ಜನನ, ಮರಣ ಪ್ರಮಾಣ ಪತ್ರ ಪಡೆಯಲು ಕಚೇರಿಗೆ ಸುತ್ತಾಡಿ ಸುಸ್ತಾಗಿದ್ದೀರಾ.... ಏನಪಾ ಸರತಿಯಲ್ಲಿ ಗಂಟೆಗಟ್ಟಲೆ ನಿಲ್ಲಬೇಕೆಂದುಕೊಂಡಿದ್ದರೆ ಈಗ ಚಿಂತೆ ಮಾಡುವ ಅವಶ್ಯಕತೆಯಿಲ್ಲ. ಮೊಬೈಲ್ ಇದ್ದರೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ.... ಇಲ್ಲಿದೆ ಸಂಪೂರ್ಣ ಮಾಹಿತಿ.
ಮುಂಚೆ ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಪಡೆಯಲು ತಾಲೂಕು ಮತ್ತು ಪಟ್ಟಣ ಪ್ರದೇಶಗಳಿಗೆ ಹೋಗಬೇಕಾಗಿತ್ತು. ಈಗ ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಜನನ ಮರಣ ಪ್ರಮಾಣ ಪತ್ರಗಳನ್ ಪಡೆದುಕೊಳ್ಳಬಹುದು.
ನಿಮ್ಮ ಮೊಬೈಲಿನಲ್ಲಿ ಗೂಗಲ್ನಲ್ಲಿ e janma ಎಂದು ಟೈಪ್ ಮಾಡಿದಾಗ ಇಜನ್ಮ ಕರ್ನಾಟಕ ಲಿಂಕ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ Birth/Death verification ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮಗೆ ಬರ್ತ್ ಸರ್ಟಿಪಿಕೇಟ್ ಬೇಕೋ ಅಥವಾ ಡೆತ್ ಸರ್ಟಿಫಿಕೇಟ್ ಬೇಕೋ ಎಂಬುದನ್ನು ಗುರುತಿಸಬೇಕು. ಒಂದು ವೇಳೆ ಬರ್ತ್ ಸರ್ಟಿಫಿಕೇಟ್ ಬೇಕಾದರೆ ಬರ್ತ್ ಸರ್ಟಿಫಿಕೇಟ್ ಮೇಲೆ ಕ್ಲಿಕ್ ಮಾಡಿ ರೆಜಿಸ್ಟ್ರೇಷನ್ ನಂಬರ್ ಮತ್ತು ಹುಟ್ಟಿದ ದಿನಾಂಕ ಹಾಕಿ ಕ್ಯಾಪ್ಚಾಕೋಡ್ ನೋಡಿ ಅದೇ ರೀತಿ ಟೈಪ್ ಮಾಡಬೇಕು. ಆಗ ನಿಮ್ಮ ಬರ್ತ್ ಸರ್ಟಿಫಿಕೇಟ್ ಓಪನ್ ಆಗುತ್ತದೆ. ಇನ್ಮುಂದೆ ಇ-ಜನ್ಮ ಪೋರ್ಟಲ್ ಆನ್‌ಲೈನ್‌ನಲ್ಲಿ ಜನರೇಟ್ ಆದ ನಂಬರ್ ಪಡೆದು, ಎಲ್ಲಿ ಬೇಕಾದರೂ ಸರ್ಟೀಫಿಕೇಟ್ ತೆಗೆದುಕೊಳ್ಳಬಹುದಾಗಿದೆ.
ನೋಂದಣಿ ಹೇಗೆ..?
ಇ-ಜನ್ಮ ಪೋರ್ಟ್‌ಲ್‌ನಲ್ಲಿ ಆಧಾರ ಕಾರ್ಡ್ ರೀತಿ ಒಬ್ಬರಿಗೆ ಒಂದು ನಂಬರ್ ಮಾತ್ರ ನೀಡಲಾಗಿದ್ದು, ಮಗುವೊಂದು ಹುಟ್ಟಿದ ತಕ್ಷಣ ಆಸ್ಪತ್ರೆಯಿಂದ ನೀಡಲಾಗುವ ದಾಖಲಾತಿಯನ್ನು ಸ್ಥಳೀಯ ಸಂಸ್ಥೆಗಳಲ್ಲಿ ನೀಡಬೇಕು. ಅಲ್ಲಿನ ಅಧಿಕಾರಿಗಳು ಇ-ಜನ್ಮ ಪೋರ್ಟಲ್‌ನಲ್ಲಿ ತಂದೆ-ತಾಯಿ ಹೆಸರು, ಆಧಾರ, ಪಾನ್ ಕಾರ್ಡ್ ಸೇರಿ ಯಾವುದಾದರೊಂದು ದಾಖಲಾತಿ ನೀಡಿ ಅಪ್ಲೋಡ್ ಮಾಡುತ್ತಾರೆ. ನಂತರ ಸರ್ಟಿಫಿಕೇಟ್‌ನೊಂದಿಗೆ ನಂಬರ್‌ವೊಂದು ಜನರೆಟ್ ಆಗಲಿದ್ದು, ಈ ನಂಬರ್ ಪಡೆದು ಎಲ್ಲಿ ಬೇಕಾದರೂ ಮಾಹಿತಿ ತೆಗೆದುಕೊಳ್ಳಬಹುದು.
ಜನನ, ಮರಣ ಪ್ರಮಾಣ ಪತ್ರಕ್ಕಾಗಿ ಈ ಜನ್ಮ ಎಂಬ ಆ್ಯಪ್ ಅನುಷ್ಠಾನಗೊಳಿಸಿ ಆನ್ ಲೈನ್ ಮೂಲಕ ಪ್ರಮಾಣ ಪತ್ರ ನೋಂದಣಿ ಕ್ರಿಯೆ ಆರಂಭಿಸಲಾಗಿದೆ. ಇ-ಜನ್ಮ ಪೋರ್ಟ್‌ಲ್‌ನಲ್ಲಿ ದಾಖಲಾಗುವ ನಂಬರ್ ಒಮ್ಮೆ ಮಾತ್ರ ಜನರೇಟ್ ಆಗಲಿದ್ದು, ಮರಣದ ನಂತರ ಅದರ ತಿದ್ದುಪಡಿ ಸಾಧ್ಯವಾಗುವುದಿಲ್ಲ. ಅಲ್ಲದೇ ಡಿಜಿಟಲ್ ಸಹಿ ಕೂಡ ಇದರಲ್ಲಿ ಅಪ್ಲೋಡ್ ಆಗಲಿದೆ.
ಮರಣಗಳ ನೋಂದಣಿ ಏಕೆ?
ಮರಣ ಪ್ರಮಾಣ ಪತ್ರ ಆಸ್ತಿ ಹಕ್ಕು ಹಾಗೂ, ಪಿತ್ರಾರ್ಜಿತ ಆಸ್ತಿ ಮೇಲಣ ವಾರಸುದಾರಿಕೆ ನಿರ್ಧರಿಸಲು ಸಹಾಯವಾಗುತ್ತದೆ. ವಿಮಾ ಮೊತ್ತ ಪಡೆಯಲು ಹಾಗೂ ಕೌಟುಂಬಿಕ ಪಿಂಚಣಿ ಪಡೆಯಲು ಸಹಕಾರಿಯಾಗಲಿದೆ.
ಒಂದು ನಿರ್ದಿಷ್ಟ ಸ್ಥಳದಲ್ಲಿ, ಸಂಭವಿಸುವ ಸಾವಿನ ಬಗ್ಗೆ ಕಾನೂನು ಬದ್ದ ದಾಖಲೆಯಾಗುತ್ತದೆ.ಸಾಮಾಜಿಕ-ಆರ್ಥಿಕ ಯೋಜನೆ ರೂಪಿಸಲು ಅಗತ್ಯವಾದ, ಜನಸಂಖ್ಯಾ ದಾಖಲೆಯಾಗಿ ಇದನ್ನು ಬಳಸಲಾಗುತ್ತದೆ. ಜೊತೆಗೆ ಜನಂಖ್ಯಾ ನಿಯಂತ್ರಣ ಯೋಜನೆ ಹಾಗೂ ಆರೋಗ್ಯ ಯೋಜನೆ ಜಾರಿಗೆ ನೆರವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ 1800-425-6578 ಗೆ ಸಂಪರ್ಕಿಸಬಹುದು.