ಹೊಸ ವರ್ಷದ ಪ್ರಾರಂಭದಲ್ಲೇ ಚಿನ್ನ ಪ್ರಿಯರಿಗೆ ಕಹಿಸುದ್ದಿ ಸಿಕ್ಕಿದೆ. ಚಿನ್ನದ ದರದಲ್ಲಿ ಹೊಸ ವರ್ಷದ ಪ್ರಾರಂಭದಲ್ಲೇ ದರ ಹೆಚ್ಚಳವಾಗಿದೆ.
Gold Rate ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 506 ರೂಪಾಯಿ ಹೆಚ್ಚಳವಾಗಿರುವುದು ವರದಿ ಆಗಿದೆ. ಈ ಮೂಲಕ ಒಟ್ಟಾರೆ ಚಿನ್ನದ ದರವು 55,940 ರೂಪಾಯಿ ತಲುಪಿದಂತಾಗಿದೆ. ಇನ್ನು ಜಾಗತಿಕ ಮಾರುಕಟ್ಟೆಗಳಲ್ಲಿಯೂ ಚಿನ್ನದ ಧಾರಣೆ ಹೆಚ್ಚಾಗಿರುವುದು ವರದಿ ಆಗಿದೆ.
Pm Kisan| ಪಿ.ಎಂ ಕಿಸಾನ್ ಅಪ್ಡೇಟ್: 13ನೇ ಕಂತಿಗಾಗಿ ಕಾಯುತ್ತಿರುವ ಕೋಟಿಗಟ್ಟಲೆ ರೈತರಿಗೆ ಮಹತ್ವದ ಮಾಹಿತಿ
ಚಿನ್ನದ ದರ ಮಾತ್ರವಲ್ಲೇ ಬೆಳ್ಳಿಯ ದರದಲ್ಲೂ ಏರಿಕೆ ಆಗಿರುವುದು ವರದಿ ಆಗಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ.ಗೆ 1,374 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಬೆಳ್ಳಿ ದರವೂ ಬರೋಬ್ಬರಿ 71,224 ರೂಪಾಯಿಗೆ ತಲುಪಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್ ವರದಿ ತಿಳಿಸಿದೆ. (Good) ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನದ ಬೆಲೆ (INR)
1 ಗ್ರಾಂ 5,110 ರೂಪಾಯಿ, 8 ಗ್ರಾಂ 40,880 ರೂಪಾಯಿ ಆಗಿದೆ. ಇನ್ನು 10 ಗ್ರಾಂ 51,100 ಸಾವಿರ ರೂಪಾಯಿ,100 ಗ್ರಾಂ 5,11,000 ಲಕ್ಷ ರೂ. ಆಗಿದೆ.
ಭಾರತದಲ್ಲಿ ಪ್ರತಿ ಗ್ರಾಂಗೆ 24 ಕ್ಯಾರೆಟ್ ಚಿನ್ನದ ದರ (INR)ವು 1 ಗ್ರಾಂ 5,575 ರೂಪಾಯಿ, 8 ಗ್ರಾಂ 44,600 ಸಾವಿರ ರೂಪಾಯಿ, 10 ಗ್ರಾಂ 55,750 ರೂಪಾಯಿ ಹಾಗೂ 100 ಗ್ರಾಂ 5,57,500 ರೂಪಾಯಿ ತಲುಪಿರುವುದು ವರದಿ ಆಗಿದೆ
Nandini and Amul| ನಂದಿನಿ ಮತ್ತು ಅಮುಲ್ ಬ್ರ್ಯಾಂಡ್ ವಿಲೀನಕ್ಕೆ ವಿರೋಧ