ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಕಳೆದ ನಾಲ್ಕು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. 1 ಗ್ರಾಂ ಚಿನ್ನದ ಬೆಲೆ 4,838 ರೂಪಾಯಿಗೆ ತಲುಪಿಸಿದೆ. ಇಂದು ಶುಕ್ರವಾರವೂ ಸಹ ಚಿನ್ನದ ಬೆಲೆ ಇಳಿಕೆಯಾಗಿದೆ. ಇದರೊಂದಿಗೆ ಬೆಳ್ಳಿ ಬೆಲೆಯಲ್ಲಿ ಹಲವೆಡೆ ಇಳಿಕೆ ಕಂಡುಬಂದಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಇಳಿಕೆ ಮಾಡಿದ ಬೆನ್ನಲ್ಲೇ , ಕಳೆದ 4 ದಿನಗಳಲ್ಲಿ ಬಂಗಾರದ ಬೆಲೆ ಭಾರಿ ಇಳಿಕೆಯಾಗಿದೆ.
ಶುಕ್ರವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ, 44,350 ರೂಪಾಯಿ ನಿಗದಿಯಾಗಿದೆ. ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡು ಇಂದು ಒಂದು ಕೆಜಿಗೆ 68,000 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 72,200 ರೂಪಾಯಿ ಇದೆ.
ಚೆನ್ನೈ:44,830 (22 ಕ್ಯಾರಟ್) 48,900(24 ಕ್ಯಾರಟ್)
ದಿಲ್ಲಿ: 46,500 (22 ಕ್ಯಾರಟ್), 50,730 (24 ಕ್ಯಾರಟ್)
ಹೈದರಾಬಾದ್: 44,350 (22 ಕ್ಯಾರಟ್) 48,380 (24 ಕ್ಯಾರಟ್)
ಮಂಗಳೂರು: 44,350 (22 ಕ್ಯಾರಟ್) 48,380 (24 ಕ್ಯಾರಟ್)
ಮುಂಬಯಿ: 46,600(22 ಕ್ಯಾರಟ್), 47,600 (24 ಕ್ಯಾರಟ್)
ಮೈಸೂರು:44,350 (22 ಕ್ಯಾರಟ್) 48,380 (24 ಕ್ಯಾರಟ್)
ಕೇಂದ್ರ ಸರ್ಕಾರ 2021-22ಮೇ ಸಾಲಿನ ಬಜೆಟಿನಲ್ಲಿ ಚಿನ್ನ ಮತ್ತು ಬೆಳ್ಳಿ ಮೇಲೆ ಸೇ. 7.5 ರಷ್ಟು ಸೀಮಾಸುಂಕವನ್ನು ಇಳಿಸಿದ ಪರಿಣಾಮವಾಗಿ ಹಳದಿ ಲೋಹದಲ್ಲಿ ಬೆಲೆ ಕಡಿಮೆಯಾಗುತ್ತಿದೆ.