News

ಜಾಗತಿಕ ತಾಪಮಾನದಿಂದ ಹವಾಮಾನದಲ್ಲಿ ವೈಪರಿತ್ಯ ಮತ್ತು ಕೃಷಿ

17 April, 2021 9:14 AM IST By:
Global warming

ವಿಶ್ವದ ಅನೇಕ ಭಾಗಗಳಲ್ಲಿ ಉಷ್ಣತೆಯ ಮಟ್ಟ ತನ್ನ ಇಲ್ಲಿಯವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗಿರುವುದನ್ನು ನಾವಿಂದು ಕಾಣುತ್ತಿದ್ದೇವೆ. ಅಲ್ಲದೇ ಮಳೆಯ ಕೊರತೆ ಎಂದಿಗಿಂತ ಹೆಚ್ಚಾಗಿ ನೀರಿನ ಅಪಾರ ಕೊರತೆಯನ್ನು ಎದಿರುಸುತ್ತಿದ್ದೇವೆ. ಕಳೆದ ಸುಮಾರು ವರ್ಷಗಳಿಂದ ಬಿಸಿಲಿನ ಪ್ರಕೋಪದಿಂದ ಅನೇಕ ಜನ ಮತ್ತು ಜಾನುವಾರಗಳು ಸಾವನ್ನಪ್ಪಿವೆ. ನೀರಿನ ಅಭಾವದಿಂದ ಅನೇಕ ಪ್ರದೇಶಗಳಿಗೆ ನೀರಿನ ಸರಬುರಾಜು ಮಾಡಲು ರೈಲುಗಳ ಬಳಕೆ ಮಾಡಿದ್ದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಹಿಂದೆಂದೂ ನೀರಿನ ಅಭಾವವನ್ನು ಎದುರಿಸದ ಪ್ರದೇಶಗಳಲ್ಲಿ ಕೂಡ ಈ ಸಮಸ್ಯೆಯುಂಟಾಗಿದ್ದನ್ನು ನೋಡಿದರೆ, ನಾವು ಈ ಭೂಮಿಯ ತಾಪಮಾನ ಏರಿಕೆಯ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕಾಗಿದೆ. ಮಾನವನ ಆಧುನಿಕ ಚಟುವಟಿಕೆಗಳಿಂದ ಜಗತ್ತಿನ ಆರ್ಥಿಕ ಪ್ರಗತಿ ಸಾಧ್ಯ ಎನ್ನುವುದು ಕೂಡಾ ಸತ್ಯ. ಆದ್ದರಿಂದ ಈ ಆರ್ಥಿಕ ಪ್ರಗತಿ ಮತ್ತು ತಾಪಮಾನ ಎರಿಕೆಯಿಂದ ಭೂಮಿಯ ರಕ್ಷಣೆ ನಡುವೆ ಒಂದು ಯುದ್ದ ಆರಂಭವಾಗಿದೆ.

ಜಾಗತಿಕ ತಾಪಮಾನದ ಪರಿಣಾಮಗಳು

 ಭೂಮಿಯ ಉಷ್ಣತೆ ಅಧಿಕವಾಗಿ ಹವಾಮಾನದಲ್ಲಿ ವೈಪರಿತ್ಯಗಳಾಗಬಹುದು, ಇದರಿಂದ ಅತೀವೃಷ್ಟಿ ಮತ್ತು ಅನಾವೃಷ್ಟಿ ಸಂಭವಿಸಿ ಅಪಾರ ಸಾವು ನೋವುಗಳುಟಾಂಗಬಹುದು.

  1. ಭೂಮಿಯ ಹಿಮ ಶಿಖರಗಳು ಕರಗಿ ಸಮುದ್ರ ಸೇರಿ, ಸಮುದ್ರದ ಮಟ್ಟ ಹೆಚ್ಚಾಗಿ ನಗರಗಳು ಮುಳುಗಬಹುದು.
  2. ಹವಾಮಾನ ವೈಪರಿತ್ಯದಿಂದ ಬೆಳೆಗಳು ನಾಶವಾಗಿ ತೀವ್ರವಾಗಿ ಆಹಾರದ ಕೊರತೆಯುಂಟಾಗಬಹುದು.
  3. ಹೆಚ್ಚಿನ ಉಷ್ಣತೆಯಿಂದ ಜೀವ ವೈವಿಧ್ಯದಲ್ಲಿ ತೀವ್ರ ಬದಲಾವಣೆಯಾಗಬಹುದು.

ಸೂರ್ಯನ ಕಿರಣಗಳಿಂದ ಭೂಮಿಯ ತಾಪಮಾನ ಹೆಚ್ಚಾಗಿ ಭೂಮಿಯಿಂದ ವಿಕಿರಣಗಳು ವಾಪಸ್ಸು ಬಾಹ್ಯಾಕಾಶದ ಕಡೆ ಬಿಡುಗಡೆಯಾಗುವವು. ಭೂಮಿಯಿಂದ ಬರುವ ಈ ವಿಕಿರಣಗಳ ಸ್ವಲ್ಪ ಭಾಗವನ್ನು ವಾತಾವರಣದಲ್ಲಿ ನೈಸರ್ಗಿಕವಾಗಿ ಇರುವ ಅನಿಲಗಳು ಹಿಡಿದಿಟ್ಟುಕೊಳ್ಳುವುದರಿಂದ ವಾತಾವರಣದ ತಾಪಮಾನವು ಹೆಚ್ಚುತ್ತದೆ (ಅಂದಾಜಿನ ಪ್ರಕಾರ ಈ ಶತಮಾನದ ಕೊನೆಗೆ ಜಾಗತಿಕ ತಾಪಮಾನವು 1.5 – 4.0 ಡಿಗ್ರಿ ಸೆ.  ಹೆಚ್ಚಾಗಲಿದೆ). ಇಂತಹ ಅನಿಲಗಳನ್ನು ಹಸಿರು ಮನೆ ಅನಿಲಗಳೆನ್ನುತ್ತಾರೆ. ಅವು ಯಾವವೆಂದರೆ, ಇಂಗಾಲದ ಡೈ ಆಕ್ಸೈಡ್, ಮೀಥೇನ್, ನೈಟ್ರಸ್ ಆಕ್ಸೈಡ್, ಫ್ಲೂರೋಕ್ಲೋರೋ ಕಾರ್ಬನ್ ಇತ್ಯಾದಿ.

ಇತ್ತೀಚಿನ ದಿನಗಳಲ್ಲಿ ಮಾನವನ ಅತಿಯಾದ ಕೈಗಾರಿಕರಣ ಮತ್ತು ಜಾಗತೀಕರಣದಿಂದ ಹಾಗೂ ಜನಸಂಖ್ಯಾ ಸ್ಪೋಟದಿಂದಾಗಿ ವಾತಾವರಣದಲ್ಲಿರುವ ಹಸಿರು ಮನೆ ಅನಿಲಗಳ ಸಾಂದ್ರತೆಯು ಹೆಚ್ಚಿ ವಾತಾವರಣದ ಉಷ್ಣ ಉತ್ತರಾರ್ಧಗೋಳದಲ್ಲಿ ಸರಾಸರಿ 0.75 ಡಿಗ್ರಿ.ಸೆ. ಹೆಚ್ಚಾಗಿ ಅನೇಕ ದುಷ್ಪರಿಣಾಮಗಳನ್ನುಂಟು ಮಾಡುತ್ತಿದೆ.

ಮುಖ್ಯವಾದ ಹಸಿರು ಮನೆ ಅನಿಲಗಳ ಮೂಲಗಳು

 

ಇಂಗಾಲದ ಡೈ ಆಕ್ಸೈಡ್

ಮೀಥೇನ್

ನೈಟ್ರಸ್ ಆಕ್ಸೈಡ್

ಕ್ಲೊರೋಫ್ಲೋರೋ ಕಾರ್ಬನ್

ನೈಸರ್v ಮೂಲ

ಜ್ವಾಲಾಮುಖಿ ಸ್ಫೋಟಗಳು, ಕಾಡ್ಗಿಚ್ಚು, ಇಂಗಾಲದ ವಸ್ತುಗಳ ಕೊಳೆಯುವಿಕೆ ಮತ್ತು ಪ್ರಾಣಿ ಮತ್ತು ಸೂಕ್ಷ್ಮಜೀವಿಗಳ ಉಸಿರಾಟ ಕ್ರಿಯೆ.

ಜೌಗು ಭೂಮಿ, ಕಾಡು ಪ್ರಾಣಿಗಳು ಮತ್ತು ಗೆದ್ದಲು

ಸೂಕ್ಷ್ಮ ಜೀವಿಗಳ ಚಟುವಟಿಕೆ ಹಾಗೂ ಮಿಂಚು

-

ಮಾನವ ನಿರ್ಮಿತ

ಕಲ್ಲಿದ್ದಲಿನಿಂದ ಶಾಖೋತ್ಪನ್ನ, ವಿದ್ಯುತ್ ಉತ್ಪಾದನೆ, ಕಾರ್ಖಾನೆ ಮತ್ತು ವಾಹನಗಳಿಂದ ವಿಸರ್ಜಿಸಲ್ಪಡುತ್ತಿರುವ ಹೊಗೆ, ಅರಣ್ಯ ನಾಶ ಮತ್ತು ತ್ಯಾಜ್ಯಗಳ ಸುಡುವಿಕೆ ಇತ್ಯಾದಿ.

ಜಾನುವಾರಗಳಲ್ಲಿ ಆಮ್ಲಜನಕ ರಹಿತ ಪಚನ ಕ್ರಿಯೆ, ತ್ಯಾಜ್ಯ ನಿರ್ವಹಣೆ, ಕಾಂಪೋಸ್ಟ್ ತಯಾರಿಕೆ, ಭತ್ತದ ಬೇಸಾಯ, ಕೃಷಿ ತ್ಯಾಜ್ಯಗಳ ಸುಡುವಿಕೆ ಮತ್ತು ರಸಗೊಬ್ಬರಗಳ ಬಳಕೆ.

ಕಾರ್ಖಾನೆಗಳು ಮತ್ತು ಶಾಖೋತ್ಪನ್ನ ಕೇಂದ್ರಗಳಲ್ಲಿ ಹೊರಹೊಮ್ಮುವ ಹೊಗೆ, ಕಾಂಪೋಸ್ಟ್ ತಯಾರಿಕೆ, ಕೃಷಿ ತ್ಯಾಜ್ಯ ವಸ್ತುಗಳ ಸುಡುವಿಕೆ ಹಾಗೂ ರಸಗೊಬ್ಬರಗಳ ಬಳಕೆ.

ಹವಾ ನಿಯಂತ್ರಕ ಸಾಧನಗಳು ಹಾಗೂ ಶುಷ್ಕ ಸಂಸ್ಕರಣಾ ಘಟಕಗಳು ಇತ್ಯಾದಿ.

ಹಸಿರು ಮನೆ ಅನಿಲಗಳ ಏರಿಕೆ ಪ್ರಮಾಣ

 ಕೈಗಾರಿಕಾ ಕ್ರಾಂತಿಗಿಂತ ಮೊದಲು ಹಾಗೂ ಇಂದು ಇಂಗಾಲದ ಡೈ ಆಕ್ಸೈಡ್ 278 ರಿಂದ 379 ಕ್ಕೆ, ಮಿಥೇನ್ 0.715 ರಿಂದ 1.774 ಕ್ಕೆ,  ನೈಟ್ರಸ್ ಆಕ್ಸೈಡ್ 0.270 ರಿಂದ 0.319 ಪಿಪಿಎಮ್ ಗೆ ಹಾಗೂ ಸಿಎಪ್‍ಸಿ 40 ರಿಂದ 74 ಪಿಪಿಎಮ್ ವರಗೆ ವಾತಾವರಣದಲ್ಲಿ ಹೆಚ್ಚಾಗಿವೆ. ಅಲ್ಲದೇ ಇಂಗಾಲಕ್ಕೆ ಹೊಲಿಸಿದರೆ ಸಿಎಪ್‍ಸಿ 15,000, ನೈಟ್ರಸ್ ಆಕ್ಸೈಡ್ 310 ಹಾಗೂ ಮೀಥೇನ್ 21 ಪಟ್ಟು ತಾಪಮಾನ ಹೆಚ್ಚಿಸುವ ಸಾಮಥ್ರ್ಯ ಹೊಂದಿರುವದಲ್ಲದೇ ನೈಟ್ರಸ್ ಆಕ್ಸೈಡ್ (114) ಹಾಗೂ ಸಿಎಪ್‍ಸಿ (111) ಹೆಚ್ಚಿನ ವರ್ಷಗಳವರಗೆ ಕ್ರೀಯಾಶೀಲವಾಗಿರುವವು.

ಹಸಿರು ಮನೆ ಅನಿಲಗಳ ಹೊರಸೂಸುವ ಪ್ರಮಾಣ ಅಭಿವೃದ್ದಿ ಹೊಂದಿದ ದೇಶಗಳಾದ ಅಮೇರಿಕಾ , ಯುರೋಪ್ ಹಾಗೂ ಚೀನಾ ದೇಶಗಳು ಭಾರತಕ್ಕೆ ಹೊಲಿಸಿದಾಗ ಕ್ರಮವಾಗಿ 4, 2.5 ಹಾಗೂ 2.5 ಪಟ್ಟು ಹೆಚ್ಚು ವಾತಾವರಣಕ್ಕೆ ಬಿಡುತ್ತವೆ.

  • ತೈಲ ಮತ್ತು ಅನಿಲ ಉತ್ಪನ್ನ ಕೈಗಾರಿಕೆಗಳಿಂದ ಹೆಚ್ಚಿನ ಹಸಿರು ಮನೆ ಅನಿಲ (25.9% ಮತ್ತು4%) ಬಿಡುಗಡೆಯಾಗುತ್ತದೆ.
  • ಅರಣ್ಯನಾಶದಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ (17.4%) ಮತ್ತು ಭತ್ತದ ಕೃಷಿಯಲ್ಲಿ ಮಿಥೇನ್ ಉತ್ಪಾದನೆಯಿಂದ (13.5%).

ವಸತಿ, ವಾಣಿಜ್ಯ ಕಟ್ಟಡಗಳಿಂದ (7.9%) ಮತ್ತು ಸಾರಿಗೆಯಿಂದ ಹೊರಸೂಸುವ ಇಂಗಾಲದ ಡೈ ಆಕ್ಸೈಡ್ (13.1%) ನಿಂದ ಹಸಿರು ಮನೆ ಅನಿಲದ ಪ್ರಮಾಣ ಹೆಚ್ಚಾಗಿ ಜಾಗತಿಕ ತಾಪಮಾನ ಉಂಟಾಗುತ್ತದೆ.

ಜಾಗತಿಕ ತಾಪಮಾನ ಏರಿಕೆಯಿಂದಾಗುವ ಮಳೆಯ ಪ್ರಮಾಣದ ಏರುಪೇರು :

 ಜಾಗತಿಕ ತಾಪಮಾನದಿಂದ ಎಲ್ಲಾ ಕಡೆ ಸಮನಾಗಿ ಮಳೆ ಹಂಚಿಕೆಯಾಗುವುದಿಲ್ಲ, ಆದ್ದರಿಂದ ಅತೀ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಮಳೆ ಪ್ರಮಾಣ ಮತ್ತಷ್ಟು ಕಡಿಮೆಯಾಗಲಿದ್ದು, ಈ ಪ್ರದೇಶಗಳಲ್ಲಿ ಶಾಶ್ವತ ಬರ ಪರಿಸ್ಥಿತಿ ಅಥವಾ ಮರುಭೂಮಿಕರಣ ಎದುರಾಗಬಹುದು ಹಾಗೂ ಅತೀ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ನೆರೆ ಹಾವಳೆ ಸಂಭವಿಸುತ್ತದೆ. ಅಲ್ಲದೇ, ನೈಸರ್ಗಿಕ ವಿಕೋಪಗಳಾದ ಚಂಡಮಾರುತ, ಬಿಸಿಗಾಳಿ, ಆಲಿಕಲ್ಲು ಮಳೆ ಇತ್ಯಾದಿಗಳು ಹೆಚ್ಚಾಗುವ ಸಂಭವವಿರುತ್ತದೆ. ಏರಿಕೆಯಾದ ಉಷ್ಣದಿಂದ ಶೀತ ಪ್ರದೇಶಗಳಲ್ಲಿರುವ ಹಿಮ ಕರಗಿ ಸಮುದ್ರದ ಮಟ್ಟ ಏರುವದು, ಪರಿಣಾಮವಾಗಿ ಅಂತರ್ಜಲ ಸವಳಾಗುವದು.

ಜಾಗತಿಕ ತಾಪಮಾನದ ಏರಿಕೆಯಿಂದ ಕೃಷಿಯಲ್ಲಿ ಅನುಕೂಲ ಹಾಗೂ ಪ್ರತಿಕೂಲ ಪರಿಣಾಮಗಳೆರಡೂ ಆಗಬಹುದೆಂದು ಶಂಕಿಸಲಾಗಿದೆ. ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್ ಪ್ರಮಾಣದ ಏರಿಕೆಯಿಂದ ಎಲ್ಲಾ ಬೆಳೆಗಳಲ್ಲಿ ದ್ಯುತಿ ಸಂಶ್ಲೇóಷಣಾ ಕ್ರಿಯೆ ಹೆಚ್ಚುವುದು. ಈ ಹೆಚ್ಚಳವು ಅ3 ಬೆಳೆಗಳಲ್ಲಿ (ಗೋಧಿ, ಭತ್ತ, ಸೋಯಾ ಅವರೆ) ಅ4 ಬೆಳೆಗಳಿಗಿಂತ (ಮುಸುಕಿನ ಜೋಳ, ಜೋಳ, ಕಬ್ಬು) ಹೆಚ್ಚಿಗೆ ಇರುವುದು. ಬೆಳೆಗಳಲ್ಲಿ ಸಾರಜನಕದ ಅಂಶ ಕಡಿಮೆಯಾಗಿ ಇಂಗಾಲದ ಪ್ರಮಾಣ ಜಾಸ್ತಿಯಾಗುವುದರಿಂದ ಕೀಟ ಮತ್ತು ರೋಗ ಬಾಧೆಗಳು ಕಡಿಮೆಯಾಗುವ ಸಂಭವವಿರುತ್ತದೆ.

  ಏರುತ್ತಿರುವ ಉಷ್ಣಾಂಶದ ದುಷ್ಪರಿಣಾಮವಾಗಿ ನಮ್ಮ ದೇಶದ ಚಳಿಗಾಲದ ಬೆಳೆಗಳಾದ ಗೋಧಿ, ಕಡಲೆ, ಸಾಸಿವೆ, ಆಲೂಗಡ್ಡೆ ಬೆಳೆಗಳ ಮೇಲೆ ಹೆಚ್ಚಾಗುವದರಿಂದ ಇಳುವರಿ ಕಡಿಮೆಯಾಗುವುದು. ಆದರೆ ಉಷ್ಣವಲಯದ ಬೆಳೆಗಳಿಗೆ (ಭತ್ತ, ಕಬ್ಬು, ಮೆಕ್ಕೆ ಜೋಳ, ಸಜ್ಜೆ ಇತ್ಯಾದಿ) ಲಾಭವಾಗುವದು. ಬೆಳೆಗಳ ಉಸಿರಾಟ ಮತ್ತು ಭಾಷ್ಫೀಭವನ-ಭಾಷ್ಫೋತ್ಸೇಕದ ಪ್ರಮಾಣದಲ್ಲಿಯ ಹೆಚ್ಚಳದಿಂದಾಗಿ, ಬೆಳೆಗಳು ಬೇಗ ಹೂ ಬಿಟ್ಟು, ಬೆಳೆ ಅವಧಿ ಕಡಿಮೆಯಾಗಿ ಉತ್ಪಾದಕತೆ ಕುಂಠಿತವಾಗುವುದು. ಒಂದು ಅಂದಾಜಿನ ಪ್ರಕಾರ ಪ್ರತಿ ಒಂದು ಡಿಗ್ರಿ ಉಷ್ಣಾಂಶ ಏರಿಕೆಯಿಂದ 4 ರಿಂದ 5 ದಶಲಕ್ಷ ಟನ್ ಉತ್ಪಾದನೆ ಕಡಿಮೆಯಾಗುತ್ತದೆ. ಬೆಳೆಗಳಲ್ಲಿ ಕಂಡುಬರುವ ಕಳೆಗಳು, ಕೀಟಗಳು ಮತ್ತು ರೋಗಗಳಲ್ಲಿ ಅಸಮತೋಲನ ಉಂಟಾಗಿ ಇವುಗಳ ಹಾವಳಿ ಜಾಸ್ತಿಯಾಗುತ್ತದೆ. ಜೈವಿಕ ತ್ಯಾಜ್ಯಗಳ ಕೊಳೆಯುವಿಕೆ ಮತ್ತು ರಸಗೊಬ್ಬರಗಳ ಪರಿವರ್ತನೆ ವೇಗ ಹೆಚ್ಚಾಗುವದರಿಂದ ರಸಗೊಬ್ಬರಗಳ ಪೋಲಾಗುವಿಕೆ ಕ್ಷಮತೆ ಕಡಿಮೆಯಾಗುತ್ತದೆ. 

ಜಾಗತಿಕ ತಾಪಮಾನದಿಂದಾಗಿ ಸಾಕು ಪ್ರಾಣಿಗಳ ಮೇಲೆ  ಉಷ್ಣಾಂಶ ಹೆಚ್ಚಾಗುವುದರಿಂದ ಹಾಲಿನ ಉತ್ಪಾದನೆ ಸುಮಾರು 1.6 ದಶಲಕ್ಷ ಟನ್‍ಗಳಷ್ಟು ಕಡಿಮೆಯಾಲಿದೆ. ಹೆಚ್ಚಿನ ಉಷ್ಣಾಂಶದಿಂದ ಕೋಳಿ ಸಾಕಾಣೆ ಮೇಲೂ ದುಷ್ಪರಿಣಾಮ ಬೀರುತ್ತದೆ, ಉದಾಹರಣೆಗೆ, ಆಂಧ್ರ ಪ್ರದೇಶದಲ್ಲಿ ಮೇ ಮತ್ತು ಜೂನ್ 2003 ರಲ್ಲಿ ಹೆಚ್ಚಾಗಿದ್ದ ಉಷ್ಣಾಂಶದಿಂದ ಸುಮಾರು 20 ಲಕ್ಷ ಕೋಳಿಗಳು ಸಾವನ್ನಪ್ಪಿರುತ್ತವೆ. ಸಮುದ್ರದ ನೀರಿನ ತಾಪಮಾನ ಹೆಚ್ಚಾಗುವುದರಿಂದ ಮೀನಿನ ವಂಶಾಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರಿ ಅವುಗಳ ಮರಣಕ್ಕೆ ಕಾರಣವಾಗುತ್ತದೆ.

ಹವಾಮಾನ ಆಧಾರಿತ ಕೃಷಿ ಸಲಹೆಗಳ ವಿತರಣೆ ಮತ್ತು ಧೀರ್ಘಾವದಿ ಹವಾಮಾನದ ಎಚ್ಚರಿಕೆ ನೀಡಲು, ಹವಾಮಾನ ಮುನ್ಸೂಚನೆಯ ಪಾತ್ರ ಮಹತ್ವದಾಗಿದ್ದು, ನೈಸರ್ಗಿಕ ವಿಪತ್ತುಗಳಿಂದ ಬೆಳೆ ಹಾನಿಯನ್ನು ತಡೆಗಟ್ಟುವದಲ್ಲದೆ ಕೃಷಿ ಚಟುವಟಿಕೆಗಳನ್ನು ಮುನ್ನಡೆಸಲು ಅಥವಾ ಮೂಂದೂಡಲೂ ಸಹ ಸಹಾಯ ಮಾಡುತ್ತದೆ. ಎಲೆಕ್ಟ್ರಾನಿಕ ಮಾಧ್ಯಮದ ಸಹಾಯದಿಂದ ನೈಜ ಸಮಯದ ಆಧಾರದ ಮೇಲೆ ಅಂತಿಮ ಬಳಕೆದಾರರಿಗೆ ಹವಾಮಾನ ಮೂನ್ಸೂಚನೆ ಪ್ರಸಾರ ಮಾಡುವುದರಿಂದ  ಬೆಳೆ ಉತ್ಪಾದನೆ ಮತ್ತು ರಕ್ಷಣೆಯಲ್ಲಿ ಸಹಾಯವಾಗುತ್ತದೆ. ನಿಖರವಾದ ಹವಾಮಾನ ಮೂನ್ಸೂಚನೆ ಮತ್ತು ಹವಾಮಾನ ಆಧಾರಿತ ಕೃಷಿ ಸಲಹೆಗಳನ್ನು ಸಮೂಹ ಸಂವಹನ ಮಾಧ್ಯಮಗಳ ಮೂಲಕ (ರೇಡಿಯೋ, ಟಿವ್ಹಿ, ಮೊಬೈಲ್) ಒದಗಿಸಿದರೆ ರೈತರಿಗೆ ಹೆಚ್ಚಿನ ಮೌಲ್ಯವನ್ನು ನೀಡಿದಂತಾಗುತ್ತದೆ. ಈ ದಿಶೆಯಲ್ಲಿ        ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ಪ್ರಾದೇಶಿಕ ಭಾಷೆಯಲ್ಲಿ ರೈತರಿಗೆ ಮುಟ್ಟಿಸುವ ಪ್ರಯತ್ನದಲ್ಲಿ ಭಾರತ ಹವಾಮಾನ ಇಲಾಖೆ (India Meteorological Department),, ಭಾರತೀಯ ಕೃಷಿ ಅನುಸಂಧಾನ ಪರಿಷತ್ತು (Indian Council of Agricultural Research) ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ (Indian Institute Tropical Meteorology) ಜಂಟಿಯಾಗಿ ಮೇಘದೂತ ಮೊಬೈಲ ಅಪ್ಲಿಕೇಶನನ್ನು ಹೊರತಂದಿದೆ.

ಲೇಖನ: ಡಾ. ಶಾಂತವೀರಯ್ಯ, ಡಾ. ಅಶೋಕ ಪಿ, ಶ್ರೀ. ಚಂದ್ರಕಾಂತ ಕೊಟಬಾಗಿ ಮತ್ತು ಕು. ಸುಜಾತಾ ಹೊನ್ನತ್ತಿ, ಕೃಷಿ ವಿಜ್ಞಾನ ಕೇಂದ್ರ, ಹಾವೇರಿ