News

ಮಾಸ್ಕ್ ಧರಿಸಿಲ್ಲವೆಂದು ಮೇಕೆಯನ್ನು ಬಂಧಿಸಿದ ಪೊಲೀಸರು

27 July, 2020 4:46 PM IST By:
Goat

ಮಾಸ್ಕ್ (Mask) ಧರಿಸದೆ ಬೀದಿಗಿಳಿದವರಿಗೆ ಪೊಲೀಸರು ದಂಡ ಹಾಕಿ ಎಚ್ಚರಿಕೆ ನೀಡಿದ ಸಾಕಷ್ಟು ಉದಹಾರಣೆಗಳಿವೆ. ಆದರೆ  ಪ್ರಾಣಿಗಳು ಮಾಸ್ಕ್ ಧರಿಸಿಲ್ಲವೆಂದು ಮಾಲಿಕನಿಗೆ ಎಚ್ಚರಿಕೆ ಕೊಟ್ಟಿದ್ದನ್ನು ಕೇಳಿದ್ದೀರಾ... ಹೌದು..  ಮೇಕೆಯೊಂದು ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರು ಬಂಧಿಸಿ ಠಾಣೆಗೆ ಎಳೆದೊಯ್ದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಕಾನ್ಪುರ (kanpur) ದಲ್ಲಿ ನಡೆದಿದೆ.

ಬೆಕನ್ ಗಂಜ್ ಪ್ರದೇಶದಲ್ಲಿ ಮೇಕೆ(Goat) ಯೊಂದು ಓಡಾಡುತ್ತಿತ್ತು. ಇದನ್ನು ಗಮನಿಸಿದ ಪೊಲೀಸರು ತಮ್ಮ ಜೀಪಿನಲ್ಲಿ ಎತ್ತಿಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸರು ತನ್ನ ಮೇಕೆಯನ್ನು ಕರೆದುಕೊಂಡು ಹೋದ ವಿಷಯ ತಿಳಿದ ಮೇಕೆ ಮಾಲೀಕ ಠಾಣೆಗೆ ದೌಡಾಯಿಸಿದ್ದಾನೆ. ಠಾಣೆಯ ಎದುರು ಕಟ್ಟಿಹಾಕಿದ್ದ ಮೇಕೆಯನ್ನು ಅದರ ಮಾಲೀಕನಿಗೆ ಒಪ್ಪಿಸಿದ ಪೊಲೀಸರು, ರಸ್ತೆಯಲ್ಲಿ ಪ್ರಾಣಿಗಳನ್ನು ಓಡಾಡಲು ಬಿಡಬಾರದು ಎಂದು ಎಚ್ಚರಿಕೆಯನ್ನೂ ನೀಡಿದಾರೆ.

ಮೇಕೆ ಹಿಡಿದುಕೊಂಡು ಹೋಗಲು ಕಾರಣ:

ಮೇಕೆ ಕಾಯುವ ವ್ಯಕ್ತಿಯೋರ್ವ ಮಾಸ್ಕ್ ಇಲ್ಲದೆ ನಡೆದುಕೊಂಡು ಹೋಗುತ್ತಿದ್ದ. ಮೇಕೆಯೂ ಆತನ ಜೊತೆ ಬರುತ್ತಿತ್ತು. ಪೊಲೀಸ (police)ರನ್ನು ಕಂಡಕೂಡಲೇ ಆತ ಅಲ್ಲಿಂದ ಓಡಿಹೋಗಿದ್ದಾನೆ. ಹಾಗಾಗಿ ಮೇಕೆಯನ್ನು ಹಿಡಿದುಕೊಂಡು ಬಂದಿದ್ದಾರೆ ಎಂದು ಠಾಣಾಧಿಕಾರಿ ಸೈಫುದ್ದೀನ್ ಬೈಗ್ ಹೇಳಿದ್ದಾರೆ.

ಆದರೆ ಮೇಕೆಯನ್ನು ಬಂಧಿಸಿದ ಪೊಲೀಸ್ ಹೇಳುವುದೇ ಬೇರೆ. ಜನರು ಈಗ ತಮ್ಮ ನಾಯಿಗಳಿಗೂ ಮಾಸ್ಕ್ ಹಾಕುತ್ತಾರೆ. ಆದರೆ ಮೇಕೆಗೆ ಯಾಕೆ ಹಾಕುವುದಿಲ್ಲ. ಹಾಗಾಗಿ ಬಂಧಿಸಿದ್ದೇನೆ ಎನ್ನುತ್ತಾರೆ.

ಕೊರೋನಾ (Corona) ಸೋಂಕು ಮುಂದಿನ ದಿನಗಳಲ್ಲಿ ಇನ್ನೆಂಥಹ ಘಟನೆಗಳಿಗೆ ಸಾಕ್ಷಿಯಾಗುತ್ತೋ? ಈ ಕೋರೋನಾ ಸೋಂಕಿನ ಮಾಯ ಯಾರು ಬಲ್ಲರು. ಕಣ್ಣಿಗೆ ಕಾಣದ ಈ ಸೋಂಕು ಇಡೀ ಮಾನವ ಕುಲವನ್ನೇ ನಡುಗಿಸಿಬಿಟ್ಟಿದೆ.