News

ಚಿನ್ನದ ಬೆಲೆ ಮತ್ತೆ ಹೆಚ್ಚಳ,ಎಷ್ಟಿದೆ ಇಂದಿನ Gold Rate ?

21 November, 2023 11:35 AM IST By: Hitesh
ಇಂದಿನ ಚಿನ್ನದ ಬೆಲೆ ನೋಡಿ

ಚಿನ್ನದ ಬೆಲೆಯಲ್ಲಿ ಇದೀಗ ಮತ್ತೆ ಹೆಚ್ಚಳ ಕಂಡು ಬರುತ್ತಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಹಾಗೂ ನವೆಂಬರ್‌ ಮೊದಲ ವಾರದಲ್ಲಿ ಚಿನ್ನದ ಬೆಲೆಯಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿತ್ತು.

ಚಿನ್ನದ ಬೆಲೆಯಲ್ಲಿ ಸಾಮಾನ್ಯವಾಗಿ ಏರಿಳಿತ ಕಂಡುಬರುತ್ತದೆ.

ಆದರೆ, ಕಳೆದ ಒಂದು ವಾರದಿಂದ ಮತ್ತೆ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿರುವುದು ಕಂಡು ಬರುತ್ತಿದೆ.

ಇನ್ನು ಸೋಮವಾರ ಹಾಗೂ ಮಂಗಳವಾರದ ಚಿನ್ನದ ಬೆಲೆಯನ್ನು ನೋಡಿದರೆ, ಅಲ್ಪ ಪ್ರಮಾಣದಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿರುವುದು ಕಂಡು ಬರುತ್ತದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಚಿಲ್ಲರೆ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ

ಗ್ರಾಂಗೆ 5,685 ರೂಪಾಯಿ ಇದೆ. ಇನ್ನು 24 ಕ್ಯಾರೆಟ್ ಚಿನ್ನದ 1 ಗ್ರಾಂನ ಬೆಲೆಯು 6,202 ರೂಪಾಯಿ ಇದೆ.  

ನವೆಂಬರ್‌ 21ರ 22 ಕ್ಯಾರೆಟ್‌ (22 carat of gold) ಚಿನ್ನದ ಬೆಲೆಯ ವಿವರ ಇಲ್ಲಿದೆ   

Karnataka Rain ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು, ನಾಳೆ ಮಳೆ!

ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

5,685

5,650

35

8 ಗ್ರಾಂ

45,480

45,200

280

10 ಗ್ರಾಂ

56,850

56,500

350

100 ಗ್ರಾಂ

5,68,500

5,65,000

3,500

ಚಿನ್ನದ 24 ಕ್ಯಾರೆಟ್‌ (24 carat of gold) ಬೆಲೆ ಈ ರೀತಿ ಇದೆ

ಚಿನ್ನ ಗ್ರಾಂ

ಇಂದಿನ 22 ಕ್ಯಾರಟ್‌ ಬೆಲೆ

ನೆನ್ನೆಯ 22 ಕ್ಯಾರಟ್‌ ಬೆಲೆ

ಬೆಲೆ ವ್ಯತ್ಯಾಸ

1 ಗ್ರಾಂ

6,202

6,164

38

8 ಗ್ರಾಂ

49,616

49,312

304

10 ಗ್ರಾಂ

62,020

61,640

380

100 ಗ್ರಾಂ

6,20,200

6,16,400

3,800

ಚಿನ್ನದ ಬೆಲೆಯಲ್ಲಿ ನವೆಂಬರ್‌ 13ರ ನಂತರ ಹೆಚ್ಚಳವಾಗುವುದು ಹೆಚ್ಚಾಗುತ್ತಿದೆ. ಈ ಹಿಂದೆ ಎಂದರೆ ನವೆಂಬರ್‌ 13ರ ಮುಂಚೆಯ ವರೆಗೆ ಚಿನ್ನದ ಬೆಲೆಯಲ್ಲಿ

ಏರಿಳಿತವಾಗುತ್ತಿದ್ದಾರೂ, ಅದು ಇಳಿಕೆಯ ಹಂತದಲ್ಲಿ ಕಂಡುಬರುತ್ತಿತ್ತು. ಆದರೆ, ನವೆಂಬರ್‌ 13ರಿಂದ ಅಂದರೆ ಕಳೆದ ಒಂದು ವಾರದಿಂದ

ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುವುದು ವರದಿಯಾಗುತ್ತಿದೆ.