News

ಹಲವು ಅಚ್ಚರಿಗಳಿಗೆ ಸಾಕ್ಷಿಯಾದ GKVK ಕೃಷಿ ಮೇಳ: ವಿಶೇಷತೆಗಳೇನು ಗೊತ್ತೆ?

04 November, 2022 10:55 AM IST By: Hitesh
Gkvk

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಜಿಕೆವಿಕೆ ಆವರಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುತ್ತಿರುವ ಕೃಷಿ ಮೇಳಕ್ಕೆ ರೈತರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮೇಲೆ ಗುಂಡಿನ ದಾಳಿ!

ತುಂತುರು ಮಳೆಯ ನಡುವೆಯೂ ಎರಡನೇ ದಿನದ ಮೇಳ ಅದ್ಧೂರಿಯಾಗಿ ನಡೆಯುತ್ತಿದೆ. ಮೇಳವು ರೈತರ ಜಾತ್ರೆಯಂತೆ ಕಂಡುಬಂತು. ಕೃಷಿಕರ ಹುಮ್ಮಸ್ಸು ಹೆಚ್ಚಾಗಿತ್ತು.

ಕೃಷಿ ಮೇಳದಲ್ಲಿ ಸಿರಿಧಾನ್ಯಗಳು, ಔಷಧಿ, ಸುಗಂಧ ದ್ರವ್ಯ ಸಸ್ಯಗಳು, ಕುರಿ–ಕೋಳಿ ಹೊಸ ತಳಿಗಳು, ಅನ್ನದಾತರಿಗೆ ನೆರವಾಗುವ ನವೋದ್ಯಮಗಳು, ಔಷಧ ಸಿಂಪಡಣೆಗೆ

ಅವಶ್ಯವಿರುವ ವಿವಿಧ ಮಾದರಿಯ ಯಂತ್ರಗಳು, ಆಲಂಕಾರಿಕ ಮೀನುಗಳು, ಕಳೆ ತೆಗೆಯಲು ಬಳಸುವ ಯಂತ್ರಗಳು ಸೇರಿದಂತೆ ವಿವಿಧ ಯಂತ್ರೋಪಕರಣಗಳು ರೈತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ.  

ದಕ್ಷಿಣ ಕೊರಿಯಾದತ್ತ 25 ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ!

ಕೃಷಿ ಮೇಳದಲ್ಲಿ 697 ಮಳಿಗೆಗಳನ್ನು ನಿರ್ಮಿಸಲಾಗಿತ್ತು. ರೈತರು ಮಳಿಗೆಗಳಿಂದ ಮಾಹಿತಿ ಪಡೆದುಕೊಂಡರು. ಯಂತ್ರೋಪಕರಣ ಮಳಿಗೆಗಳಿಗೆ ಆದ್ಯತೆ ನೀಡಲಾಗಿತ್ತು.

ಸ್ಥಳದಲ್ಲಿಯೇ ಮಡಿಕೆ ತಯಾರಿಕೆ ಪ್ರಾತ್ಯಕ್ಷಿಕೆ ಹಾಗೂ ಜಾನಪದ ಕಲಾವಿದರ ಹಾಡುಗಳು ಗಮನ ಸೆಳೆದವು.

ಈ ಬಾರಿಯ ಕೃಷಿ ಮೇಳದಲ್ಲಿ ಖುಷ್ಕಿ ಬೇಸಾಯದ ಬೆಳೆ, ಹನಿ ನೀರಾವರಿ ಪದ್ಧತಿ, ಚಾವಣಿ, ತೋಟಗಾರಿಕೆ ಮಳಿಗೆ, ಸಮಗ್ರ ಬೇಸಾಯ ಪದ್ಧತಿ ವಿಧಾನ,

ಜಲಾನಯನ ನಿರ್ವಹಣೆ, ಮಳೆ ನೀರು ಸಂಗ್ರಹ ವಿಧಾನ, ಮಣ್ಣು ರಹಿತ ಕೃಷಿಯ ಆವಿಷ್ಕಾರ ಹಾಗೂ ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಆಕರ್ಷಕವಾಗಿವೆ.

ರೈತರಿಗೆ ಸಿಹಿಸುದ್ದಿ: ಹಿಂಗಾರು; ಭತ್ತ ಖರೀದಿಯಲ್ಲಿ ಶೇ 12% ಹೆಚ್ಚಳ

ವಿವಿ ತಜ್ಞರು ಅಭಿವೃದ್ಧಿ ಪಡಿಸಿರುವ ಒಟ್ಟು 9 ತಳಿಗಳನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಬಿಡುಗಡೆ ಮಾಡಿದರು. ಅವುಗಳ ಪ್ರಾತ್ಯಕ್ಷಿಕೆಯನ್ನು ರೈತರು ಮುಗಿಬಿದ್ದು ವೀಕ್ಷಿಸಿದರು.

ಕೃಷಿ ಇಲಾಖೆ, ರೇಷ್ಮೆ ಇಲಾಖೆ, ತೋಟಗಾರಿಕೆ ಇಲಾಖೆಯ ಮಳಿಗೆಗಳು, ಸರ್ಕಾರದಿಂದ ದೊರೆಯುವ ಯೋಜನೆಗಳ ಮಾಹಿತಿ ನೀಡಲಾಯಿತು. ನರ್ಸರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಮಳಿಗೆ ಸ್ಥಾಪಿಸಲಾಗಿತ್ತು.

ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ

  • ಸಾಧಕರು; ಪ್ರಶಸ್ತಿ
  • ಎಚ್‌ಜಿ.ಗೋಪಾಲಗೌಡ (ಚಿಕ್ಕಬಳ್ಳಾಪುರ) ಎಚ್‌.ಡಿ.ದೇವೇಗೌಡ ರಾಜ್ಯಮಟ್ಟದ ಪ್ರಶಸ್ತಿ
  •  ಸಿ.ನವಿಕ್ರಮ್‌ (ದೊಡ್ಡಬಳ್ಳಾಪುರ)  ಡಾ.ಎಂ.ಎಚ್‌.ಮರಿಗೌಡ ಅತ್ಯುತ್ತಮ ತೋಟಗಾರಿಕೆ ರೈತ ಪ್ರಶಸ್ತಿ
  •  ಸಿ.ಪಿ.ಕೃಷ್ಣ (ಮದ್ದೂರು) ಕ್ಯಾನ್‌ ಬ್ಯಾಂಕ್‌ ರೈತ ಪ್ರಶಸ್ತಿ
  • ಎಂ.ಕವಿತಾ (ಹೊಳೆನರಸೀಪುರ)  ಕ್ಯಾನ್‌ ಬ್ಯಾಂಕ್‌ ರೈತ ಮಹಿಳಾ ಪ್ರಶಸ್ತಿ
  •  ಎಂ.ಟಿ.ಮುನೇಗೌಡ (ಚಿಕ್ಕಬಳ್ಳಾಪುರ) ಡಾ.ಆರ್‌.ದ್ವಾರಕೀನಾಥ್‌ ಅತ್ಯುತ್ತಮ ರೈತ ಪ್ರಶ್ತಸಿ
  •  ಕೃಷಿ ವಿಜ್ಞಾನಿ ಡಾ.ರಾಜೇಗೌಡ (ಹಾಸನ) ಡಾ.ಆರ್‌.ದ್ವಾರಕೀನಾಥ್‌ ಪ್ರಶಸ್ತಿ

 

ಇಸ್ರೇಲ್‌ಬೇಡ ಕೋಲಾರ ಇರಲಿ!

ತುಂತುರು ನೀರಾವರಿ ಬಳಸಿಕೊಂಡು ಕೃಷಿ ಮಾಡುವುದರಲ್ಲಿ ಕೋಲಾರದ ರೈತರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.

ಕೃಷಿ ಮೇಳವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಸ್ರೇಲ್‌ ಮಾದರಿ ಬೇಕಿಲ್ಲ. ಕೋಲಾರ ಮಾದರಿಯೇ ಸೂಕ್ತ ಎಂದರು.

ಕೋಲಾರ ಜಿಲ್ಲೆಯ ರೈತರು ಬರ ಪರಿಸ್ಥಿತಿಯ ನಡುವೆಯೂ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.  

ಮುಂದೆ ಜಲಾನಯನ ನಿರ್ವಹಣೆಗೆ ರಾಜ್ಯದಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪಿಸಲಾಗುವುದು. ಬೆಂಗಳೂರು ಕೃಷಿ ವಿವಿಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತರಲಾಗುವುದು.

ಈ ಪ್ರಯೋಗ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಚಾಮರಾಜನಗರ, ಬಾಗಲಕೋಟೆ, ಶಿವಮೊಗ್ಗ, ಧಾರವಾಡ, ಗಂಗಾವತಿ ಸೇರಿದಂತೆ ರಾಜ್ಯದ ಏಳು ಕಡೆ ಈ ಕೇಂದ್ರ ಸ್ಥಾಪಿಸಲಾಗುವುದು ಎಂದು ಹೇಳಿದರು.  

9.33 ಲಕ್ಷ ವಿದ್ಯಾರ್ಥಿಗಳಿಗೆ ₹ 421 ಕೋಟಿ ವಿದ್ಯಾನಿಧಿ ವಿತರಿಸಲಾಗಿದೆ. ರೈತರಿಗೆ ಡೀಸೆಲ್‌ಗೆ ಸಬ್ಸಿಡಿ ನೀಡಲಾಗುತ್ತಿದ್ದು,  ರಾಜ್ಯದಲ್ಲಿ ಕಳೆದ ಸಾಲಿಗಿಂತ ಈ ವರ್ಷ ಶೇ 10ರಷ್ಟು ಹೆಚ್ಚಿನ ಆಹಾರ ಉತ್ಪಾದನೆಯ ನಿರೀಕ್ಷೆಯಿದೆ ಎಂದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌  ಅವರು ಮಾತನಾಡಿ, ಇಸ್ರೇಲ್‌ ಕೃಷಿಗೆ ಸೂಕ್ತವಾದ ಹವಾಮಾನ ಹೊಂದಿಲ್ಲ.  

ಆದರೂ ಅಲ್ಲಿನ ರೈತರು ತುಂತುರು ನೀರಾವರಿ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿದ್ದಾರೆ. ಭಾರತವು ಕೃಷಿ ಪ್ರಧಾನ ದೇಶವಾಗಿದೆ.

ನಮ್ಮ ರೈತರೂ ಯಶಸ್ಸು ಸಾಧಿಸಬೇಕು. ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಅಲ್ಲದೇ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದರು.

ಕುಲಪತಿ ಡಾ.ಎಸ್‌.ವಿ.ಸುರೇಶ, ವಿವಿ ವಿಸ್ತರಣಾ ನಿರ್ದೇಶಕ ಡಾ.ಕೆ.ನಾರಾಯಣಗೌಡ, ಡಾ.ಉಮೇಶ್‌ ಇದ್ದರು.