ಲಿಂ. ಚಂದ್ರಶೇಖರ ಪಾಟೀಲ ರೇವೂರರವರ 64ನೇ ಜನ್ಮದಿನದ ಅಂಗವಾಗಿ ಚಂದ್ರಶೇಖರ ಪಾಟೀಲ್ ರೇವೂರ ಪ್ರತಿಷ್ಠಾನವು ಕಿಡ್ನಿ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಬಡಜನರಿಗೆ ನೆರವಾಗಲೆಂದು ಅಂತರ್‌ರಾಷ್ಟ್ರೀಯ ಮಟ್ಟದ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಲಾಗಿದೆ.
ಕಲ್ಯಾಣ ಕರ್ನಾಟಕದ ಭಾಗದಲ್ಲಿಯೇ ಪ್ರಪ್ರಥಮ ಬಾರಿಗೆ ಉಚಿತ ಡಯಾಲಿಸಿಸ್ ಕೇಂದ್ರ ಆರಂಭವಾಗಿದೆ. ನಗರದ ಸೇಡಂ ರಸ್ತೆಯ ವೀರಶೈವ ವಿದ್ಯಾರ್ಥಿ ನಿಲಯದ ಕಟ್ಟಡದಲ್ಲಿ ಆರಂಭಗೊಂಡಿರುವ ಈ ಡಯಾಲಿಸಿಸ್ ಕೇಂದ್ರವು ಐದು ಹಾಸಿಗೆಗಳ ಸೌಲಭ್ಯದ ಜೊತೆಗೆ ಅಮೆರಿಕ ಮತ್ತು ಜರ್ಮನಿಯ ಸಾಧನಗಳನ್ನು ಹೊಂದಿದೆ. ಉತ್ತಮ ನೀರಿನ ವ್ಯವಸ್ಥೆ ಮತ್ತು ಸುಸಜ್ಜಿತ ಕಟ್ಟಡವುಳ್ಳ ಈ ಕೇಂದ್ರದಲ್ಲಿ ನುರಿತ ತಜ್ಞರು, ವೈದ್ಯರು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುವರು.
ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಸಜ್ಜಿತ, ಆತ್ಯಾಧುನಿಕ ಮತ್ತು ಕಾಗದ ಮುಕ್ತ ಡಿಜಿಟಲೈಸ್ಡ್ ಸೌಲಭ್ಯಯುಳ್ಳ ಕೇಂದ್ರ ಇದಾಗಿದೆ. ಜಿಲ್ಲೆಯಲ್ಲಿ ಕಿಡ್ನಿ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲು ಹೆಣಗಾಡಬೇಕಿದೆ. ಕೆಲವೊಮ್ಮೆ ಸೊಲ್ಲಾಪುರ, ಹೈದರಾಬಾದ್ ತೆರಳಿ ಡಯಾಲಿಸಿಸ್‌ಗೆ ಒಳಾಗುವ ಪರಿಸ್ಥಿತಿ ಬರುತ್ತದೆ. ಆದ್ದರಿಂದ ಪ್ರತಿಷ್ಠಾನದ ಸದಸ್ಯರ ನೆರವು ಮತ್ತು ದೇಣಿಗೆ ಸಂಗ್ರಹ ಮೂಲಕದ 1 ಕೋಟಿ ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲಾಗಿದೆ ಎಂದು ಡಯಾಲಿಸಿಸ್ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ಶರಣು ಮಳಖೇಡಕರ್ ತಿಳಿಸಿದ್ದಾರೆ