News

ಎಲ್‍ಪಿಜಿ ಸಿಲಿಂಡರ್ ಬೆಲೆ 160 ರೂಪಾಯಿ ಇಳಿಕೆ ಹೊಸ ದರ ಇಂದಿನಿಂದ ಜಾರಿ

01 May, 2020 8:59 PM IST By:

ತೈಲ ಮಾರುಕಟ್ಟೆ ಕಂಪನಿಗಳು (ಎಚ್‍ಪಿಸಿಎಲ್, ಬಿಪಿಸಿಎಲ್, ಐಒಸಿ) ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳನ್ನು ಗಮನಾರ್ಹವಾಗಿ ಕಡಿತಗೊಳಿಸಿವೆ.

ಲಾಕ್‍ಡೌನ್‍ನಿಂದಾಗಿ ಹತಾಶಗೊಂಡ ಗ್ರಾಹಕರಿಗೆ ಅಲ್ಪ ಸಿಹಿ ಸುದ್ದಿ ಸಿಕ್ಕಿದೆ. ಇಂದಿನಿಂದಲೇ ಎಲ್‍ಪಿಜಿ ಸಿಲೆಂಡರ್ ದರ 160 ರುಪಾಯಿ ಕಡಿಮೆಯಾಗಲಿದೆ. ಲಾಕ್ಡೌನ್ ಮಧ್ಯೆ ಒಳ್ಳೆಯ ಸುದ್ದಿಗಳೊಂದಿಗೆ ಮೇ ತಿಂಗಳು ಪ್ರಾರಂಭವಾಗಿದ್ದು, ಎಲ್‍ಪಿಜಿ ಸಿಲಿಂಡರ್‍ಗಳು ಅಗ್ಗವಾಗಿವೆ.

ದೆಹಲಿಯಲ್ಲಿ, 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ ಅನ್ನು 162.5 ರೂ.ಗೆ ಇಳಿಸಲಾಗಿದೆ. 14.2 ಕೆಜಿ ಸಿಲೆಂಡರ್ 744 ರ ಬದಲು 581.50 ರುಪಾಯಿಗೆ ಸಿಗಲಿದೆ. ಅದರೀ ರೀತಿ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಬೆಲೆ ಇಳಿಸಲು ತೈಲ ಕಂಪನನಿಗಳು ನಿರ್ಧರಿಸಿವೆ.

ಮುಂಬೈನಲ್ಲಿ ಎಲ್‍ಪಿಜಿ ಸಿಲಿಂಡರ್‍ಗೆ 579 ವೆಚ್ಚವಾಗಲಿದ್ದು, ಈ ಮೊದಲು 714.50 ನೀಡಬೇಕಿತ್ತು. ಬೆಲೆ ಏರುಗತಿಯಲ್ಲೇ ಸಾಗಿತ್ತು. ಆದರೆ ಕಳೆದ ಎರಡು ತಿಂಗಳಿನಿಂದ ಬೆಲೆ ಇಳಿಸಲಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಬೆಲೆ ಪರಿಷ್ಕರಿಸಲಾಗುತ್ತದೆ. ಕೋಲ್ಕತ್ತಾದ ಬೆಲೆಯನ್ನು 774.50 ರೂ.ನಿಂದ 584.50 ರೂ.ಗೆ ಇಳಿಸಲಾಗಿದೆ, ಮತ್ತು ಚೆನ್ನೈನಲ್ಲಿ 761.50 ರಿಂದ 569.50 ರೂ.ಗೆ ಇಳಿಸಲಾಗಿದೆ.

19 ಕೆಜಿ ಎಲ್ಪಿಜಿ ಸಿಲಿಂಡರ್ ಬೆಲೆ ಕೂಡ ಇಳಿಕೆ:

19 ಕೆಜಿ ಎಲ್ಪಿಜಿ ಎಲ್‍ಪಿಜಿ ಸಿಲಿಂಡರ್‍ನ ಬೆಲೆಯನ್ನೂ ಸಹ ಕಡಿತಗೊಳಿಸಲಾಗಿದೆ. ಹೊಸ ದರಗಳು ಇಂದಿನಿಂದ ಜಾರಿಯಾಗಲಿದ್ದು 19 ಕೆಜಿ ಎಲ್ಪಿಜಿ ಸಿಲಿಂಡರ್ ನವದೆಹಲಿಯಲ್ಲಿ 256 ರೂ. ಇಳಿಕೆ ಕಂಡಿದ್ದು ಈಗ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1285.50 ರೂ.ಗಳಿಂದ 1029.50 ರೂ.ಗೆ ಇಳಿಸಲಾಗಿದೆ. ಇದರ ಬೆಲೆ ಕೋಲ್ಕತ್ತಾದಲ್ಲಿ 1086.00 ರೂ., ಮುಂಬೈನಲ್ಲಿ 978.00 ಮತ್ತು ಚೆನ್ನೈನಲ್ಲಿ 1144.50 ರೂ. ಆಗಿದೆ.

1.5 ಮಿಲಿಯನ್ ಗ್ರಾಹಕರಿಗೆ ಪ್ರಯೋಜನ:

ಎಲ್ಪಿಜಿ ಬೆಲೆಯಲ್ಲಿನ ಕಡಿತದಿಂದ ದೇಶದ 1.5 ಕೋಟಿ ಗ್ರಾಹಕರು ಪ್ರಯೋಜನ ಪಡೆಯಲಿದ್ದಾರೆ. ಎಲ್ಪಿಜಿಯ ಬಳಕೆ ಹೆಚ್ಚಾಗಲು ಕಾರಣವೆಂದರೆ ನಿಗದಿತ ಮಿತಿಯ ನಂತರ ಅನೇಕ ಕುಟುಂಬಗಳು ಸಿಲಿಂಡರ್‍ಗಳಿಗೆ ಸಬ್ಸಿಡಿಯ ಲಾಭವನ್ನು ಪಡೆಯುವುದಿಲ್ಲ. ಈ ಕಡಿತವು ಆ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ.