15 ದಿನಗಳ ಕಾಲ ಕರ್ನಾಟಕ ಸಂಪೂರ್ಣವಾಗಿ ಕಠಿಣ ಲಾಕ್ಡೌನ್ ಜಾರಿ ಆಗಲಿದೆ.ಸಿಎಂ ನೇತೃತ್ವದ ಸಭೆಯ ನಂತರ ಲಾಕ್ಡೌನ್ ತೀರ್ಮಾನ ಮಾಡಲಾಗಿದೆ, ಪರಿಸ್ಥಿತಿ ಕೈ ಮೀರಿ ಹೋದ ಕಾರಣ ಈ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಕೊರೊನ್ ಹೆಮ್ಮಾರಿ ತನ್ನ ತಾಂಡವ ರೂಪ ಪ್ರದರ್ಶಿಸುತ್ತಿದೆ. ಬಡವರ ಪರಿಸ್ಥಿತಿ ಹೇಳತಿರದು, ಕೊರೊನ್ ರೋಗಕ್ಕೆ ಹೆದರಿ ಮನೆ ಒಳಗೆ ಇರಬೇಕು ಅಥವಾ ಹೊಟ್ಟೆ ಪಾಡಿಗಾಗಿ ಮನೆ ಹೊರಗೆ ಹೋಗಿ ದುಡಿಯಬೇಕು ಎಂಬ ಪೇಚಿಗೆ ಬಡಜನರು ಸಿಲುಕಿ ಕೊಂಡಿದ್ದಾರೆ, ಇದರ ಮಧ್ಯೆದಲ್ಲಿ ಸಾವಿನ ಪ್ರಮಾಣವು ದಿನೇ ದಿನೇ ಹೆಚ್ಚಾಗುತ್ತಿದೆ.
*ಆದರೆ ಸರ್ಕಾರ ಸಧ್ಯದ ಪರಿಸ್ಥಿತಿಯನ್ನು ಹಾಗೇ ಮುಂದೆ ಬರಲಿರುವ ಕೊರೊನ್ ರೋಗದ 3ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕೋವಿಡ್ ನ್ನು ಸಮರ್ಥವಾಗಿ ಎದುರಿಸುವ ಸಲುವಾಗಿ ಸಂಪೂರ್ಣ ಲಾಕ್ಡೌನ್ ಮೊರೆ ಹೋಗಿದೆ. ಮನೆಯಿಂದ ಯಾರು ಹೊರಗೆ ಬರದಂತೆ ಬಿಗಿ ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ.
*ದಿನನಿತ್ಯ ಅವಶ್ಯವಿರುವ ಸಾಮಾನುಗಳನ್ನು ಖರೀದಿಸಲು ಬೆಳಗ್ಗೆ 4 ಗಂಟೆಗಳ ಅವಕಾಶವಿರಲಿದ್ದರೂ ತರಕಾರಿ, ಹಾಲು, ಹಣ್ಣು, ದಿನಸಿ ಖರೀದಿಗೂ ಖಡಕ್ ನಿಯಮಗಳು ಜಾರಿಯಾಗಲಿವೆ, ಸರ್ಕಾರದಿಂದ 15 ದಿನಗಳ ಲಾಕ್ಡೌನ್ ಗೆ ಮಾರ್ಗಸೂಚಿಗಳು ಪ್ರಕಟಗೊಳ್ಳಲಿವೆ.
ಲಾಕ್ಡೌನ್ ಏಕೆ ?
ಕೊರೊನ್ ಸಾವಿನ ಪ್ರಮಾಣ ಹಾಗೂ ಕೊರೊನ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.ಇದನ್ನು ತಡೆಗಟ್ಟುವ ಸಲುವಾಗಿ ಈ ಲಾಕ್ಡೌನ್ ಜಾರಿಯಾಗಲಿದೆ. ಈ ಲಾಕ್ಡೌನ್ ನಲ್ಲಿ ಅತಿ ಹೆಚ್ಚು ಜನರಿಗೆ ಲಸಿಕೆ ಒದಗಿಸಿ ಮುಂಬರುವ ಕೊರೊನ್ ಮೂರನೇ ಅಲೆಗೆ ಜನರ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಾರಣದಿಂದ ಈ ನಿರ್ಧಾರ.