News

ನಿರುದ್ಯೋಗಿ ಯುವತಿಯರಿಗಾಗಿ 30 ದಿನಗಳ ಉಚಿತ ಹೊಲಿಗೆ ತರಬೇತಿ

19 November, 2020 8:38 AM IST By:

ಕೆನರಾ ಬ್ಯಾಂಕ್   ಎ.ಡಿ.ಪೈ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ರಾಮನಗರ ಜಿಲ್ಲೆಯ ಬಿಡದಿ ತಾಲೂಕಿನ ನಿರುದ್ಯೋಗಿ ಯುವತಿಯರಿಗಾಗಿ 30 ದಿನಗಳ ಉಚಿತ ಹೊಲಿಗೆ ತರಬೇತಿಯನ್ನು ಆಯೋಜಿಸಲಾಗಿದೆ.  ಕನಿಷ್ಠ 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18 ರಿಂದ 45 ವಯೋಮಾನದವರಿರಬೇಕು.

 ಊಟ ಹಾಗೂ ವಸತಿ ಸೌಲಭ್ಯ ಉಚಿತ. ತರಬೇತಿಯ ಮುಖ್ಯ ಉದ್ದೇಶ ಯುವತಿಯರು ಸ್ವ-ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲತೆ ಸಾಧಿಸುವುದಾಗಿರುತ್ತದೆ. ಆಸಕ್ತರು ಇತ್ತೀಚಿನ 3 ಭಾವಚಿತ್ರಗಳು, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಹಾಗೂ ಅಂಕ ಪಟ್ಟಿಯ ನಕಲು ಪ್ರತಿಯೊಂದಿಗೆ  ಹೆಸರು ನೋಂದಾಯಿಸಬಹುದು.

ಕೆನರಾ ಬ್ಯಾಂಕ್ ಎ.ಡಿ.ಪೈ ಅಭಿವೃದ್ಧಿ ಸಂಸ್ಥೆ ಬೆಂಗಳೂರು –ಮೈಸೂರು ಹೆದ್ದಾರಿ ಯ ವಾಜರಹಳ್ಳಿ, ಬಿಡದಿ. ಹೆಚ್ಚಿನ ಮಾಹಿತಿಗಾಗಿ ತರಬೇತಿ ನಿರ್ದೇಶಕರು: 9481340614 ಸಂಯೋಜಕರು: 9686269653 ಗೆ ಸಂಪರ್ಕಿಸಲು ಕೋರಲಾಗಿದೆ.