News

ಏ. 18 ರಂದು ಸಾವಯವ ಕೃಷಿ ಹಾಗೂ ಉಚಿತ ಗೋ ಕೃಪಾಮೃತ ವಿತರಣಾ ಕಾರ್ಯಕ್ರಮ

16 April, 2021 2:27 PM IST By:
cow

ರೈತಬಾಂಧವರಿಗೆ ಏಪ್ರೀಲ್ 18 ರಂದು ಬೆಳಗ್ಗೆ 10.30 ಗಂಟೆಗೆ ಸಾವಯವ ಕೃಷಿ ಹಾಗೂ ಉಚಿತ ಗೋಕೃಪಾಮೃತ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಹಾಗೂ ಶ್ರೀ ಸ್ವಾಮಿ ಸಮರ್ಥ ಸೇವಾ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಏಪ್ರೀಲ್ 18 ರಂದು ಬೆಳಗ್ಗೆ 10.30 ಗಂಟೆಗೆ ಕಲಬುರಗಿ ನಗರ ಹೊರವಲಯದ ಹುಮಾನಾಬಾದ್ ವರ್ತೂಲ ರಸ್ತೆಯ ಅವರಾದ (ಬಿ) ಗ್ರಾಮದ ಸ್ವಾಮಿ ಸಮರ್ಥ ಗುಡ್ಡದಲ್ಲಿ ಉಚಿತವಾಗಿ ಗೋಕೃಪಾಮೃತ ವಿತರಣೆ ಕಾರ್ಯಕ್ರಮ ಹಾಗೂ ಶ್ರೀಸ್ವಾಮಿ ಸಮರ್ಥ ಗೋಭಕ್ತರ ಸಮಾಗಮ ಹಮ್ಮಿಕೊಳ್ಳಲಾಗಿದೆ.

ಗುಜರಾತಿನ ಅಹ್ಮದಬಾದಿನ ಬನ್ಸಿಘೀರ್  ಗೋಶಾಲೆಯ ಗೋಪಾಲಭಾಯಿ ಸುತಾರಿಯ ಉಪನ್ಯಾಸ ನೀಡುವರು. ಗೋ ಉತ್ಪನ್ನಗಳ ಪ್ರದರ್ಶನ, ಮಾರಾಟ, ಗೋ ತಳಿಗಳ ಬಗ್ಗೆ ಅವರು ಮಾಹಿತಿ ನೀಡುವರು. ರಾಸಾಯನಿಕ ಮುಕ್ತ ಕೃಷಿ ತರಬೇತಿ ನೀಡಿ ಪ್ರೋತ್ಸಾಹ, ದೇಶಿ ಹಸುಗಳ ಸಂವರ್ಧನೆಗೆ ಪ್ರೋತ್ಸಾಹ, ದೇಶಿ ಹಸುಗಳ ಸಾಕಾಣಿಕೆ, ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7026723333, 9880056386, 9916152999 ಗೆ ಸಂಪರ್ಕಿಸಲು ಕೋರಲಾಗಿದೆ.

ಉಚಿತವಾಗಿ ಹೈನುಗಾರಿಕೆ-ಎರೆಹುಳು ಗೊಬ್ಬರ ತಯಾರಿಕಾ ತರಬೇತಿಗೆ ರೈತರಿಂದ ಅರ್ಜಿ ಆಹ್ವಾನ

ಕಲಬುರಗಿ ಎಸ್.ಬಿ.ಐ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಕಿಟಸರ್ಡ್)ಯಿಂದ ಇದೇ ಏಪ್ರಿಲ್ 20 ರಿಂದ 29ರವರೆಗೆ 10 ದಿನಗಳ ಕಾಲ ಉಚಿತವಾಗಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ತರಬೇತಿ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಗ್ರಾಮೀಣ ಭಾಗದ 18 ರಿಂದ 45 ವರ್ಷದೊಳಗಿನ  ಬಿ.ಪಿ.ಎಲ್. ಕುಟುಂಬದ ನಿರುದ್ಯೋಗ ಯುವಕ, ಯುವತಿಯವರು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಸಮಯದಲ್ಲಿ ಉಚಿತ ಊಟ, ವಸತಿಯ ಸೌಲಭ್ಯ  ಒದಗಿಸಲಾಗುತ್ತದೆ. ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ತರಬೇತಿ ಸಂಸ್ಥೆಯಿಂದ ಪಡೆದು   ಭರ್ತಿ ಮಾಡಿ  ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಬಿ.ಪಿ.ಎಲ್ ಕಾರ್ಡ್, ಬ್ಯಾಂಕ್ ಪಾಸ್‍ಬುಕ್ ಜಿರಾಕ್ಸ್ ಪ್ರತಿ ಹಾಗೂ  ಇತ್ತೀಚಿನ 5 ಇತ್ತೀಚಿನ ಭಾವಚಿತ್ರಗಳನ್ನು ಲಗತ್ತಿಸಿ 2020ರ  ಏಪ್ರಿಲ್ 20ರೊಳಗಾಗಿ ತರಬೇತಿ ಸಂಸ್ಥೆಯಲ್ಲಿ ಸಲ್ಲಿಸಬೇಕು.

ಅಭ್ಯರ್ಥಿಗಳು ಕಡ್ಡಾಯವಾಗಿ  ಇದೇ ಏಪ್ರಿಲ್ 20 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ತರಬೇತಿ ಸಂಸ್ಥೆ ಕಚೇರಿಯಲ್ಲಿ ನಡೆಯುವ ಸಂದರ್ಶನಕ್ಕೆ ದಾಖಲಾತಿಗಳೊಂದಿಗೆ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 9243602888, 9886781239ಗಳಿಗೆ ಸಂಪರ್ಕಿಸಲು ಕೋರಲಾಗಿದೆ.