ಹೌದು ಇಂದು ಬೆಂಗಳೂರಿನಲ್ಲಿ (Bengaluru) ಬಂಗಾರ ದ ಬೆಲೆ 22 ಕ್ಯಾರಟ್ ಹತ್ತು ಗ್ರಾಂ ಬಂಗಾರದ ಬೆಲೆ ಬರರೊಬ್ಬರಿ 52,950 ರೂ. ಅಂದರೆ ಪ್ರತಿ ಗ್ರಾಂ ಗೆ . 5,265 ರೂ ಆಗಿದ್ದು, ನಿನ್ನೆಗಿಂತ ಬೆಲೆ ಏರಿಕೆಯಾಗಿದೆ. ಇನ್ನು, ದೇಶದ ಪ್ರಮುಖ ಮೆಟ್ರೋಪಾಲಿಟನ್ ನಗರಗಳಾದ ಚೆನ್ನೈ, ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 53,200, ರೂ. 52,600 ಹಾಗೂ ರೂ., 52,600 ಆಗಿದೆ. ಅದೇ ರೀತಿ, ರಾಷ್ಟ್ರ ರಾಜಧಾನಿ ಹೊಸ ದೆಹಲಿಯಲ್ಲಿ ಸಹ ಚಿನ್ನದ ಬೆಲೆ ಶನಿವಾರ 52,750 ರೂ. ಆಗಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ.
ಹಸಿರೇ ಉಸಿರು ಎನ್ನುವ ಮಾತಿದೆ. ಕಾಡಿದ್ದರೆ ನಾಡು . ಒಂದು ವೇಳೆ ಪರಿಸರ ನಾಶ ಮಾಡಿದರೆ ಅದರ ಪರಿಣಾಮ ಭೀಕರ ಎನ್ನುವುದಕ್ಕೆ ರಾಜ್ಯ ರಾಜಧಾನಿ ಬೆಂಗಳೂರೇ ಸಾಕ್ಷಿ . ಬೇಸಿಗೆಯ ಮೊದಲ ವಾರದಲ್ಲಿಯೇ ಬೆಂಗಳೂರಿಗರಿಗೆ ಬಿಸಿಲ ಬಿಸಿ ತಟ್ಟಿದೆ . ವಾತಾವರಣದಲ್ಲಿ ಆಗುತ್ತಿರುವ ಬದಲಾವಣೆಯಿಂದಾಗಿ ಬಿಸಿಲು ಕೂಡ ಜಾಸ್ತಿ ಯಾಗ ತೊಡಗಿದೆ .
2011ರ ಏಪ್ರಿಲ್‌ನಲ್ಲಿ 34.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. 2022ರ ಏಪ್ರಿಲ್‌ನಲ್ಲಿ 36.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. 2016ರ ಏಪ್ರಿಲ್‌ನಲ್ಲಿ ಅತ್ಯಧಿಕ 39.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು ಎಂದು ಇಲಾಖೆ ಅಂಕಿ–ಅಂಶಗಳು ಹೇಳುತ್ತವೆ.
‘1970ರಲ್ಲಿ ಶೇ 68ರಷ್ಟು ಹಸಿರಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ಹಸಿರು ಹೊದಿಕೆ ಕಡಿಮೆಯಾಗಿದೆ. ಅದೇ ಕಾರಣದಿಂದ ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುತ್ತಿದೆ’ .ಹೀಗಾಗಿ ಬಿಸಿಲ ಬೇಗೆಯಲ್ಲಿ ಬೇಯುವುದು ರಾಜಧಾನಿ ಜನರಿಗೆ ಕಡ್ಡಾಯವಾಗಿದೆ .
ಹಾಲು ಹಾಗು ಹಾಲಿನ ಖಾದ್ಯಗಳು ಯಾರಿಗೆ ಇಷ್ಟ ಇಲ್ಲ ಹೇಳಿ . ಹಬ್ಬ ಹರಿದಿನಗಳಲ್ಲಿ ಹಾಲಿನ ಖಾದ್ಯಗಳನ್ನು ಮಾಡುವುದು ಸಂಪ್ರದಾಯ . ಆದರೆ ರುಚಿ ರುಚಿ ಹಾಲಿನ ಖಾದ್ಯ ಮಾಡಲು ಈಗ ಹಾಲಿನ ಕೊರತೆ ಕಂಡುಬಂದಿದೆ . ಹೌದು ,ಬೆಂಗಳೂರು ನಗರದ ಹೋಟೆಲ್‌ಗಳಿಗೆ ಪ್ರತಿನಿತ್ಯ ಸುಮಾರು 6 ಲಕ್ಷ ಲೀಟರ್ ಹಾಲು ಮತ್ತು ಉತ್ಪನ್ನಗಳ ಬೇಡಿಕೆ ಇದೆ. ಆದರೆ, ಕಳೆದ ಎರಡು ವಾರಗಳಿಂದ ಶೇ 20ರಷ್ಟು ಹಾಲಿನ ಕೊರತೆಯಾಗುತ್ತಿದೆ’ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಹೇಳಿದ್ದಾರೆ .
ಈ ಕುರಿತು ಕರ್ನಾಟಕ ಹಾಲು ಉತ್ಪಾದಕರ ಸಂಘದ(ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು ‘ಹೊರ ರಾಜ್ಯಗಳಿಗೆ ನಂದಿನಿ ಹಾಲು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು’ ಎಂದಿದ್ದಾರೆ. ಈ ಕುರಿತ ಕರ್ನಾಟಕ ಹಾಲು ಉತ್ಪಾದಕರ ಸಂಘದ(ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಅವರು ‘ಹೊರ ರಾಜ್ಯಗಳಿಗೆ ನಂದಿನಿ ಹಾಲು ಸರಬರಾಜು ಮಾಡುವುದನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು’ ಎಂದಿದ್ದಾರೆ.
ಕಚ್ಚಾ ರೇಷ್ಮೆ ಬೆಲೆ ದಿಢೀರ್ ಕುಸಿತದಿಂದ ರೇಷ್ಮೆ ಬೆಳೆಗಾರರು ಆತಂಕಗೊಳ್ಳಬಾರದು. ಶೀಘ್ರವೇ ಸರ್ಕಾರ ಮಧ್ಯ ಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ರೇಷ್ಮೆ ಸಚಿವ ನಾರಾಯಣಗೌಡ ಅಭಯ ನೀಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಸ್ಥಿರವಾಗಿದ್ದ ರೇಷ್ಮೆ ಗೂಡಿನ ದರ ದಿಢೀ ಕುಸಿತಗೊಂಡಿದೆ. ಇದರಿಂದ ಬೆಳೆಗಾರರು ಆತಂಕಪಡುವ ಅವಶ್ಯಕತೆ ಇಲ್ಲ. ಬೆಲೆ ದಿಢೀರ್ ಕುಸಿತ ತಾತ್ಕಾಲಿಕ, ಕೆಲ ಪಟ್ಟಭದ್ರ ಹಿತಾಸಕ್ತಿಗಳ ಕಾರಣದಿಂದಲೂ ಬೆಲೆ ಕಡಿಮೆಯಾಗಿರಬಹುದು. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದಿದ್ದಾರೆ.