News

ನೆಲನೆಲ್ಲಿಯಲ್ಲಿ ಅಡಗಿದೆ ಔಷಧೀಯ ಗುಣ... ಇಲ್ಲಿದೆ ಮಾಹಿತಿ

06 May, 2021 4:04 PM IST By:

ನೆಲ್ಲಿಕಾಯಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ, ಆಧರೆ ಹೆಚ್ಚಿನವರಿಗೆ ನೆಲನೆಲ್ಲಿಯ ಬಗ್ಗೆ ಗೊತ್ತಿಲ್ಲ. ನೆಲನೆಲ್ಲಿ ಅಥವಾ ಕೀಳುನೆಲ್ಲಿ ಎಂದು ಕರೆಯಲ್ಪಡುವ ಈ ಗಿಡ, ಹಳ್ಳಿಗಳ ಕಡೆ ಗದ್ದೆ ತೋಟಗಳಲ್ಲಿ ಕಳೆಯಂತೆ ಬೆಳೆಯುತ್ತದೆ. ಇದೊಂದು ಔಷಧೀಯ ಗುಣಹೊಂದಿದೆ.

ನೆಲನೆಲ್ಲಿ ಎಂಬ ಸಸ್ಯ ಯುಫೋರ್ ಪಿರಿಯಸ್ಸಿಯೇ ಕುಟುಂಬಕ್ಕೆ ಸೇರಿದೆ. ಈ ಸಸ್ಯದ ವೈಜ್ಞಾನಿಕ ಹೆಸರು ಪೈಲೆಂತಸ ಅಮರಸ್. ಇದು ಗಾತ್ರದಲ್ಲಿ ಚಿಕ್ಕಗಿಡವಾಗಿದ್ದರೂ ಔಷಧೀಯ ಗುಣಗಳನ್ನು ತುಂಬಿಕೊಂಡಿದೆ. ನಮ ದೇಶದಲ್ಲಿ ಎಲ್ಲೆಡೆ ಈ ಸಸ್ಯವನ್ನು ನಾವು ಕಾಣಬಹುದು, ಅದರಲ್ಲೂ ನಮ್ಮ ದೇಶದಲ್ಲಿ ಕಾಣಸಿಗುವ ನೆಲನೆಲ್ಲಿಯನ್ನು ಕಿರುನೆಲ್ಲಿಯೆಂದೂ ಇನ್ನೊಂದು ಹೆಸರಿನಿಂದಲೂ ಕರೆಯುತ್ತಾರೆ. ಮಳೆಗಾಳದ ಸಮಯದಲ್ಲಿ ನೆಲನೆಲ್ಲಿ ಹೆಚ್ಚಾಗಿ ಬೆಳೆಯುವುದು. ಹಾಗೂ ಸಸ್ಯದ ಅಧಿಕ ವೃದ್ಧಿ ಇದೇ ಕಾಲದಲ್ಲಿ  ಆಗುವುದು.

ಪೈಲೆಂತಸ ಅಮರಸ್ ಬೆಳೆಯಲು ಆರಂಭವಾಗಿ ಅದರ 5 ರಿಂದ 8 ತಿಂಗಳಿನಲ್ಲಿ ತನ್ನ ಔಷಧಿ ಗುಣಗಳನ್ನು ವೃದ್ಧಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಹಂತದ ನೆಲನೆಲ್ಲಿ  ಮಾನವನ ರೋಗಗಳಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ನೆಲನೆಲ್ಲಿಯ ಎಲೆಗಳು ಚಿಕ್ಕದಾಗಿರುತ್ತವೆ. ಇದರ ಕೆಲ ಭೌತಿಕ ಗುಣಗಳು ನೆಲ್ಲಿಕಾಯಿಯನ್ನು ಹೋಲುವುದರಿಂದ ಇದಕ್ಕೆ ನೆಲನೆಲ್ಲಿ ಗಿಡ ಎಂಬ ಹೆಸರಿನಿಂದ ಕರೆಯಲಾಗುವುದು. ಇದು ಏಕವಾರ್ಷಿಕ ಸಸ್ಯ, ಸುಮಾರು ಒಂದು ಅಡಿ ಎತ್ತರ ಇದು ಬೆಳೆಯುತ್ತದೆ. ನೆಲನೆಲ್ಲಿ ಕೆಂಪು ಮಿಶ್ರಿತ ಹಸಿರು ಬಣ್ಣದಿಂದ ಕೂಡಿರುತ್ತದೆ. ಹಸಿರು ಬಣ್ಣದ ಚಿಕ್ಕ-ಚಿಕ್ತ ಎಲೆಗಳು ಕಾಂಡಕ್ಕೆ ಹೊಂದಿಕೊಂಡಿರುತ್ತವೆ .

ನೆಲನೆಲ್ಲಿ ಕಾಮಾಲೆಗೆ ಅತ್ಯುತ್ತಮ ರಾಮಬಾಣ, ವೈದ್ಯ ಪದ್ಧತಿಯ ಸಮೂಖದಲ್ಲಿ ನೆಲನೆಲ್ಲಿಯನ್ನು ಹಲವೂ ವರ್ಷಗಳಿಂದ ಔಷಧಿಯ ರೂಪದಲ್ಲಿ ಬಳಕೆಯಾಗುತ್ತಿದೆ. ಬೇರೇ-ಬೇರೇ ವೈದ್ಯ ಪದ್ಧತಿಯಲ್ಲಿ ಗಾಯ, ಕಜ್ಜಿ ಹಾಗೂ ಜಂತುಹುಳುಗಳಿಗೆ ಔಷಧಿಯಾಗಿ ನೆಲನೆಲ್ಲಿಯನ್ನು ಬಳಸಲಾಗುತ್ತದೆ. ನೆಲನೆಲ್ಲಿ ಗಿಡ ಉಪಯೋಗಿಸುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹದು.