News

ನವೆಂಬರ್ 3 ರಿಂದ 30 ರವರೆಗೆ ಮೀನುಗಾರಿಕಾ ಕಾಲೇಜಿನಲ್ಲಿ ಉಚಿತ ತರಬೇತಿ

21 October, 2020 4:43 PM IST By:

ಮತ್ಸ್ಯ ಉದ್ಯಮ ಮತ್ತು ಸಂಶೋಧನೆಯಲ್ಲಿ ತೊಡಗಬೇಕೆನ್ನುವವರಿಗೆ ಇಲ್ಲಿದೆ ಸಂತಸದ ಸುದ್ದಿ. ಸೂಕ್ತ ತರಬೇತಿಯೊಂದಿಗೆ ಉದ್ಯಮ ಮತ್ತು ಸಂಶೋಧನೆ ತೊಡಗಿಸಿಕೊಳ್ಳಲು ಬಯಸುವವರಿಗೆ  ಉಚಿತವಾಗಿ ವಿಶೇಷ  ತರಬೇತಿ ಆಯೋಜಿಸಲಾಗಿದೆ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ನವೆಂಬರ್ 3 ರಿಂದ 30 ರವರೆಗೆ ಮತ್ಸ್ಯ ಆರೋಗ್ಯ ತಪಾಸಣೆ ಮತ್ತು ಮತ್ಸ್ಯ-ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಾಗಾರ (ಅಕ್ವಾಕ್ಲೀನಿಕ್ ಅಂಡ್ ಅಕ್ವಾಪ್ರೆನ್ಯೂರ್ಶಿಪ್ ಡೆವಲಪ್ಮೆಂಟ್ ಪ್ರೋಗ್ರಾಂ) ಆಯೋಜಿಸುತ್ತಿದೆ. ಈ ತರಬೇತಿಗೆ ಅರ್ಹ ಮತ್ತು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೈದ್ರಾಬಾದಿನಲ್ಲಿರುವ ಭಾರತ ಸರ್ಕಾರದ ರಾಷ್ಟ್ರೀಯ ಕೃಷಿಯೇತರ ವಿಸ್ತರಣೆ ನಿರ್ವಹಣಾ ಸಂಸ್ಥೆ ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಗಳ ಸಹಯೋಗದೊಂದಿಗೆ ಕಾರ್ಯಾಗಾರ ನಡೆಯಲಿದೆ.

ರಾಜ್ಯ/ ಕೇಂದ್ರದ ಕೃಷಿ/ ಮೀನುಗಾರಿಕೆ/ ಪಶುವೈದ್ಯಕೀಯ ವಿಶ್ವವಿದ್ಯಾಲಯಗಳು ಅಥವಾ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ಕೇಂದ್ರಿಯ ಮೀನುಗಾರಿಕೆ ಶಿಕ್ಷಣ ಸಂಸ್ಥೆಯಿಂದ ಮೀನುಗಾರಿಕೆಯಲ್ಲಿ ಪದವಿ/ ರಾಜ್ಯ ಕೃಷಿ ವಿಶ್ವವಿದ್ಯಾಲಯದಿಂದ ಮೀನುಗಾರಿಕೆಯಲ್ಲಿ ಡಿಪೆÇ್ಲೀಮಾ/ ಜೀವಶಾಸ್ತ್ರದಲ್ಲಿ ಪದವಿ/ ಜಲಕೃಷಿ, ಕೈಗಾರಿಕಾ ಮೀನುಗಾರಿಕೆ, ಕಡಲ ಜೀವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಒಟ್ಟು 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇದೇ ತಿಂಗಳ ಅಕ್ಟೋಬರ್ 31 ರೊಳಗೆ ಅರ್ಜಿ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ತರಬೇತಿ ಅವಧಿಯಲ್ಲಿ ಉಚಿತ ಊಟ, ವಸತಿ ಹಾಗೂ ಪ್ರಯಾಣ ಭತ್ಯೆಯನ್ನು ಆಯಾ ನಿವಾಸದಿಂದ 2000 ರೂಪಾಯಿಗೆ ಮೀರದಂತೆ ಪ್ರಯಾಣದ ಚೀಟಿ ಸಲ್ಲಿಕೆಯ ಮೂಲಕ ಒದಗಿಸಲಾಗುವುದು.

ಅಭ್ಯರ್ಥಿಗಳು ಅರ್ಜಿಗಳನ್ನು ವೆಬ್ಸೈಟ್ www.cofm.edu.in ನಿಂದ ಡೌಲ್ನೋಡ್ ಮಾಡಿಕೊಳ್ಳಬೇಕು. ಭರ್ತಿ ಮಾಡಿದ ಅರ್ಜಿಯನ್ನು ಡೀನ್ ಮೀನುಗಾರಿಕಾ ಮಹಾವಿದ್ಯಾಲಯ, ಕಂಕನಾಡಿ ಅಂಚೆ, ಮಂಗಳೂರು, 575002 ರವರಿಗೆ ವೈಯಕ್ತಿವಾಗಿ ಅಥವಾ ಈ ಮೇಲ್ deanfisheries@gmail.com ನಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824 2248936 (ಡೀನ್/ ನೋಡಲ್ ಕಛೇರಿ) ಅಥವಾ ಮೊ: 099169 24084 (ಸಂಯೋಜಕರು) ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.