯ ಮೀನುಗಳಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತದೆ.