News

ದೆಹಲಿಯಲ್ಲಿ 50 ಸಾವಿರ ಗಡಿ ದಾಟಿದ ಚಿನ್ನದ ದರ

02 July, 2020 7:35 PM IST By:

ಕೊರೋನಾ ಬಿಕ್ಕಟ್ಟಿನ ನಡುವೆಯೂ ಬಂಗಾರದ ದರ ದಾಖಲೆಯ ಮಟ್ಟದಲ್ಲಿ ಏರಿಕೆಯಾಗಿದ್ದು, ಪ್ರತಿ 10 ಗ್ರಾಂ. ಬೆಲೆ 50 ಸಾವಿರ ರೂಪಾಯಿ ಗಡಿ ದಾಟಿದೆ. ತಜ್ಞರ ಪ್ರಕಾರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದ್ದು, ಜನರು ಚಿನ್ನದ ಮೇಲೆ ಹೂಡಿಕೆ ಹೆಚ್ಚು ಮಾಡುತ್ತಿರುವುದರಿಂದ ಈ ವರ್ಷಾಂತ್ಯದ ವೇಳೆಗೆ ಚಿನ್ನದ ದರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಅನ್​ಲಾಕ್​ ಘೋಷಣೆ ಆದ ನಂತರ ಚಿನ್ನ ಖರೀದಿಗೆ ಜನರು ಮುಗಿಬಿದ್ದಿದ್ದರು. ಹೀಗಾಗಿ, ಚಿನ್ನದ ದರದಲ್ಲಿ ಭಾರೀ ಏರಿಕೆ ಕಾಣುತ್ತಿದೆ. ಇನ್ನು, ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆ ಕಂಡಿದೆ. ಕೆಜಿ ಬೆಳ್ಳಿಗೆ 1,500 ರೂಪಾಯಿ ಆಗಿದೆ. ಈ ಮೂಲಕ ಬೆಳ್ಳಿ ದರ 50,060 ರೂಪಾಯಿ ಆಗಿದೆ. ಗುರುವಾರ ದೆಹಲಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50 ಸಾವಿರ ಗಡಿ ದಾಟಿದೆ.

ಬುಧವಾರ ಚಿನ್ನದ ಬೆಲೆ 10 ಗ್ರಾಂಗೆ  647ರಂತೆ ಹೆಚ್ಚಳವಾಗಿ  49,908ರಂತೆ ಮಾರಾಟವಾಗಿದೆ. 10 ಗ್ರಾಂ ಚಿನ್ನದ ಧಾರಣೆ ಬೆಂಗಳೂರಿನಲ್ಲಿ 342ರಂತೆ, ಮುಂಬೈನಲ್ಲಿ  325ರಂತೆ ಹೆಚ್ಚಾಗಿದ್ದು, ಕ್ರಮವಾಗಿ 48,985 ಮತ್ತು 48,690ಕ್ಕೆ ತಲುಪಿದೆ. ಬೆಳ್ಳಿ ಧಾರಣೆ ದೆಹಲಿಯಲ್ಲಿ ಕೆ.ಜಿಗೆ  1,611ರಂತೆ ಜಿಗಿತ ಕಂಡು 51,870ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ 1,100ರಂತೆ ಹೆಚ್ಚಾಗಿ 50,200ರಂತೆ ಮಾರಾಟವಾಯಿತು.