News

ಒಂಬತ್ತನೇ ದಿನವೂ ತೈಲ ಬೆಲೆ ತುಟ್ಟಿ-ಗ್ರಾಹಕರ ಜೇಬಿಗೆ ಕತ್ತರಿ

15 June, 2020 5:06 PM IST By:

ದೇಶದಲ್ಲಿ ಸತತ 9ನೇ ದಿನವೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿದೆ. ಮೊದಲೇ ಲಾಕ್ಡೌನದಿಂದಾಗಿ ಸಂಕಷ್ಟದಲ್ಲಿರುವ ಜನತೆಗೆ ಈಗ ಸತತವಾಗಿ ಏರುತ್ತಿರುವ ತೈಲ ಬೆಲೆಯಿಂದಾಗಿ ಇನ್ನೂ ಕಷ್ಟದಲ್ಲಿ ಸಿಲುಕಿಸಿದೆ.
ಮಾರ್ಚ್ 16ನೇ ತಾರೀಕಿನಿಂದ 80 ದಿನಕ್ಕೂ ಹೆಚ್ಚು ಕಾಲ ನಿತ್ಯ ಪರಿಷ್ಕರಣೆ ಆಗುತ್ತಿರಲಿಲ್ಲ. ಜತೆಗೆ ಲಾಕ್ ಡೌನ್ ಅವಧಿಯಲ್ಲಿ ಸರ್ಕಾರದಿಂದ ದೊಡ್ಡ ಮಟ್ಟದಲ್ಲಿ ಅಬಕಾರಿ ಸುಂಕವನ್ನು ಏರಿಸಲಾಯಿತು. ಇದರಿಂದ ಬೇಡಿಕೆ ಕಡಿಮೆ ಆಗಿ, ತೈಲ ಮಾರ್ಕೆಟಿಂಗ್ ಕಂಪೆನಿಗಳು ನಷ್ಟ ಅನುಭವಿಸಿವೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೈನಂದಿನ ಬೆಲೆ ಪರಿಷ್ಕರಣೆಗೆ ಮರುಚಾಲನೆ ನೀಡಿರುವ ಪರಿಣಾಮವಾಗಿ,ದೇಶದಲ್ಲಿ ಸತತವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡುಬರುತ್ತಿದೆ.
 ಜೂ.7 ರಿಂದ ಆರಂಭವಾಗಿ 9 ದಿನಗಳಿಂದ ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ 4.52 ರೂ., ಡೀಸೆಲ್‌ ಬೆಲೆ 4.64 ರೂ. ಹೆಚ್ಚಿದೆ. ಬೆಂಗಳೂರಿನಲ್ಲಿ ಎರಡೂ ಇಂಧನ ತೈಲಗಳ ಬೆಲೆ ಕ್ರಮವಾಗಿ 4.68 ರೂ., 4.43 ರೂ. ಏರಿದೆ.

 ನವದೆಹಲಿ
ಪೆಟ್ರೋಲ್: 75.78 ರೂ.(62 ಪೈಸೆ ಏರಿಕೆ)
ಡೀಸೆಲ್: 74.03 ರೂ.(64 ಪೈಸೆ. ಏರಿಕೆ)

 ಮುಂಬೈ
ಪೆಟ್ರೋಲ್: 82.70 ರೂ.(62 ಪೈಸೆ ಏರಿಕೆ)
ಡೀಸೆಲ್: 72.64 ರೂ.(64 ಪೈಸೆ. ಏರಿಕೆ)

 ಕೋಲ್ಕತ್ತಾ
ಪೆಟ್ರೋಲ್: 77.64 ರೂ.(62 ಪೈಸೆ ಏರಿಕೆ)
ಡೀಸೆಲ್: 69.80 ರೂ(64 ಪೈಸೆ. ಏರಿಕೆ)

 ಚೆನ್ನೈ
ಪೆಟ್ರೋಲ್: 79.53 ರೂ.(62 ಪೈಸೆ ಏರಿಕೆ)
ಡೀಸೆಲ್: 72.18 ರೂ.(64 ಪೈಸೆ. ಏರಿಕೆ)

ರಾಜ್ಯ ರಾಜಧಾನಿ ಬೆಂಗಳೂರು
ಪೆಟ್ರೋಲ್: 78.23 ರೂ.(62 ಪೈಸೆ ಏರಿಕೆ)
ಡೀಸೆಲ್:70.39 ರೂ(64 ಪೈಸೆ. ಏರಿಕೆ)

ಮಂಗಳೂರ
ಪೆಟ್ರೋಲ್‌ ಬೆಲೆ ಲೀ.ಗೆ 77.52 ರೂ.
ಡೀಸೆಲ್‌ ಬೆಲೆ ಲೀ.ಗೆ 69.70 ರೂ
ಉಡುಪಿ
ಪೆಟ್ರೋಲ್ 77.76 ರೂ.
ಡೀಸೆಲ್ 69.92 ರೂ. ಆಗಿತ್ತು.