News

ದಿಢೀರ್‌ನೆ ಬೆಳ್ಳುಳ್ಳಿ ಬೆಲೆ ಡಬಲ್‌! ಇದೇ ಕಾರಣ

12 December, 2023 10:28 AM IST By: Maltesh
Garlic Price

ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಮಾರುಕಟ್ಟೆಯಲ್ಲಿ ದಿನ ನಿತ್ಯ ಬಳಕೆಯ ಪದಾರ್ಥಗಳ ಬೆಲೆಗಳು ಏರುತ್ತಲೆ ಇವೆ. ಮೊದಲು ಈರುಳ್ಳಿ  ಬೆಲೆಯ ಏರಿಕೆಯ ಹೊಡೆತದಿಂದ ಗ್ರಾಹಕರು ರಿಲ್ಯಾಕ್ಸ್‌ ಆಗುವ ಹೊತ್ತಿಗೆಯೇ ಟೊಮೆಟೋ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಹಾಕಿತ್ತು. ಸದ್ಯ ಇದೀಗ ಗ್ರಾಹಕರಿಗೆ ಬೆಳ್ಳುಳ್ಳಿಯ ಬೆಲೆ ಏರಿಕೆಯ ಹೊಡೆತ ಬಿದ್ದಿದೆ.

ರಾಜ್ಯದಲ್ಲಿ ಬೆಳ್ಳುಳ್ಳಿ ದರ ಎಷ್ಟಿದೆ..?

ಕಳೆದ ಕೆಲವು ದಿನಗಳಿಂದ ಬೆಳ್ಳುಳ್ಳಿಯ ಬೆಲೆಯಲ್ಲಿ ಗಣನೀಯವಾದ ಏರಿಕೆ ಕಂಡು ಬರುತ್ತಿದೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹಾಗೂ ದೇಶದ ಪ್ರಮುಖ ಕೃಷಿ ಮಾರುಕಟ್ಟೆಯ ಮೂಲಗಳಿಂದ ತಿಳಿದು ಬಂದಿದೆ. ರಾಜ್ಯದ ಕೆಲವು ಪ್ರಮುಖ ಮಾರುಕಟ್ಟೆಗಳಲ್ಲಿ ಬೆಳ್ಳುಳ್ಳಿಯ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ  ಚಿಲ್ಲರೆ ಬೆಲೆ ಕೆಜಿಗೆ 20 ರೂ.ಗೆ ತಲುಪಿದೆ. ಆದರೆ ಉಳಿದಂತೆ  ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಕೆಜಿಗೆ 140-150 ರೂ. ಇದೆ. ಇನ್ನು A ಒನ್‌ ಬೆಳ್ಳುಳ್ಳಿಯು ಸಗಟು ಬೆಲೆ ಕೆಜಿಗೆ 220-250 ರೂ.ಗೆ ತಲುಪಿದೆ.

ಕೆಲವೇ ವಾರಗಳಲ್ಲಿ ಬೆಳ್ಳುಳ್ಳು ರೇಟ್‌ ಒನ್‌ ಟು ಡಬಲ್‌!

ಸದ್ಯ ರಾಜ್ಯದಲ್ಲಿ ಬರಗಾಲದ ಛಾಯೆ ಆವರಿಸಿಕೊಂಡಿದೆ ಇದರ ಪರಿಣಾಮ ಕೆಲವು ಬೆಳೆಗಳ ಮೇಲೆ ಪರಿಣಾಮ ಬೀರಿರುವದರಿಂದ ಇಳುವರಿ ಕುಂಠಿತಗೊಂಡ ಪೂರೈಕೆ ಕಡಿಮೆಯಾದ ಕಾರಣ ಬೆಲೆ ಏರಿಕೆಯಾಗುವುದು ಸಹಜ ಪ್ರಕ್ರಿಯೇ. ಆದರೆ ಬೆಳ್ಳುಳ್ಳಿಯ ವಿಷಯದಲ್ಲಿ ಪ್ರತಿವರ್ಷ ಡಿಸೆಂಬರ್‌ ಅಂತ್ಯಕ್ಕೆ ಕೆಲವು ಹವಾಮಾನ ಹಾಗೂ ಋತುಮಾನದ ಕಾರಣಗಳಿಂದ, ಪೂರೈಕೆಯಲ್ಲಿ ಕಡಿಮೆಯಾಗಿ ಬೆಲೆಯಲ್ಲಿ ಏರಿಳಿತ ಕಾಣುತಿತ್ತು, ಆದರೆ ಈ ವರ್ಷ ಡಿಸೆಂಬರ್‌ ಆಗಮನಕ್ಕೂ ಮುನ್ನವೆ ಬೆಳ್ಳುಳ್ಳಿಯ ದರದಲ್ಲಿ ಏರಿಕೆ ಕಂಡು ಬಂದಿದೆ. ಪರಿಣಾಮ ಕೇವಲ ಐದೇ ಐದು ವಾರದಲ್ಲಿ ಬೆಳ್ಳುಳ್ಳಿ ದರ ದುಪ್ಪಟ್ಟಾಗಿದೆ.

ದೇಶಾದ್ಯಂತ ಕೃಷಿ ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಅಸಮರ್ಪಕ ಪೂರೈಕೆಯೇ ಈ ಬೆಲೆ ಏರಿಕೆಗೆ ಕಾರಣವೆಂದು ಮಾರುಕಟ್ಟೆಯ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ದೇಶದ ಉತ್ತರ ಭಾಗದ ರಾಜ್ಯಗಳಾದ ಮಧ್ಯ ಪ್ರದೇಶ, ರಾಜಸ್ಥಾನದಲ್ಲಿ ಅತಿ ಹೆಚ್ಚು ಬೆಳ್ಳುಳ್ಳಿಯನ್ನು ಬೆಳೆಯಲಾಗುತ್ತದೆ. ಆದರೆ ಈ ಬಾರಿ ಈ ರಾಜ್ಯಗಳಲ್ಲಿ ಸಮರ್ಪಕ ಮಳೆಯಾಗದ ಕಾರಣ ಇಳುವರಿಯಲ್ಲಿ ಕುಂಠಿತಗೊಂಡಿದೆ. ಹೀಗಾಗಿ ಬೆಳ್ಳುಳ್ಳಿ ಪೂರೈಕೆಯಲ್ಲಿ ವ್ಯತ್ಯಾಸವಾದ ಪರಿಣಾಮ ದರದಲ್ಲಿ ಏರಿಕೆಯಾಗಿದೆ.