News

Good News : ಕೊಬ್ಬರಿಗೆ ಬಂಪರ್‌; ಕೇಂದ್ರದಿಂದ 12 ಸಾವಿರ ಬೆಂಬಲ ಬೆಲೆ!

28 December, 2023 4:05 PM IST By: Hitesh
ಕೊಬ್ಬರಿಗೆ ಬಂಪರ್‌ ಬೆಲೆ

ಕೇಂದ್ರ ಸರ್ಕಾರವು ತೆಂಗು ಬೆಳೆಗಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದೆ.

ಕೊಬ್ಬರಿ ಬೆಳೆಯುವ ರೈತರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದಂತಾಗಿದೆ. 

2024 ಮುಂದಿನ ವರ್ಷದ ಋತುವಿನ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಕ್ಕೆ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ. 

ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು,

ಕಳೆದ ಋತುವಿಗೆ ಹೋಲಿಸಿದರೆ ಪ್ರತಿ ಕ್ವಿಂಟಾಲ್ ಒಣ ಕೊಬ್ಬರಿ ಗಿಟುಕಿಗೆ 300 ರೂಪಾಯಿ ಹಾಗೂ ಕೊಬ್ಬರಿ ಉಂಡೆಗೆ 250 ರೂಪಾಯಿ

ಬೆಂಬಲ ಬೆಲೆ ಹೆಚ್ಚಿಸಲಾಗಿದೆ ಎಂದಿದ್ದಾರೆ. 

ಇನ್ನು ಬೆಂಬಲ ಬೆಲೆಯನ್ನು ಹೆಚ್ಚಿಸಿರುವುದರಿಂದ ತೆಂಗು ಬೆಳೆಗಾರರಿಗೆ ಉತ್ತಮ ಲಾಭ ಸಿಗಲಿದೆ.

2014-15ರಲ್ಲಿ ಪ್ರತಿ ಕ್ವಿಂಟಾಲ್ ಒಣ ಕೊಬ್ಬರಿ ಗಿಟುಕಿಗೆ 5 ಸಾವಿರದ 250 ರೂಪಾಯಿ ಬೆಂಬಲ ಬೆಲೆ ನಿಗದಿಪಡಿಸಲಾಗಿತ್ತು.

2024-25ರಲ್ಲಿ ಈ ಬೆಲೆ ಪ್ರತಿ ಕ್ವಿಂಟಾಲ್‌ಗೆ 11 ಸಾವಿರದ 160 ರೂಪಾಯಿ ಇದೆ.

ಇನ್ನು ಉಂಡೆ ಕೊಬ್ಬರಿಗೆ 2024-25ರಲ್ಲಿ ಕನಿಷ್ಠ ಬೆಂಬಲ ಬೆಲೆ 12000 ಸಾವಿರ ರೂಪಾಯಿ ನಿಗದಿ ಮಾಡಲಾಗಿದೆ ಎಂದು ವಿವರಿಸಿದ್ದಾರೆ.  

ರೈತರಿಗೆ ಇಷ್ಟರಲ್ಲೇ ಎರಡು ಸಾವಿರ ರೂಪಾಯಿ

ಕರ್ನಾಟಕದಲ್ಲಿ ಬರದಿಂದ ತೊಂದರೆಗೆ ಒಳಗಾಗಿರುವ ರೈತರಿಗೆ ರಾಜ್ಯ ಸರ್ಕಾರವೇ ಮೊದಲ ಕಂತಿನಲ್ಲಿ ಪರಿಹಾರ ನೀಡಲಿದೆ

ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇದರ ಭಾಗವಾಗಿ ಬೆಳೆ ನಷ್ಟ ಪರಿಹಾರದ ಮೊದಲ ಕಂತಿನ ಹಣ 2000 ಸಾವಿರ ರೂಪಾಯಿ

ಹಣವನ್ನು ಹೊಸ ವರ್ಷದ ಮೊದಲ ವಾರದಲ್ಲಿ ರೈತರ ಖಾತೆಗೆ ಹಾಕಲಾಗುವುದು ಎಂದು  ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರೈತರ ಸೋಲಾರ್‌ ಸೆಟ್‌ಗೆ ಆರ್ಥಿಕ ನೆರವು

ರೈತರು ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಆರ್ಥಿಕ ನೆರವು ನೀಡುವುದಾಗಿ ಘೋಷಣೆ ಮಾಡಲಾಗಿದೆ.

ಸೋಲಾರ್ ಪಂಪ್‌ಸೆಟ್ ಅಳವಡಿಸುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಸಿಗಲಿದೆ

ಎಂದು  ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.