News

ವಲಸೆ ಕಾರ್ಮಿಕರಿಗೆ 50,000 ಕೋಟಿ ರೂಪಾಯಿ ಗಿಫ್ಟ್‌:ಗರೀಬ್ ಕಲ್ಯಾಣ ಅಭಿಯಾನಕ್ಕೆ ಚಾಲನೆ

20 June, 2020 4:13 PM IST By:

ಕೊರೊನಾ ವೈರಸ್ ಮತ್ತು ಲಾಕ್‌ಡೌನ್ ಕಾರಣದಿಂದಾಗಿ ತಮ್ಮ ತವರು ರಾಜ್ಯಗಳಿಗೆ ಮತ್ತು ತಮ್ಮ ಗ್ರಾಮಗಳಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರ ಬಂಪರ್ ಗಿಫ್ಟ್ ಘೋಷಿಸಿದೆ

ನಗರಪ್ರದೇಶಗಳಿಗೆ ವಲಸೆ ಹೋಗವ ಬದಲು ಅವರು ಇರುವ ಹಳ್ಳಿಗಳಲ್ಲೇ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಕೆಲಸ ಕೊಡುವ ಗರೀಬ್ ಕಲ್ಯಾಣ ರೋಜ್‌ಗಾರ್ ಅಭಿಯಾನಕ್ಕೆ  ಪ್ರಧಾನಿ ನರೇಂದ್ರ ಮೋದಿ ಶನಿವಾರ ಚಾಲನೆ ನೀಡಿದರು.

ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದ ಖಗೇರಿಯಾ ಜಿಲ್ಲೆಯ ತೆಲಿಹಾರ ಗ್ರಾಮದಿಂದ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಮೊದಲ ಹಂತದಲ್ಲಿ 6 ರಾಜ್ಯಗಳ 25 ಸಾವಿರ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ. ಈ ಯೋಜನೆಯನ್ನು ಪ್ರಾರಂಭಿಸುವ ಕಲ್ಪನೆಯನ್ನು ಕಾರ್ಮಿಕರೇ ನೀಡಿದ್ದಾರೆ ಎಂದರು.

116 ಜಿಲ್ಲೆಗಳಲ್ಲಿ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಅನುಕೂಲ

116 ಜಿಲ್ಲೆಗಳಲ್ಲಿ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಅನುಕೂಲ ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್, ರಾಜಸ್ಥಾನ, ಒಡಿಶಾ ರಾಜ್ಯಗಳ 116 ಜಿಲ್ಲೆಗಳಲ್ಲಿ ಗರೀಬ್ ಕಲ್ಯಾಣ ರೋಜಗಾರ್ ಯೋಜನೆ(GKRY) ಜಾರಿಗೆ ತರಲಾಗಿದೆ.

ಇದರಿಂದ 25,000ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಅವರವರ ಹಳ್ಳಿಗಳಲ್ಲಿ ಉದ್ಯೋಗ ಸಿಗಲಿದೆ. ಈ ಯೋಜನೆಗಾಗಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳನ್ನು ಬಳಕೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಯೋಜನೆ ಜಾರಿಯಲ್ಲಿರುವ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ಕೃಷಿ ವಿಜ್ಞಾನ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ ಎಂದೂ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

125 ದಿನಗಳಲ್ಲಿ 25,250 ರೂಪಾಯಿ ಗಳಿಕೆ

ಗರೀಬ್ ಕಲ್ಯಾಣ್ ರೋಜ್ ಗಾರ್ ಅಭಿಯಾನದಡಿ 125 ದಿನಗಳವರೆಗೆ ನಿತ್ಯ ರೂ.202 ಸಂಪಾದಿಸಬಹುದು. ಈ ಯೋಜನೆಯ ಅಡಿ ಒಟ್ಟು 125 ದಿನಗಳ ಕೆಲಸ ನಡೆಯಲಿದೆ. ಇದರ ಅಡಿ ನಿತ್ಯ ಮನರೇಗಾ ಯೋಜನೆಯನ್ನು ಆಧಾರವಾಗಿಟ್ಟುಕೊಂಡು ನಿತ್ಯದ ವೇತನ ಪಾವತಿಸಲಾಗುವುದು. ಹೀಗಾಗಿ ನಿತ್ಯ ಓರ್ವ ಕಾರ್ಮಿಕರಿಗೆ ರೂ.202 ವೇತನ ಸಿಗಲಿದೆ. ಯಾವುದೇ ಓರ್ವ ಕಾರ್ಮಿಕ 125 ದಿನಗಳ ಕೆಲಸ ಪೂರ್ಣಗೊಳಿಸಿದರೆ, ಆತ ಈ ಯೋಜನೆಯ ಅಡಿ ಒಟ್ಟು ನಾಲ್ಕು ತಿಂಗಳ ಅವಧಿಯಲ್ಲಿ 25,250 ರೂಪಾಯಿ ಗಳಿಸಬಹುದು.