News

ಬಂಪರ್‌ ನ್ಯೂಸ್‌: ಜೂನ್‌ ತಿಂಗಳಿನಿಂದ ಮಹಿಳೆಯರಿಗೆ ಸಿಗಲಿದೆ ಫ್ರೀ ಸ್ಮಾರ್ಟ್‌ ಫೋನ್‌..! ಎಲ್ಲಿ ಗೊತ್ತಾ..?

08 May, 2022 2:32 PM IST By: Maltesh

 ಮೊಬೈಲ್‌ಗಳು ಅಂದ್ರೆ  ಯಾರೀಗೆ ತಾನೆ ಇಷ್ಟ ಇಲ್ಲ ಹೇಳಿ.. ಇವತ್ತಿನ ಈ ಕಾಲದಲ್ಲಿ ಮೊಬೈಲ್ ಜಮಾನ ನಡೆದಿದೆ. ಎಲ್ಲಿದ್ದರು ಮೊಬೈಲ್‌ ಹಾಗೂ ಎಲ್ಲದಕ್ಕೂ ಮೊಬೈಲ್‌ ಅನ್ನುವಂತ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಅದರಂತೆಯೇ ದೈನಂದಿನ ಜೀವನದಲ್ಲಿ ಅಷ್ಟರ ಮಟ್ಟಿಗೆ ಮೊಬೈಲ್‌ಗಳು ಹಾಸು ಹೊಕ್ಕಾಗಿವೆ. ಸದ್ಯ ರಾಜಸ್ಥಾನದ ಮಹಿಳೆಯರಿಗೆ ಫ್ರೀ ಮೊಬೈಲ್‌ ದೊರೆಯುತ್ತಿದ್ದು, ಅದು ಹೇಗೆ ಎಂಬುದನ್ನು ತಿಳಿಯಲು ಈ ಲೇಖನ ಓದಿ.

ಸ್ವಂತ ಉದ್ದಿಮೆ ಆರಂಭಿಸುವ ಯೋಚನೆಯಲ್ಲಿದ್ದಿರಾ..? ಹಾಗಾದ್ರೆ ಈ ಉದ್ದಿಮೆ ಆರಂಭಿಸಿ ಸರ್ಕಾರವೇ ನೀಡುತ್ತೆ ಲೋನ್‌.

ಕಳೆದ ರಾಜ್ಯ ಬಜೆಟ್‌ನಲ್ಲಿ ರಾಜಸ್ಥಾನ ಸರ್ಕಾ ರಾಜ್ಯದ ಮಹಿಳೆಯರಿಗೆ ಮೊಬೈಲ್‌ಗಳು ನೀಡುವುದಾಗಿ ಘೋಷಿಸಿತ್ತು. ಅದರಂತೆಯೇ ಇದೀಗ ಸಮಯ ಬಂದಿದ್ದು,  ಡಿಜಿಟಲ್ ಇಂಡಿಯಾ ಯೋಜನೆಯಡಿ ಇದೇ ಜೂನ್‌ ತಿಂಗಳಿನಿಂದ ಮಹಿಳೆಯರಿಗೆ ಮೊಬೈಲ್‌ ನೀಡುವುದಾಗಿ ರಾಜಸ್ಥಾನ್‌ ಸರ್ಕಾರ ತಿಳಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ ಮತ್ತು ಸಮೂಹ ಸಂವಹನ ಇಲಾಖೆಯು ಉಚಿತ ಸ್ಮಾರ್ಟ್‌ಫೋನ್ ವಿತರಣೆ ಯೋಜನೆಗೆ ಕರಡನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿದ್ದು, ಮೊಬೈಲ್‌ ವಿತರಣೆಗಾಗಿ ಟೆಂಡರ್‌ ಕರೆ ನೀಡಲಾಗುವುದು ಎನ್ನಲಾಗಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಈ ಸ್ಮಾರ್ಟ್‌ಫೋನ್‌ಗಳನ್ನು ರಾಜ್ಯದ 1.33 ಕೋಟಿ ಚಿರಂಜೀವಿ ಕಾರ್ಡ್‌ ಹೊಂದಿರುವ ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ನೀಡಲಾಗುವುದು. ಬಜೆಟ್ ಘೋಷಣೆಯಂತೆ ಮಹಿಳೆಯರಿಗೆ ಸ್ಮಾರ್ಟ್ ಫೋನ್, ಇಂಟರ್ ನೆಟ್ ಸೌಲಭ್ಯ ಕಲ್ಪಿಸಲಾಗುವುದು ಎನ್ನುತ್ತಾರೆ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಇಲಾಖೆಯ ಆಯುಕ್ತ ಸಂದೇಶ್ ನಾಯಕ್.

ಮಹತ್ವದ ನ್ಯೂಸ್‌: ಕ್ರೆಡಿಟ್‌ ಕಾರ್ಡ್‌ಗಳಿಗೆ ಹೊಸ ನಿಯಮ ತಂದ RBI..ಭಾರೀ ಬದಲಾವಣೆ

ನೌಕರರಿಗೆ Good News! EPFO ಉದ್ಯೋಗಿಗಳ ಖಾತೆಗೆ ಶೀಘ್ರದಲ್ಲೆ ಬರಲಿದೆ ಬಡ್ಡಿ ಹಣ! ಈಗಲೇ ಚೆಕ್‌ ಮಾಡಿ

ಈ ಸ್ಮಾರ್ಟ್‌ ಫೋನ್‌ಗಳು 3 ವರ್ಷದ ವರೆಗೆ  ಉಚಿತ ಇಂಟರ್ನೆಟ್ ಸಂಪರ್ಕ ಮತ್ತು ಮೂರು ವರ್ಷಗಳವರೆಗೆ ಉಚಿತ ಕರೆಯನ್ನು ಹೊಂದಿರುತ್ತದೆ. ಜೊತೆಗೆ  ತಿಂಗಳಿಗೆ 5 ರಿಂದ 10 GB ಇಂಟರ್ನೆಟ್ ಡೇಟಾವನ್ನು ಮಾತ್ರ ನೀಡಲಾಗುತ್ತದೆ.

ಮಾಹಿತಿಯ ಪ್ರಕಾರ, ಈ  ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ತಯಾರಿಸಲ್ಪಡುತ್ತವೆ ಮತ್ತು 5.5 ಇಂಚಿನ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಫೋನ್ ಕನಿಷ್ಠ ಕ್ವಾಡ್-ಕೋರ್ 1.2- 1.6 GHz ಪ್ರೊಸೆಸರ್, 2 GB RAM, 32 GB ಮೆಮೊರಿ, 3200 mAh ಬ್ಯಾಟರಿ, ಡ್ಯುಯಲ್ ಸಿಮ್ ಮತ್ತು ಕನಿಷ್ಠ 8-ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರುತ್ತದೆ. ಇದರಲ್ಲಿ ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳ ಅರ್ಜಿಗಳನ್ನು ಮೊದಲೇ ಅಳವಡಿಸಲಾಗುತ್ತದೆ. ಈ ಮೂಲಕ ಮಹಿಳೆಯರು ಸರಕಾರದ ಯೋಜನೆಗಳ ಮಾಹಿತಿ ಪಡೆಯಬಹುದಾಗಿದೆ.

ಸ್ಮಾರ್ಟ್ಫೋನ್ ಕ್ಲೈಮ್ ಮಾಡಲು ಅಗತ್ಯವಾದ ದಾಖಲೆಗಳು

ಮುಖ್ಯಮಂತ್ರಿ ಡಿಜಿಟಲ್ ಸೇವಾ ಯೋಜನೆ / ಉಚಿತ ಸ್ಮಾರ್ಟ್‌ಫೋನ್ ಯೋಜನೆಯ ಪ್ರಯೋಜನಗಳನ್ನು ಪಡೆಯಲು, ಮಹಿಳೆಯರಿಗೆ ಕೆಲವು ಪ್ರಮುಖ ದಾಖಲೆಗಳು ಬೇಕಾಗುತ್ತವೆ, ಅವುಗಳು ಈ ಕೆಳಗಿನಂತಿವೆ-

ಆಧಾರ್ ಕಾರ್ಡ್

ಕುಟುಂಬ ಪಡಿತರ ಚೀಟಿ

SSO ID

ಆಧಾರ್‌ನಿಂದ ಮೊಬೈಲ್ ಲಿಂಕ್ ಮಾಡಲಾಗಿದ ಚಿರಂಜೀವಿ ಕಾರ್ಡ್

SBI ಅಲರ್ಟ್‌:  ಈ ಸಂಖ್ಯೆಗಳಿಂದ ಕರೆ ಬಂದರೆ, ಯಾವುದೇ ಕಾರಣಕ್ಕೆ ಪ್ರತಿಕ್ರಿಯಿಸ ಬೇಡಿ ಎಂದ SBI

SBI ಹಾಗೂ Axis ಬ್ಯಾಂಕ್‌ ಗ್ರಾಹಕರಿಗೆ ಬಿಗ್‌ ಶಾಕ್..! ಬಡ್ಡಿ ದರಗಳಲ್ಲಿ ಹೆಚ್ಚಳ

ಉಚಿತ ಸ್ಮಾರ್ಟ್‌ಫೋನ್ ಪಡೆಯಲು ನೋಂದಾಯಿಸುವುದು ಹೇಗೆ

ಡಿಜಿಟಲ್ ಇಂಡಿಯಾ ಯೋಜನೆಗೆ ಅರ್ಜಿ ಸಲ್ಲಿಸಲು, ಮೊದಲು, ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಅದರ ಅಧಿಕೃತ ವೆಬ್‌ಸೈಟ್‌ನ ಮುಖಪುಟಕ್ಕೆ ಭೇಟಿ ನೀಡಬೇಕು .

ಈ ಪುಟಕ್ಕೆ ಭೇಟಿ ನೀಡಿದ ನಂತರ ನೀವು ಡಿಜಿಟಲ್ ಇಂಡಿಯಾ ಸ್ಕೀಮ್‌ನ ಆಯ್ಕೆಯನ್ನು ಪಡೆಯುತ್ತೀರಿ, ಅದನ್ನು ನೀವು ಕ್ಲಿಕ್ ಮಾಡಬೇಕು,

ಕ್ಲಿಕ್ ಮಾಡಿದ ನಂತರ, ಹೊಸ ಪುಟವು ನಿಮ್ಮ ಮುಂದೆ ತೆರೆಯುತ್ತದೆ, ಅಲ್ಲಿ ನೀವು ಅರ್ಜಿ ನಮೂನೆಯನ್ನು ಕಾಣಬಹುದು.

ಈಗ ನೀವು ಈ ಅರ್ಜಿ ನಮೂನೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡಬೇಕು, 

ವಿನಂತಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು

ಅಂತಿಮವಾಗಿ, ನೀವು ಸಲ್ಲಿಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ರಸೀದಿಯನ್ನು ಪಡೆಯಬೇಕು.

ಹೀಗೆ  ಮಹಿಳೆಯರು ಅರ್ಜಿ ಸಲ್ಲಿಸುವ ಮೂಲಕ ಈ ಯೋಜನೆಯಿಂದ ಪ್ರಯೋಜನ ಪಡೆಯಬಹುದು.

ವ್ಯಾಪಾರಿಗಳಿಗೆ ಗುಡ್‌ನ್ಯೂಸ್‌: Paytm ನೀಡ್ತಿದೆ 5 ಲಕ್ಷ ರೂ ಸಾಲ..! ಅರ್ಜಿ ಸಲ್ಲಿಕೆ ಹೇಗೆ

“ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್”- ಕಂದಾಯ ಸಚಿವ ಆರ್.ಅಶೋಕ್