ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಜಿಟಲ್ ಜೀವಿತ ಪ್ರಮಾಣಪತ್ರ (ಡಿಎಲ್.ಸಿ.) ಉತ್ತೇಜನಕ್ಕಾಗಿ ಎರಡು ದಿನಗಳ ಅಭಿಯಾನ ನೆನ್ನೆ ಬೆಂಗಳೂರಿನಲ್ಲಿ ಪ್ರಾರಂಭವಾಯಿತು.
ಇದು ಡಿಎಲ್.ಸಿಯನ್ನು ಜನಪ್ರಿಯಗೊಳಿಸಲು ಭಾರತ ಸರ್ಕಾರದ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆಯು ಭಾರತೀಯ ಸ್ಟೇಟ್ ಬ್ಯಾಂಕ್ ಮತ್ತು ವಿವಿಧ ಪಿಂಚಣಿದಾರರ ಸಂಘಗಳ ಸಹಯೋಗದೊಂದಿಗೆ ದೇಶಾದ್ಯಂತ 37 ಕೇಂದ್ರಗಳಲ್ಲಿ ಪ್ರಾರಂಭಿಸಿದ ರಾಷ್ಟ್ರವ್ಯಾಪಿ ಅಭಿಯಾನದ ಒಂದು ಭಾಗವಾಗಿದೆ.
PM Kisan ಲಾಭಾರ್ಥಿಗಳಿಗೆ ಬಂಪರ್..ನವೆಂಬರ್ 30ರಂದು ರೈತರ ಖಾತೆಗೆ ಬೀಳಲಿದೆ ಪಿಎಂ ಕಿಸಾನ್ ಹಣ
ಮೈಸೂರು ಬ್ಯಾಂಕ್ ವೃತ್ತದ ಬಳಿಯ ಎಸ್.ಬಿ.ಐ. ಸಂಕೀರ್ಣದಲ್ಲಿ ಆಯೋಜಿಸಲಾದ ಅಭಿಯಾನದಲ್ಲಿ, ಪಿಂಚಣಿದಾರರಿಗೆ ತಮ್ಮ ಮೊಬೈಲ್ ಫೋನ್ ಗಳಲ್ಲಿ ಮುಖ ದೃಢೀಕರಣ (ಫೇಸ್ ಅಥೆಂಟಿಕೇಶನ್) ಜೀವನ ಪ್ರಮಾಣ ಆನ್ವಯಿಕವನ್ನು ಡೌನ್ಲೋಡ್ ಮಾಡುವುದು ಮತ್ತು ಆನ್ ಲೈನ್ ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಪುನರ್ ಮನನ ಮಾಡಲಾಯಿತು.
ಪಿಂಚಣಿದಾರರು ವೆಬ್ ಆಧಾರಿತ ಅಥವಾ ಮೊಬೈಲ್ ಫೋನ್ ಆಧಾರಿತ ಆಪ್ ಬಳಸಿ ಡಿಜಿಟಲ್ ಜೀವಿತ ಪ್ರಮಾಣಪತ್ರವನ್ನು jeevanpramaan.gov.in ಪಡೆಯಬಹುದು. ಇದು ಲಕ್ಷಾಂತರ ಪಿಂಚಣಿದಾರರಿಗೆ, ವಿಶೇಷವಾಗಿ ಹೆಚ್ಚು ವಯಸ್ಸಾದವರಿಗೆ, ಒಂದು ಬಟನ್ ಕ್ಲಿಕ್ ನಲ್ಲಿ ಜೀವನ ಪ್ರಮಾಣಪತ್ರವನ್ನು ಸಲ್ಲಿಸಲು ಸಹಾಯ ಮಾಡುತ್ತದೆ. ಈ ಮೊದಲು, ಪಿಂಚಣಿದಾರರು ಭೌತಿಕ ರೂಪದಲ್ಲಿ ಜೀವಿತ ಪ್ರಮಾಣಪತ್ರ ನೀಡಲು ಬ್ಯಾಂಕುಗಳ ಹೊರಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು.
ಪಿಎಂ ಕಿಸಾನ್ ಯೋಜನೆಯಿಂದ ಶೇ 67 ರಷ್ಟು ರೈತರು ಔಟ್
ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಇಲಾಖೆಯ ನಿರ್ದೇಶಕ (ಪಿಂಚಣಿದಾರರ ಕಲ್ಯಾಣ) ಶ್ರೀ ರುಚಿರ್ ಮಿತ್ತಲ್ ಮತ್ತು ಎಸ್.ಬಿಐನ ಹಿರಿಯ ಅಧಿಕಾರಿಗಳು ಪಿಂಚಣಿದಾರರನ್ನುದ್ದೇಶಿಸಿ ಭಾಷಣ ಮಾಡಿದರು ಮತ್ತು ಅವರೊಂದಿಗೆ ಸಂವಾದ ನಡೆಸಿದರು. ಅಭಿಯಾನದ ಭಾಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಹ ಆಯೋಜಿಸಲಾಗಿತ್ತು. ವಿವಿಧ ಭಾಗಗಳಿಂದ ಸುಮಾರು 1೦೦ ಪಿಂಚಣಿದಾರರು ಭಾಗವಹಿಸಿದ್ದರು.