News

Gkvk ಬೆಂಗಳೂರು ಕೃಷಿ ಮೇಳ 2023: ಈ ಬಾರಿಯ ವಿಶೇಷತೆ ಇಲ್ಲಿದೆ!

17 November, 2023 12:25 PM IST By: Hitesh
ಕೃಷಿ ಮೇಳ 2023ರ ವಿಶೇಷತೆ ಇಲ್ಲಿದೆ...

ಬೆಂಗಳೂರಿನ (Gkvk) ಜಿಕೆವಿಕೆಯಲ್ಲಿ ನಡೆಯುತ್ತಿರುವ ಕೃಷಿ ಮೇಳ ಹಲವು ವಿಶೇಷತೆಗಳಿಂದ ಕೂಡಿದೆ.

ಬೆಂಗಳೂರು ಕೃಷಿ ಮೇಳ (Krishi Mela) 2023 ಈ ಬಾರಿ ರೈತರಿಗೆ ವರದಾನ ಎಂದೇ ಹೇಳಬಹುದು.

ಮುಂಗಾರು ರೈತರ ಕೈಹಿಡಿಯದ ಹಿನ್ನೆಲೆಯಲ್ಲಿ ಈ ಬಾರಿ ರೈತರು ಸಂಕಷ್ಟದಲ್ಲಿ ಇದ್ದಾರೆ.

ಹೀಗಾಗಿ, ಇಂತಹ ಸಂದರ್ಭವನ್ನು ಹೇಗೆ ನಿರ್ವಹಿಸಬೇಕು ಉಳಿದ ರೈತರು ಏನಾದರೂ ಪರ್ಯಾಯ ಮಾಡುತ್ತಿದ್ದಾರೆಯೇ ಎಂದು ತಿಳಿದುಕೊಳ್ಳುವುದಕ್ಕೆ

ಈ ಬಾರಿಯ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳವು ಅತ್ಯಂತ

ಸಹಕಾರಿ ಹಾಗೂ ಉಪಯುಕ್ತವಾಗಿದೆ ಎಂದೇ ಹೇಳಬಹುದಾಗಿದೆ.  

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ (Bangalore Agricultural University) ದಲ್ಲಿ ನಡೆಯುತ್ತಿರುವ ಮೇಳದಲ್ಲಿ ಕರ್ನಾಟಕ

ರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕರ್ನಾಟಕ ರಾಜ್ಯ ಎಣ್ಣೆಕಾಳು ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬೀಜ

ಪ್ರಮಾಣನ ಸಂಸ್ಥೆ ಸೇರಿದಂತೆ ನೂರಾರು ಕಂಪನಿಗಳು ರೈತರಿಗೆ ಬೀಜೋತ್ಪಾದನೆ, ಸಂಸ್ಕರಣೆ, ಮಾರುಕಟ್ಟೆ ಹಾಗೂ ಮಾರಾಟ

ಸೇರಿದಂತೆ ಹಲವು ವಿಷಯಗಳ ಕುರಿತಾದ ಮಾಹಿತಿಯನ್ನು ನೀಡಲಿವೆ.  

Gkvk ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕೃಷಿ ಮೇಳ 2023 ಇಂದಿನಿಂದ

ಈ ಬಾರಿಯ ಕೃಷಿ ಮೇಳದ ವಿಶೇಷತೆಗಳೇನು ?

ಕೃಷಿ ವಿಶ್ವವಿದ್ಯಾಲಯ (Agriculture University Bangalore Agriculture Fair -2023) ಬೆಂಗಳೂರು ಕೃಷಿ ಮೇಳ -2023ರ ವಿಶೇಷತೆಗಳು ಈ ರೀತಿ ಇವೆ.  

* ರೈತರಿಗೆ ಕೃಷಿಯ ನೂತನ ತಂತ್ರಜ್ಞಾನದ ಮಾಹಿತಿ

* ಜಲಾನಯನ ನಿರ್ವಹಣೆ ಬಗ್ಗೆ ಅಗತ್ಯ ಮಾಹಿತಿ

* ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಮಹತ್ವದ ಬಗ್ಗೆ ಮಾಹಿತಿ

* ಪಶುಸಂಗೋಪನೆ, ಹೈನುಗಾರಿಕೆ, ಕುರಿ, ಕೋಳಿ ಹಾಗೂ ಮೀನು ಸಾಕಾಣಿಕೆ ಕುರಿತು ವಿಸ್ತೃತವಾದ ತಿಳಿವಳಿಕೆ  

* ಮಳೆ, ಮೇಲ್ಛಾವಣಿ ನೀರು ಕೊಯ್ಲು ಸಂಬಂಧ ಪ್ರತ್ಯಾಕ್ಷಿಕೆ ಮತ್ತು ಮಾಹಿತಿ

* ಕೃಷಿಯಲ್ಲಿ ಡ್ರೋನ್ ಬಳಕೆ, ನೂತನ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ

* ಹನಿ, ತುಂತುರು ಮತ್ತು ಸಾವಯವ ಕೃಷಿ ಮಾಹಿತಿ  

* ಸುಧಾರಿತ ಕೃಷಿ ಯಂತ್ರೋಪಕರಣಗಳು ಹಾಗೂ ಸಮಗ್ರ ಬೇಸಾಯ ಪದ್ಧತಿಗಳ ಕುರಿತು ಪ್ರಾತ್ಯಕ್ಷಿಕೆಗಳು ಇರಲಿವೆ

ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ತಿಳಿಸಿದೆ.

ಕೃಷಿ ಮೇಳ 2023: ರೈತರಿಗೆ ಬೀಜಸಂತೆ, ಬೀಜೋತ್ಪಾದನೆ ಮಾಹಿತಿ!

ವಿವಿಧ ಜೀಜಗಳ ಮಾರಾಟ!

ಈ ಬಾರಿ ಕೃಷಿ ಮೇಳದಲ್ಲಿ ರೈತರಿಗೆ ಬೀಜೋತ್ಪಾದನೆಯ ಕುರಿತು ಸಮಗ್ರವಾದ ಮಾಹಿತಿ ಸಿಗಲಿದೆ.

ಅಲ್ಲದೇ ರಾಗಿ, ನವಣೆ, ಬರಗು, ಹಾರಕ ಹಾಗೂ ಸಾಮೆ ಸೇರಿದಂತೆ ವಿವಿಧ ಸಿರಿಧಾನ್ಯಗಳು.

ಮೇವಿನ ಬೆಳೆ, ದ್ವಿದಳ ಧಾನ್ಯ, ಎಣ್ಣೆಕಾಳು, ಹಣ್ಣು ಹಾಗೂ ತರಕಾರಿ ಬೀಜಗಳ ಮಾರಾಟ ಸಹ ಈ ಬಾರಿ ಕೃಷಿ ಮೇಳದಲ್ಲಿ ಮಾರಾಟವಾಗುತ್ತಿದೆ.   

ಈ ಬಾರಿ ಕೃಷಿ ಮೇಳದಲ್ಲಿ ಯುವ ರೈತರಿಗೂ ಪ್ರೋತ್ಸಾಹ ನೀಡಲು ನಿರ್ಧರಿಸಲಾಗಿದೆ.

ನೈಋತ್ಯ ಮುಂಗಾರು ಮಳೆ ಈ ಬಾರಿ ರೈತರ ಕೈಹಿಡಿದಿಲ್ಲ. ಹೀಗಾಗಿ, ಹಿಂಗಾರು ಹಂಗಾಮಿನಲ್ಲಿ ಬೆಳೆಯುವ

ಬೆಳೆಗಳಾದ ರಾಗಿ, ಭತ್ತ, ಮೆಕ್ಕೆಜೋಳ, ಕಡಲೆ, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳ

ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲು ವಿ.ವಿ ನಿರ್ಧರಿಸಿದೆ.

ಅಲ್ಲದೇ ಬೀಜೋತ್ಪಾದನೆಯ ಕುರಿತು ರೈತರಿಗೆ ಸಮಗ್ರ ಮಾಹಿತಿಯನ್ನು ನೀಡುವುದಕ್ಕೆ

ಬೆಂಗಳೂರು ಕೃಷಿ ವಿ.ವಿಯು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದೆ. 

ಇದೇ ಸಂದರ್ಭದಲ್ಲಿ ಈಗಾಗಲೇ ಬೀಜೋತ್ಪಾದನೆ ಕೈಗೊಂಡಿರುವ ರೈತರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

ಅಲ್ಲದೇ ಯಶಸ್ವಿ ರೈತರು ತಮ್ಮ ಅನುಭವವನ್ನು ಬೆಂಗಳೂರು (Agricultural University)ಕೃಷಿ ವಿವಿ

ಕೃಷಿ ಸಂಶೋಧನಾ ಕೇಂದ್ರದಿಂದ ಆಯೋಜಿಸಿರುವ ತಜ್ಞರ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.      

ಕೃಷಿ ಮೇಳದ ಸಂಪೂರ್ಣ (Complete Details of Agriculture Mela) ವಿವರ…

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ (GKVK) ಕೃಷಿ ಮೇಳ ನಡೆಯಲಿದೆ. 

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ  ಕೃಷಿ ಮೇಳ-2023 ಉದ್ಘಾಟನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭವನ್ನು

ಶುಕ್ರವಾರ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ.

ಕೃಷಿ ಮೇಳಕ್ಕೆ ಬರುವವರಿಗೆ ಪ್ರವೇಶ ಉಚಿತವಾಗಿದೆ. ಜಿಕೆವಿಕೆ (GKVK)ಯ ಮಹಾದ್ವಾರದಿಂದ ಕೃಷಿ ಮೇಳದ ಸಭಾಂಗಣಕ್ಕೆ

ತಲುಪಲು ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಿಯಾಯಿತಿ ದರದಲ್ಲಿ ಊಟದ ವ್ಯವಸ್ಥೆ ಸಹ ಇರಲಿದೆ.

ಅಲ್ಲದೇ ವಾಹನ ಸವಾರರಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇನ್ನು ಕೃಷಿ ಮೇಳದಲ್ಲಿ (Revenue Minister at Agricultural Fair) ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧ್ಯಕ್ಷತೆ

ವಹಿಸಲಿದ್ದು, ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭಾಗವಹಿಸಲಿದ್ದಾರೆ. 

Bangalore Krishi Mela: ಬೆಂಗಳೂರಿನ ಕೃಷಿ ಮೇಳದಲ್ಲಿ 1.6 ಲಕ್ಷ ಜನರು ಭಾಗಿ!

ಐದು ಹೊಸ ತಳಿಗಳ ಪರಿಚಯ!

ಕೃಷಿ ವಿಶ್ವವಿದ್ಯಾಲಯದ ಆಶ್ರಯದಲ್ಲಿ (Asylum of Agricultural University) ನವೆಂಬರ್‌ 17ರಿಂದ 20ರವರೆಗೆ

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ 'ಆಹಾರ, ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯಗಳು' ಎಂಬ ಘೋಷವಾಕ್ಯದಡಿ ಕೃಷಿ ಮೇಳ ಆಯೋಜಿಸಲಾಗಿದೆ.

ಕೃಷಿ ವಿವಿ ಸಂಶೋಧಕರು ಅಭಿವೃದ್ಧಿಪಡಿಸಿರುವ ಐದು ಹೊಸ ತಳಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಲಿದ್ದಾರೆ.