News

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 45 ದಿನಗಳ ಕಾಲ ಉಚಿತ ತರಬೇತಿ

29 November, 2020 5:31 PM IST By:

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅಭ್ಯರ್ಥಿಗಳಿಗೆ ಸಂತಸದ ಸುದ್ದಿ. ಬ್ಯಾಂಕಿಂಗ್, ರೈಲ್ವೆ, ನೀಟ್, ಎಫ್.ಡಿಸಿ ಸೇರಿದಂತೆ ಇತರ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು.

ಹೌದು ಯಾದಗಿರಿ ನಗರದ ಆರ್.ವಿ.ವಿದ್ಯಾ ಸಂಸ್ಥೆಯಲ್ಲಿ ದಿ. ವೀರಭದ್ರಪ್ಪ ದೇವರಕಲ್ ಪ್ರತಿಷ್ಠಾನದಿಂದ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತವಾಗಿ 45 ದಿನಗಳ ತರಬೇತಿ ನೀಡಲಾಗುವುದು.

ಬ್ಯಾಂಕಿಂಗ್‌, ರೈಲ್ವೆ, ನೀಟ್‌, ಎಫ್‌ಡಿಸಿ, ಎಫ್‌ಡಿಎ ಸೇರಿದಂತೆ ಕೆಪಿಎಸ್‌ಸಿ, ಯುಪಿಸಿಎಸ್‌ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ತರಬೇತಿ ನೀಡಲಾಗುವುದು. ಇದು ನಿರಂತರವಾಗಿ ನಡೆಯಲಿದೆ. ನವೆಂಬರ್ 30ರಂದು ತರಬೇತಿ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿದೆ.

ದಿ.ವೀರಭದ್ರಪ್ಪ ದೇವರಕಲ್‌ ಅವರ ಹೆಸರಿನಲ್ಲಿ ಉಚಿತ ವಾಚನಾಲಯ ತೆರೆಯಲಾಗಿದೆ. ವಿದೇಶಗಳಲ್ಲಿ ಉದ್ಯೋಗ ಪಡೆಯುವ ಪುಸ್ತಕಗಳು ಇವೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳು ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಂಸ್ಥೆಯ ಪ್ರಾಚಾರ್ಯ ಸುರೇಶ್ ಹವಾಲ್ದಾರ್ ತಿಳಿಸಿದ್ದಾರೆ

ತರಬೇತಿ ಪಡೆಯಲಿಚ್ಚಿಸುವವರು ಹೆಚ್ಚಿನ ಮಾಹಿತಿಗಾಗಿ 96867 70005ಗೆ ಸಂಪರ್ಕಿಸಬಹುದು.