ಕೊರೋನಾ ಸೋಂಕಿನ ಹೆಚ್ಚಳ, ಚೀನಾ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮರದ ಪರಿಣಾಮ ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ (Gold and silver price) ದೇಶದ ರಾಜಧಾನಿಯ ಚಿನಿವಾರ ಪೇಟೆಯಲ್ಲಿ ಬುಧವಾರ ದಾಖಲೆಯ ಮಟ್ಟದ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (international market) ಚಿನ್ನದ ಬೆಲೆ ಹೆಚ್ಚಳವಾಗಿದ್ದರಿಂದ ದೇಶದ ಚಿನಿವಾರ ಪೇಟೆಯಲ್ಲಿ ಚಿನ್ನದ ದರ ಗರಿಷ್ಠ ಮಟ್ಟಕ್ಕೆ ತಲುಪಿದೆ, 10 ಗ್ರಾಂ ಚಿನ್ನದ ಬೆಲೆಯಲ್ಲಿ 430 ರೂಪಾಯಿ ಏರಿಕೆಯಾಗಿದ ಈಗ ಬುಧವಾರ (ಜುಲೈ 21) ಚಿನ್ನದ ಬೆಲೆ 50,920 ರೂಪಾಯಿಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿತ ಭಾರತದ ಮಾರುಕಟ್ಟೆ ಮೇಲೂ ಪ್ರಭಾವ ಬೀರುತ್ತದೆ. ಮತ್ತೊಂದೆಡೆ ಬೆಳ್ಳಿ (Silver) ಬೆಲೆ ಕೂಡ ತುಟ್ಟಿಯಾಗಿದೆ. ಲಾಕ್ಡೌನ್ಗೆ ಮೊದಲು 35 ಸಾವಿರ ರೂಪಾಯಿ ಇದ್ದ ಕೆಜಿ ಬೆಳ್ಳಿ ದರ ಇದೀಗ 61 ಸಾವಿರ ರೂ.ಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ (Gold price) ಒಂದು ಔನ್ಸ್ ಗೆ (28.34 ಗ್ರಾಂ), 1,855 ಡಾಲರಗೆ ತಲುಪಿದ್ದು, 9 ವರ್ಷಗಳ ಬಳಿಕ ಈ ಏರಿಕೆಯಾಗಿದೆ. ಬೆಳ್ಳಿ ಒಂದು ಔನ್ಸ್ ಗೆ 21.80 ಡಾಲರ್ ತಲುಪಿದ್ದು, ಇದು ಸಹ ಏಳು ವರ್ಷಗಳ ಬಳಿಕ ಗರಿಷ್ಠ ಮಟ್ಟದ್ದಾಗಿದೆ.