News

ಕೇಂದ್ರ ಸರ್ಕಾರಿ ನೌಕರರಿಗೆ Good News ! DA ಹೆಚ್ಚಳಕ್ಕೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್‌

30 March, 2022 5:50 PM IST By: Kalmesh T
Good news for central government employees! Green Signal from DA alert govt

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರದಿಂದ ಸಿಹಿಸುದ್ದಿಯೊಂದು ಬಂದಿದೆ.  ಕೇಂದ್ರ ಸರ್ಕಾರವು ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ DAಯಲ್ಲಿ ಶೇಕಡಾ 3% ಹೆಚ್ಚಳವನ್ನು ಅನುಮೋದಿಸಿದೆ. ಕೇಂದ್ರದ ಈ ಹೆಚ್ಚಳದಿಂದ 47.68 ಲಕ್ಷ ಕೇಂದ್ರ ನೌಕರರು ಮತ್ತು 68 ಲಕ್ಷ ಪಿಂಚಣಿದಾರರಿಗೆ ಇದರ ಪ್ರಯೋಜನವಾಗಲಿದೆ.

ಹೊಸ ತುಟ್ಟಿಭತ್ಯೆ ಜನವರಿ 1, 2022 ರಿಂದ ಅನ್ವಯವಾಗುತ್ತದೆ. ಕೇಂದ್ರ ನೌಕರರಿಗೆ March ತಿಂಗಳ ವೇತನದಲ್ಲಿ ಹೊಸ ತುಟ್ಟಿಭತ್ಯೆ (Dearness allowance  ಹೆಚ್ಚಳ) ಯೊಂದಿಗೆ ಪೂರ್ಣವಾಗಿ ವೇತನ ಪಾವತಿಯಾಗಲಿದೆ. ಆದಾಗ್ಯೂ, ಬಾಕಿ ಮೊತ್ತವನ್ನು ನಂತರ ಜಮಾ ಮಾಡಬಹುದು. 

ರೈತರ ಕೈ ಹಿಡಿದ ʻMP ಕಿಸಾನ್‌ ಅನುದಾನʼ: ಯಂತ್ರೋಪಕರಣಗಳ ಖರೀದಿಗೆ 50 % ಸಬ್ಸಿಡಿ.

ಕ್ಯಾಬಿನೆಟ್ Cabinet ಅಧಿಸೂಚನೆಯು 'ಮೂಲ ವೇತನ' ಪದವು 7 ನೇ ವೇತನ ಆಯೋಗದ ಮ್ಯಾಟ್ರಿಕ್ಸ್ ಪ್ರಕಾರ ಡ್ರಾ ಮಾಡಿದ ವೇತನ ಎಂದರ್ಥ ಮತ್ತು ವಿಶೇಷ ವೇತನದಂತಹ ಯಾವುದೇ ರೀತಿಯ ವೇತನವನ್ನು ಒಳಗೊಂಡಿಲ್ಲ.

ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ತುಟ್ಟಿ ಭತ್ಯೆ (Dearness allowance ) ಹೆಚ್ಚಳಕ್ಕೆ ಅನುಮೋದನೆ ನೀಡಲಾಗಿದೆ. ಈ ಹೆಚ್ಚಳದ ನಂತರ, ಕೇಂದ್ರ ಉದ್ಯೋಗಿಗಳಿಗೆ ಡಿಎ ದರವನ್ನು ಶೇಕಡಾ 31 ರಿಂದ ಶೇಕಡಾ 34 ಕ್ಕೆ ಹೆಚ್ಚಿಸಲಾಗುವುದು. ಹೆಚ್ಚಿದ ಡಿಎ ದರಗಳು ಜನವರಿ 1 ರಿಂದ ಅನ್ವಯವಾಗಲಿದೆ. ಹೆಚ್ಚಿದ ಡಿಎ ದರಗಳು ಜಾರಿಯಾದ ನಂತರ ಸರಕಾರಕ್ಕೆ ಪ್ರತಿ ವರ್ಷ 9540 ಕೋಟಿ ರೂ.ಗಳ ಹೆಚ್ಚುವರಿ ಹೊರೆ ಬೀಳಲಿದೆ.

Breaking;ಪೂರ್ಣ DA ಬಾಕಿಯೊಂದಿಗೆ ಮಾರ್ಚ್ ತಿಂಗಳ ಸಂಬಳ ಪಡೆಯಲಿದ್ದಾರೆ ಈ ನೌಕರರು

ವರ್ಷಕ್ಕೆ ಎರಡು ಬಾರಿ Dearness allowance   ಪಾವತಿ

ಕೇಂದ್ರ ಸರ್ಕಾರಿ ನೌಕರರ ಡಿಎಯನ್ನು ಜನವರಿ ಮತ್ತು ಜುಲೈ ನಡುವೆ ವರ್ಷಕ್ಕೆ ಎರಡು ಬಾರಿ ನವೀಕರಿಸಲಾಗುತ್ತದೆ. ಪ್ರಸ್ತುತ ತುಟ್ಟಿಭತ್ಯೆಯ ದರವನ್ನು ಮೂಲ ವೇತನದೊಂದಿಗೆ ಗುಣಿಸಿ ಡಿಎಯನ್ನು ಲೆಕ್ಕ ಹಾಕಲಾಗುತ್ತದೆ. ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ವಲಯದ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ನೀಡಲಾಗುತ್ತದೆ. ಉದ್ಯೋಗಿಗಳಿಗೆ ಅವರ ಜೀವನ ವೆಚ್ಚಗಳಿಗೆ ಸಹಾಯ ಮಾಡಲು ಇದನ್ನು ನೀಡಲಾಗುತ್ತದೆ. ಡಿಎ ಹೆಚ್ಚಳದಿಂದ, ಈಗ ಉದ್ಯೋಗಿ ಮೂಲ ವೇತನ 18,000 ಆಗಿದ್ದರೆ, ನಂತರ ಅವರು 6,120 ರೂ.ಗಳನ್ನು ತುಟ್ಟಿ ಭತ್ಯೆಯಾಗಿ ಪಡೆಯುತ್ತಾರೆ. ಅದೇ ರೀತಿ, ಗರಿಷ್ಠ ಸಂಬಳದ ಸ್ಲ್ಯಾಬ್ ಹೊಂದಿರುವ ಉದ್ಯೋಗಿಗಳ ಡಿಎ ತಿಂಗಳಿಗೆ 19346 ರೂ.ಗೆ ಹೆಚ್ಚಾಗುತ್ತದೆ.

FD ಖಾತೆ ತೆರೆಯುವರಿಗೆ 5 ಮುಖ್ಯ ಮಾಹಿತಿಗಳು

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನು ಶೇ.28ರಿಂದ ಶೇ.31ಕ್ಕೆ ಹೆಚ್ಚಿಸಲಾಗಿತ್ತು. ಇದರಿಂದಾಗಿ ಬಜೆಟ್ ಅಧಿವೇಶನದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಿಸಬಹುದು ಎಂಬ ಊಹಾಪೋಹವಿತ್ತು ಆದರೆ ಕೇಂದ್ರದ ಹೇಳಿಕೆ ಈ ಊಹಾಪೋಹಗಳನ್ನು ತಳ್ಳಿಹಾಕಿದೆ. ಆದರೆ, ಇತ್ತೀಚೆಗೆ ಮಧ್ಯಪ್ರದೇಶ ಸರ್ಕಾರವು ಶೇ.11ರಷ್ಟು ಹೆಚ್ಚಳ ಮಾಡುವ ಮೂಲಕ ಕೇಂದ್ರ ಸರ್ಕಾರಕ್ಕೆ ಸಮನಾದ ತುಟ್ಟಿಭತ್ಯೆಯನ್ನು ಮಾಡಿತ್ತು.

ಟ್ರೈನಿ ಹುದ್ದೆಗಳಿಗೆ IFFCO ನೇಮಕಾತಿ