News

ಎರೆಹುಳು ಗೊಬ್ಬರ ತಯಾರಿಕೆ ತರಬೇತಿಗಾಗಿ ಅರ್ಜಿಗಳು ಆಹ್ವಾನ

20 January, 2021 10:45 AM IST By:

ಕೃಷಿ ನಮ್ಮ ದೇಶದ ಮುಖ್ಯ ಕಸುಬು, ಇಂದಿನ ದಿನಗಳಲ್ಲಿ ನಾವು ಬಳಸುತ್ತಿರುವ ಅಂತಹ ಹೈಬ್ರಿಡ್ ತಳಿಗಳು, ರಾಸಾಯನಿಕ ಗೊಬ್ಬರ, ರಾಸಾಯನಿಕ ಸಿಂಪರಣೆ ಹಾಗೂ ಹಲವಾರು ಅಂಶಗಳಿಂದ ನಾವು ನಮ್ಮ ಹೊಲದ ಫಲವತ್ತತೆಯನ್ನು ತುಂಬಾ ಕಳೆದುಕೊಂಡಿದ್ದೇವೆ, ಹಾಗಾಗಿ ನಮ್ಮ ಭೂಮಿಗಳಿಗೆ ನಾವು ನಮ್ಮ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮಹತ್ವವಾದ ಕೆಲಸ.

 ಅದಕ್ಕಾಗಿ ಸಾವಯುವ ರೂಪದಲ್ಲಿ ಸಗಣಿ ಗೊಬ್ಬರ, ಎರೆಹುಳು ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಇತ್ಯಾದಿ ಹಲವಾರು ಅಂಶಗಳಿವೆ, ಆದರೆ ಅವುಗಳನ್ನು ಹೇಗೆ ಉಪಯೋಗಿಸಬಹುದು ಎಂಬುದರ ಬಗ್ಗೆ ನಿಮಗೆ ಮಾಹಿತಿ ಇಲ್ಲವೇ? ಹಾಗಾದರೆ ಬನ್ನಿ ನಿಮಗಿಲ್ಲಿ ಒಂದು ಸುವರ್ಣ ಅವಕಾಶವಿದ್ದು ಎರೆಹುಳ ಗೊಬ್ಬರ ತಯಾರಿಕೆ ಬಗ್ಗೆ ಒಂದು ಉಚಿತ ತರಬೇತಿ ಇದೆ,ಆಸಕ್ತರು ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿ ವಿನಂತಿ.

 

ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಹೈನುಗಾರಿಕೆ ಬಗ್ಗೆ ಉಚಿತ ತರಬೇತಿಯನ್ನು ನೀಡಲಾಗುವುದು. ತರಬೇತಿ ಜನವರಿ 25 ರಿಂದ ಫೆಬ್ರವರಿ 3 ನೇ ತಾರೀಖಿನ ವರೆಗೆ ನಡೆಯಲಿದೆ.

 

ಅರ್ಹತೆ :

- ಮೂಲತಃ ರಾಮನಗರ ಜಿಲ್ಲೆಯವರಾಗಿರಬೇಕು

- 18ರಿಂದ 45 ವಯೋಮಿತಿಯೊಳಗಿರಬೇಕು

- ಬಿಪಿಎಲ್ ಕಾರ್ಡ್ ಹಾಗೂ 4 ಫೋಟೋಗಳನ್ನು ನೀಡಬೇಕು

 ಹಾಗೂ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ಗಳಾದ 8105185202 ಹಾಗೂ 9972381707 ಗೆ ಸಂಪರ್ಕಿಸಿ.