ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಕೇವಲ 500ರೂಪಾಯಿಗೆ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ತಿಳಿಸಿದ್ದಾರೆ.
Sugarcane| ಕಬ್ಬು ಬೆಳಗಾರರಿಗೆ 21 ಕೋಟಿ ಪಾವತಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
500ರೂಪಾಯಿ ಮೊತ್ತದಲ್ಲಿ ಒಟ್ಟು 12 ಸಿಲಿಂಡರ್‌ಗಳನ್ನು ಜನರಿಗೆ ನೀಡಲಾಗುವುದು. ಇದೀಗ ಒಂದು ಸಿಲಿಂಡರ್‌ನ ದರ 1050 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಕೇವಲ 500ಕ್ಕೆ ನೀಡಲಿದ್ದೇವೆ.
ಈ ಯೋಜನೆ ಏಪ್ರಿಲ್ ತಿಂಗಳಿಂದ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.
Sugarcane Growers| ಕಬ್ಬು ಬೆಳೆಗಾರರಿಗೆ ವಂಚನೆ: 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ!
ಫೆಬ್ರವರಿಯಲ್ಲಿ ಮಂಡಿಸುವ ಬಜೆಟ್‌ನಲ್ಲಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಜನಸ್ನೇಹಿ ಕಿಚನ್ ಕಿಟ್ ವಿತರಿಸುವ ಯೋಜನೆಯನ್ನು ಘೋಷಣೆ ಮಾಡಿ ಅದನ್ನು ಜಾರಿ ಮಾಡುವುದಾಗಿ ಅವರು ತಿಳಿಸಿದ್ದಾರೆ.
PM Kisan| ಪಿ.ಎಂ ಕಿಸಾನ್ 13ನೇ ಕಂತು: ಹೊಸ ವರ್ಷದ ಮೊದಲು ಬಿಡುಗಡೆ
- ಅಡುಗೆ ಅನಿಲ ಸಿಲಿಂಡರ್ ಬಳಸುವಾಗ ಈ ಅಂಶಗಳನ್ನು ಪರಿಶೀಲಿಸಿ!
- ಅಡುಗೆ ಅನಿಲವನ್ನು ಬಳಸುವ ಸಂದರ್ಭದಲ್ಲಿ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಉತ್ತಮವಾಗಿದೆ.
- ಸರಿಯಾದ ಪೂರೈಕೆದಾರರು ಮತ್ತು ಸರಬರಾಜುದಾರರನ್ನು ಆಯ್ಕೆ ಮಾಡಿಕೊಳ್ಳುವುದು ಮುಖ್ಯ ಅಂಶಗಳಲ್ಲಿ ಒಂದಾಗಿದೆ.
- ರೆಗ್ಯೂಲೇಟರ್ ವ್ಯವಸ್ಥೆ ಪರೀಕ್ಷೆ ಮಾಡಿ, ಅದಕ್ಕೆ ಸಮರ್ಪಕವಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ, ಐದು ವರ್ಷಕ್ಕಿಂತ ಹೆಚ್ಚು ಇದನ್ನು ಬಳಸುವುದು ತಪ್ಪಿಸಿರಿ.
- ರಬ್ಬರ್ ಹೊಸ್ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅಲ್ಲದೇ ಹೋಸ್ ಕ್ಲಿಪ್ ಸರಿಯಾಗಿದೆಯಾ ಎಂದು ತಿಳಿಯಿರಿ. ಗ್ಯಾಸ್ ಸಿಲಿಂಡರ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎನ್ನುವುದು ಖಚಿತಪಡಿಸಿಕೊಳ್ಳಿ.
- ಸಿಲಿಂಡರ್ ಜೋಡಣೆ ಮಾಡುವ ವೇಳೆ ಸೋಪ್ ನೀರನ್ನು ಹಾಕಿಕೊಂಡು ಅಲ್ಲಿ ಸೋರಿಕೆ ಆಗುತ್ತಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಒಂದೊಮ್ಮೆ ಅಡುಗೆ ಅನಿಲ ಸಿಲಿಂಡರ್ ಸೋರಿಕೆ ಆಗುತ್ತಿದ್ದರೆ, ಅದನ್ನು ಕೂಡಲೇ ಸರಿಪಡಿಸಿಕೊಳ್ಳಿ.
- ಗ್ಯಾಸ್ ಸೋರಿಕೆ ಆಗುತ್ತಿದ್ದರೆ, ತಕ್ಷಣವೇ ಕ್ರಮ ಕೈಗೊಳ್ಳಬೇಕು. ಯಾವುದೇ ಗಡಿಬಿಡಿ ಮಾಡದೆ ಯಾವುದೇ ಸ್ವಿಚ್‌ಅನ್ನು ಆನ್ ಅಥವಾ ಆಫ್ ಮಾಡಬಾರದು.
- ಕಿಟಕಿ ಮತ್ತು ಬಾಗಿಲುಗಳನ್ನು ತೆರೆಯಬೇಕು. ಇದರಿಂದ ಗಾಳಿಯಲ್ಲಿ ಗ್ಯಾಸ್ ಹೊರಹೋಗುವುದು.
- ಇನ್ನು ಕೂಡ ಗ್ಯಾಸ್ ಸೋರಿಕೆ ಇದ್ದರೆ ಆಗ ಗ್ಯಾಸ್ ಸಿಲಿಂಡರ್ ನ್ನು ತೆಗೆದು ಹೊರಗೆ ಗಾಳಿಯಾಡುವ ಜಾಗದಲ್ಲಿ ಇಡಬೇಕು.
-
Heavy Rain| ರಾಜ್ಯದಲ್ಲಿ ಮುಂದುವರಿದ ಮಳೆಯ ಅಬ್ಬರ!